Ad Widget .

ರಾಜ್ಯ ಸರ್ಕಾರದ ಹುದ್ದೆಯಲ್ಲಿ ಕೆಲಸ ಮಾಡಲು ಸುವರ್ಣವಕಾಶ! ನಾಳೆಯೇ ಲಾಸ್ಟ್​ ಡೇಟ್​, ಅರ್ಜಿ ಸಲ್ಲಿಸಿ ಬೇಗ

ಸಮಗ್ರ ಉದ್ಯೋಗ: Karnataka Antibiotics and Pharmaceuticals Limited ನಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 2 ಎಕ್ಸಿಕ್ಯೂಟಿವ್, ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿ ಇವೆ. ಅರ್ಹ ಅಭ್ಯರ್ಥಿಗಳು KAPLನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಾಳೆಯೊಳಗೆ ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

Ad Widget . Ad Widget .

ಹುದ್ದೆಯ ಮಾಹಿತಿ:
ಎಕ್ಸಿಕ್ಯೂಟಿವ್ – 1
ಜೂನಿಯರ್ ಎಕ್ಸಿಕ್ಯೂಟಿವ್-1

Ad Widget . Ad Widget .

ವಿದ್ಯಾರ್ಹತೆ:
ಕರ್ನಾಟಕ ಆ್ಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂ.ಫಾರ್ಮಾ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಎಕ್ಸಿಕ್ಯೂಟಿವ್ – 32 ವರ್ಷ
ಜೂನಿಯರ್ ಎಕ್ಸಿಕ್ಯೂಟಿವ್- 28 ವರ್ಷ

ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:
ಎಕ್ಸಿಕ್ಯೂಟಿವ್ – ಮಾಸಿಕ ₹ 51,000
ಜೂನಿಯರ್ ಎಕ್ಸಿಕ್ಯೂಟಿವ್-ಮಾಸಿಕ ₹ 46,000

ಉದ್ಯೋಗದ ಸ್ಥಳ:
ಬೆಂಗಳೂರು

ಅನುಭವ:
ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 1 ವರ್ಷ ಅನುಭವವನ್ನು ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಡೆಪ್ಯುಟಿ ಜನರಲ್ ಮ್ಯಾನೇಜರ್-ಎಚ್‌ಆರ್​ಡಿ
ಕರ್ನಾಟಕ ಆ್ಯಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್​
ಕಾಪ್ಲ್ ಹೌಸ್
ಅರ್ಕಾ ದಿ ಬಿಸಿನೆಸ್ ಸೆಂಟರ್
ಪ್ಲಾಟ್ ಸಂಖ್ಯೆ 37
ಸೈಟ್ ಸಂಖ್ಯೆ 34/4
ಎನ್‌ಟಿಟಿಎಫ್ ಮುಖ್ಯ ರಸ್ತೆ
2 ನೇ ಹಂತ
ಪೀಣ್ಯ
ಬೆಂಗಳೂರು
ಕರ್ನಾಟಕ -560058

Leave a Comment

Your email address will not be published. Required fields are marked *