Ad Widget .

ಹನುಮ ಜಯಂತಿ ನಿಮಿತ್ತ ದೇವಸ್ಥಾನದಲ್ಲಿ ಕೊಟ್ಟಿದ್ದ ಪ್ರಸಾದ ತಿಂದು 200ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಸಮಗ್ರ ನ್ಯೂಸ್: ಹನುಮ ಜಯಂತಿ ನಿಮಿತ್ತ ದೇವಸ್ಥಾನದಲ್ಲಿ ಕೊಟ್ಟಿದ್ದ ಪ್ರಸಾದ ತಿಂದು 200ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಈ ಪೈಕಿ ಓರ್ವ ವೃದ್ಧೆ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ.

Ad Widget . Ad Widget .

ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದಿದೆ. ನಿನ್ನೆ ಹನುಮ ಜಯಂತಿ ನಿಮಿತ್ತ ನಗರದ ವೆಂಕಟರಮಣಸ್ವಾಮಿ ದೇಗುಲ, ಊರುಬಾಗಿಲು ಆಂಜನೇಯ ಸ್ವಾಮಿ ದೇಗುಲಗಳಲ್ಲಿ ಭಕ್ತರಿಗೆ ಪುಳಿಯೊಗರೆ, ಪಾಯಸ, ಲಡ್ಡುಗಳನ್ನು ಪ್ರಸಾದದ ರೂಪದಲ್ಲಿ ನೀಡಲಾಗಿತ್ತು. ಹೀಗೆ ಪ್ರಸಾದ ಸೇವಿಸಿದ್ದವರಿಗೆ ಫುಡ್ ಪಾಯ್ಸನ್ ಆಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ ಓರ್ವ ಮಹಿಳೆ ಸಾವನ್ನಪ್ಪಿದ್ದಾಳೆ.

Ad Widget . Ad Widget .

ಪ್ರಸಾದ ತಿಂದು 200ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಇದರಲ್ಲಿ ಮಹಿಳೆಯೋರ್ವಳು ಮೃತಪಟ್ಟಿದ್ದಾಳೆ. ಇನ್ನು ಮಹಿಳೆ ಹಾಗೂ ಒಬ್ಬ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ. ವಯೋ ವೃದ್ದರು ಹಾಗೂ ಕಿಡ್ನಿ ಸಮಸ್ಯೆ ಇರೋರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ.
ನಾರ್ಮಲ್ ವಾರ್ಡ್ ನಲ್ಲಿ ಚಿಕಿತ್ಸೆಗೂ ಸ್ಪಂದಿಸದ ಹಿನ್ನಲೆ ಐಸಿಯುಗೆ ಶಿಪ್ಟ್ ಮಾಡಲಾಗಿದೆ. ಎಲ್ಲರಿಗೂ ಒಂದೇ ಮಾದರಿಯ ಸಿಂಟಮ್ಸ್ ಎನ್ನಲಾಗಿದೆ. ಹೊಸಕೋಟೆಯ ಕೆಂಪಣ್ಣ ಖಾಸಗಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದೊಂದು ಖಾಸಗಿ ಆಸ್ಪತ್ರೆಯಲ್ಲಿ ನೂರಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ

ಸರ್ಕಾರಿ ಆಸ್ಪತ್ರೆ ಬಿಟ್ಟು, ನಾಲ್ಕು ಖಾಸಗಿ ಆಸ್ಪತ್ರೆಗಳು ಭರ್ತಿಯಾಗಿವೆ. ವೈದ್ಯರು ಹೇಳುವ ರೀತಿಯಲ್ಲಿ ಮುನ್ನೂರಕ್ಕೂ ಹೆಚ್ಚು ಮಂದಿಗೆ ಫುಡ್ ಪಾಯ್ಸನ್ ಆಗಿದ್ಯಂತೆ. ಎಲ್ಲಾ ಆಸ್ಪತ್ರೆಯಲ್ಲೂ ಸ್ಯಾಂಪಲ್ ಕಳಿಸಿದ್ದು, ನಾಳೆ ರಿಪೋರ್ಟ್ ಬರುವ ಸಾಧ್ಯತೆ ಇದೆ.

ಕೋಟೆ ಅಂಜನೇಯ ಸ್ವಾಮಿ ದೇವಸ್ಥಾನಕ್ಕೆ ಫುಡ್ ಸೇಪ್ಟಿ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ರು. ಈ ವೇಳೆ ಕ್ಯಾಟರಿಂಗ್ ಮಾಡ್ತಿದ್ದ ಎಸ್‌ಬಿಎಸ್‌ ಕ್ಯಾಟರಿಂಗ್ ಸಂಸ್ಥೆ ಸಿಬ್ಬಂದಿಯನ್ನ ವಿಚಾರಣೆ ಮಾಡಲಾಯ್ತು. ಸಾಕಷ್ಟು ವರ್ಷಗಳಿಂದ ಈ ದೇವಸ್ಥಾನಕ್ಕೆ ಪ್ರಸಾದ ಕೊಡ್ತಿದ್ದೇವೆ. ಅದೇ ಪ್ರಸಾದವನ್ನು ನಾವೂ ತಿಂದಿದ್ದೇವೆ. ನಮ್ಮ ಪುಡ್ ನಿಂದ ಏನೂ ಸಮಸ್ಯೆ ಆಗಿಲ್ಲ ಅಂತ ಸಿಬ್ಬಂದಿ ಹೇಳಿದ್ದಾರೆ. ಈ ಸಂಬಂಧ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *