Ad Widget .

ಸಿದ್ದರಾಮಯ್ಯ ಅವರು ಮುಗ್ದರಲ್ಲ, ಧೂರ್ತ…. ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಲ್ಹಾದ್​ ಜೋಶಿ ವಾಗ್ದಾಳಿ..!

ಸಮಗ್ರ ನ್ಯೂಸ್: ಸಿಎಂ ಸಿದ್ದರಾಮಯ್ಯ ವಿರುದ್ದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರು ಮುಗ್ದರಲ್ಲ, ಧೂರ್ತ ಎಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಹಿಜಾಬ್ ನಿಷೇಧವೇ ಆಗಿಲ್ಲ, ಹೀಗಿರುವಾಗ ಹಿಜಾಬ್ ಬ್ಯಾನ್ ಹಿಂಪಡೆಯುತ್ತೇವೆ ಅಂದರೆ ಅದಕ್ಕೆ ಅರ್ಥವಿಲ್ಲ. ಸಮವಸ್ತ್ರ ಸಂಹಿತೆ ಬಿಟ್ಟು ಹಿಜಾಬ್ ಧರಿಸಲು ಅವಕಾಶ ಕೊಡುತ್ತೇವೆ ಎಂದು ಹೇಳಿದರೆ, ಆಗ ಇನ್ನೊಬ್ಬರು ನಾವು ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ ಎನ್ನುತ್ತಾರೆ.

Ad Widget . Ad Widget .

ಸಿದ್ದರಾಮಯ್ಯನವರೇ ನೀವು ರಾಜ್ಯವನ್ನು ಏನು ಮಾಡುವುದಕ್ಕೆ ಹೊರಟಿದ್ದೀರಿ, ಸಮಾಜ ಒಡೆಯಲು ಅತ್ಯಂತ ತಲೆ ಕೆಟ್ಟವರ ತರಹ ಹೇಳಿಕೆ ಕೊಡುತ್ತಿದ್ದಿರೋ? ಸಮಾಜ ಒಡೆದು ವೋಟ್ ತೆಗೆದುಕೊಳ್ಳಬೇಕು ಎನ್ನುವುದು ನಿಮ್ಮ ಉದ್ದೇಶ ಎಂದು ಪ್ರಲ್ಹಾದ್​ ಜೋಶಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಪಕ್ಷ ಈಗ ಕರ್ನಾಟಕ, ಹಿಮಾಚಲ ಪ್ರದೇಶ, ತೆಲಂಗಾಣದಲ್ಲಿ ಮಾತ್ರ ಅಧಿಕಾರದಲ್ಲಿದೆ. ಇದು ನಿಮ್ಮ ಸ್ಥಿತಿ. ಇನ್ನು ನೀವು ಹೀಗೇ ಹುಚ್ಚು ಹುಚ್ಚಾಗಿ ಮಾತನಾಡಿದ್ರೆ, ಜನ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಸದ ಬುಟ್ಟಿಗೆ ಸೇರಿಸುತ್ತಾರೆ ನೆನಪಿಟ್ಟುಕೊಳ್ಳಿ ಎಂದು ಕಿಡಿಕಾರಿದರು.
ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರದ ವೈಫಲ್ಯತೆಯನ್ನು ಮುಚ್ಚಿಕೊಳ್ಳಲು ಇಂತಹ ವಿವಾದ ಹುಟ್ಟು ಹಾಕೋದೇ ನಿಮ್ಮ ಕೆಲಸವಾ? ನಾವೇನಾದರೂ ಹಿಜಾಬ್ ವಿಷಯ ಎತ್ತಿದ್ದೆವಾ? ಬಹುತೇಕ ಇಸ್ಲಾಂ ದೇಶಗಳಲ್ಲಿ ಹಿಜಾಬ್ ಇಲ್ಲ. ಸಿದ್ದರಾಮಯ್ಯನವರೇ, ನಿಮಗ್ಯಾಕೆ ಈ ಕೆಟ್ಟ ವಿಚಾರ. ಇದೆಲ್ಲ ನಿಮಗೆ ಗೊತ್ತಿಲ್ಲ ಅಂತಲ್ಲ. ಆದರೂ ಇಂತಹ ಹೇಳಿಕೆ ಕೊಡುತ್ತೀದ್ದೀರಿ ಎಂದರೆ ನೀವು ಮುಗ್ದ ಅಲ್ಲ, ಧೂರ್ತ. ಇದು ನನ್ನ ಗಂಭೀರ ಆರೋಪ ಎಂದು ಪ್ರಲ್ಹಾದ್​ ಜೋಶಿ ವಾಗ್ದಾಳಿ ನಡೆಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *