Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಗ್ರಹಗತಿಗಳ ಸ್ಥಾನದ ಪ್ರಕಾರ ದ್ವಾದಶ ರಾಶಿಗಳ ಭವಿಷ್ಯ ನೀಡಲಾಗಿದ್ದು ಡಿಸೆಂಬರ್‌ 24ರಿಂದ 30ರವರೆಗಿನ ರಾಶಿಭವಿಷ್ಯ ನೀಡಲಾಗಿದೆ ನೋಡಿ:

Ad Widget . Ad Widget .

ಮೇಷ ರಾಶಿ:
ಕೆಲಸ ಕಾರ್ಯಗಳನ್ನು ಆರಂಭಿಸುವ ಮುನ್ನ ಆತ್ಮೀಯರ ಸಲಹೆ ಪಡೆಯಿರಿ. ಹಣಕಾಸಿನ ವ್ಯವಹಾರದ ಬಗ್ಗೆ ಕುಟುಂಬದೊಂದಿಗೆ ಚರ್ಚಿಸುವುದು ಒಳ್ಳೆಯದು. ಉದ್ಯೋಗದಲ್ಲಿ ನಿರೀಕ್ಷಿತ ಫಲಿತಾಂಶ. ಹೊಸ ವ್ಯಾಪಾರ ಆರಂಭಿಸುವಾಗಎಚ್ಚರಿಕೆಯ ತೀರ್ಮಾನಗಳನ್ನು ತೆಗೆದುಕೊಳ್ಳಿ. ವಾರದ ಆರಂಭದಲ್ಲೇ ಶುಭ ವರ್ತಮಾನವೊಂದು ಬರಲಿದೆ. ಅಧಿಕ ಖರ್ಚಿನಿಂದಾಗಿ ಮಾನಸಿಕ ಒತ್ತಡ ಕಾಡಬಹುದು. ಸಂಗೀತ ಧ್ಯಾನದಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ. ಆದಾಯ ಹೆಚ್ಚುವ ಸೂಚನೆಗಳಿವೆ. ಉದ್ಯೋಗದಲ್ಲಿನ ಕಾರ್ಯದಕ್ಷತೆಗೆ ಸೂಕ್ತ ಪ್ರತಿಫಲ ದೊರೆಯುತ್ತದೆ. ಕುಟುಂಬದಲ್ಲಿನ ಪರಸ್ಪರ ಅಪನಂಬಿಕೆ ಕೊನೆಗೊಳ್ಳುತ್ತದೆ.

Ad Widget . Ad Widget .

ವೃಷಭ ರಾಶಿ:
ಬುದ್ಧಿವಂತಿಕೆಯ ತೀರ್ಮಾನಗಳು ಅವಕಾಶವನ್ನು ದೊರಕಿಸಿಕೊಡುತ್ತದೆ. ಉದ್ಯೋಗದಲ್ಲಿ ಉನ್ನತ ದರ್ಜೆ ಗಳಿಸುವಿರಿ. ಉದ್ಯೋಗ ಬದಲಾಯಿಸುವ ಅವಕಾಶ ದೊರೆಯುತ್ತದೆ. ಆತ್ಮೀಯರ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಲಾಭವಿದೆ. ಸೋದರಿಯಿಂದ ಹಣದ ಸಹಾಯ ದೊರೆಯಲಿದೆ. ಬಂಧು ಮಿತ್ರರ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿ ದೊರೆಯುತ್ತದೆ. ಎಲ್ಲರೊಂದಿಗೆ ಯಾತ್ರಾ ಸ್ಥಳಕ್ಕೆ ತೆರಳುವಿರಿ. ದುಬಾರಿ ಬೆಲೆಯ ಒಡವೆ ವಸ್ತ್ರಗಳನ್ನು ಕೊಳ್ಳುವಿರಿ. ಪಶು ಸಂಗೋಪನೆಯಲ್ಲಿ ಆಸಕ್ತಿ ಬೆಳೆಯುತ್ತದೆ. ಸಾಲದ ವ್ಯವಹಾರ ಒಳ್ಳೆಯದಲ್ಲ.

ಮಿಥುನ ರಾಶಿ:
ಸಮಯಕ್ಕೆ ತಕ್ಕಂತೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆತು ಸಂತೃಪ್ತಿಯ ಭಾವನೆ ಮೂಡುತ್ತದೆ. ಉದ್ಯೋಗ ಬದಲಿಸುವಿರಿ. ಹೊಸ ಸನ್ನಿವೇಶಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸಿ. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಕುಟುಂಬದಲ್ಲಿ ಮಂಗಳ ಕಾರ್ಯದ ಜವಾಬ್ದಾರಿ ನಿಮ್ಮದಾಗುತ್ತದೆ. ಮನೆಯನ್ನು ನವೀಕರಣಗೊಳಿಸಲು ಹೆಚ್ಚಿನ ಹಣ ಖರ್ಚಾಗಬಹುದು. ಬರವಣಿಗೆಯಲ್ಲಿ ಮುಂದುವರೆಯುವ ಅವಕಾಶ ದೊರೆಯಲಿದೆ. ಖರ್ಚು ವೆಚ್ಚಗಳಲ್ಲಿ ಮಿತಿ ಇರುವುದು ಒಳ್ಳೆಯದು. ಆತುರ ಪಡದೆ ಸಹನೆ ಪ್ರೀತಿಯಿಂದ ಎಲ್ಲರೊಂದಿಗೆ ಸ್ಪಂದಿಸಿ. ಮಕ್ಕಳ ಆರೊಗ್ಯದ ಬಗ್ಗೆ ಕಾಳಜಿ ಇರಲಿ.

ಕಟಕ ರಾಶಿ:
ಸ್ವಂತ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ನಡೆಯಲಿವೆ. ಅನಾವಶ್ಯಕವಾದ ಮಾನಸಿಕ ಒತ್ತಡದಿಂದ ತಪ್ಪು ನಿರ್ಧಾರ ಕೈಗೊಳ್ಳುವಿರಿ. ಅಜೀರ್ಣದಿಂದ ಬಳಲುವಿರಿ. ಕ್ರಿಯಾಶೀಲತೆಯ ವ್ಯಕ್ತಿತ್ವದಿಂದ ಯಶಸ್ಸು ಗಳಿಸುವಿರಿ. ಉದ್ಯೋಗ ಬದಲಿಸುವ ಪ್ರಯತ್ನ ಕೈಬಿಡುವಿರಿ. ಉದ್ಯೋಗ ನಿಮಿತ್ತ ವಿದೇಶಕ್ಕೆ ಪ್ರಯಾಣ ಬೆಳೆಸುವ ಯೋಗವಿದೆ. ಹಣ ಉಳಿಸಲು ವಿವಿಧ ಯೋಜನೆಗಳಲ್ಲಿ ಹಣ ತೊಡಗಿಸುವಿರಿ. ಬಂಧು ವರ್ಗದಿಂದ ಅನಿರೀಕ್ಷಿತ ಸಹಾಯ ಸಹಕಾರ ದೊರೆಯಲಿದೆ. ತಂದೆ ನಡೆಸುತ್ತಿರುವ ವ್ಯಾಪಾರ ಅಥವಾ ಕೈಗಾರಿಕೆಗಳ ಪಾಲುಗಾರಿಕೆ ದೊರೆಯಲಿದೆ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.

ಸಿಂಹ‌ ರಾಶಿ:
ಹಟವನ್ನು ಬಿಟ್ಟು ಎಲ್ಲರೊಂದಿಗೆ ಪ್ರೀತಿಯಿಂದ ವರ್ತಿಸಿ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಪ್ರಶಂಸೆ ಲಭಿಸುತ್ತದೆ. ಸಂಬಂಧಿಕರಿಂದ ಶುಭ ವಾರ್ತೆಯೊಂದು ಬರಲಿದೆ. ನಿಮ್ಮ ನೇರ ನಿಷ್ಠುರ ಮಾತುಕತೆ ಆತ್ಮೀಯರಲ್ಲಿ ಬೇಸರ ಮೂಡಿಸುತ್ತದೆ. ತಂದೆಯೊಂದಿಗೆ ಇದ್ದ ಹಣಕಾಸಿನ ವಿಚಾರದಲ್ಲಿನ ಭಿನ್ನಾಭಿಪ್ರಾಯ ಮರೆಯಾಗುತ್ತದೆ. ಪರಿಚಿತರೊಡನೆ ವಿವಾಹ ನಿಶ್ಚಯ ಆಗಲಿದೆ. ವಿದ್ಯಾರ್ಥಿಗಳಿಗೆ ವಿದೇಶಕ್ಕೆ ತೆರಳುವ ಅವಕಾಶ ಲಭಿಸುತ್ತದೆ. ಬೇಡದ ವಿಚಾರಗಳಿಗೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ದುಡುಕುತನದ ಮಾತುಕತೆಯಿಂದ ತೊಂದರೆ ಎದುರಾಗುತ್ತದೆ. ಹುಟ್ಟೂರಿನಲ್ಲಿ ಆಸ್ತಿ ಖರೀದಿ ಮಾಡುವಿರಿ.

ಕನ್ಯಾ ರಾಶಿ:
ಕಷ್ಟದ ಪರಿಸ್ಥಿತಿಯಲ್ಲಿಯೂ ಜಾಣ್ಮೆಯ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಯೋಚಿಸದೆ ಮಾತನಾಡಿದಲ್ಲಿ ಉದ್ಯೋಗದಲ್ಲಿ ತೊಂದರೆ ಉಂಟಾಗುತ್ತದೆ. ಕುಟುಂಬದಲ್ಲಿ ಬೇಸರದ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಕುಟುಂಬದ ಸದಸ್ಯರೊಂದಿಗೆ ದೇವತಾ ಕಾರ್ಯ ನಡೆಸುವಿರಿ. ಕುಟುಂಬದ ಕೆಲಸ ಕಾರ್ಯಗಳಲ್ಲಿ ದಿಟ್ಟತನದ ತೀರ್ಮಾನಗಳನ್ನು ತೆಗೆದುಕೊಳ್ಳಿ. ಆರೋಗ್ಯದಲ್ಲಿ ಏರಿಳಿತ ಕಂಡು ಬರಬಹುದು. ಸಣ್ಣ ಬಂಡವಾಳದ ಕೈಗಾರಿಕೆ ಆರಂಭಿಸುವ ಬಗ್ಗೆ ಯೋಚಿಸುವಿರಿ. ಮನಸ್ಸು ಒಪ್ಪದೇ ಹೋದರೂ ಬೇರೆಯವರಿಂದ ಹಣವನ್ನು ಪಡೆಯುವಿರಿ. ತಪ್ಪನ್ನು ಒಪ್ಪದೆ ಟೀಕಿಸುವಿರಿ. ಅನಿರೀಕ್ಷಿತ ಧನಲಾಭ ಇರುತ್ತದೆ.

ತುಲಾ ರಾಶಿ:
ಒತ್ತಡಕ್ಕೆ ಒಳಗಾಗಿ ಆತುರದ ನಿರ್ಧಾರ ತೆಗೆದುಕೊಳ್ಳುವಿರಿ. ಸಮಯ ಸಂದರ್ಭಕ್ಕೆ ಅನುಗುಣವಾಗಿ ವರ್ತಿಸಿದರೆ ಪ್ರತಿ ವಿಚಾರದಲ್ಲೂ ಸುಲಭ ಜಯ ದೊರೆಯುತ್ತದೆ. ಯಾವುದೇ ಕೆಲಸ ಕಾರ್ಯವಾದರೂ ಎಲ್ಲರ ಸಹಕಾರದಿಂದ ಸುಲಭವಾಗಿ ಪೂರ್ಣಗೊಳಿಸಬಲ್ಲಿರಿ. ಸೋದರ ಅಥವಾ ಸೋದರಿಯ ನಡುವಿನ ಹಣದ ವಿವಾದ ಕೊನೆಯಾಗುತ್ತದೆ. ವಂಶಧಾರಿತ ಆಸ್ತಿಯಲ್ಲಿ ನ್ಯಾಯಯುತ ಪಾಲು ದೊರೆಯುತ್ತದೆ. ಯಾರೊಂದಿಗೂ ವಾದ ವಿವಾದ ಮಾಡದಿರಿ. ಹಣದ ವ್ಯವಹಾರವನ್ನು ಎಚ್ಚರಿಕೆಯಿಂದ ನಿರ್ವಹಿಸಿ. ದೀರ್ಘಕಾಲದಿಂದ ಬಳಲುತ್ತಿರುವ ಅನಾರೋಗ್ಯ ಸುಧಾರಿಸುತ್ತದೆ. ವಿವಾಹಯೋಗ ಇರುತ್ತದೆ.

ವೃಶ್ಚಿಕ ರಾಶಿ:
ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಅತಿಯಾದ ಕೋಪ ಬೇಡ. ಮನದಲ್ಲಿ ವೈರಾಗ್ಯದ ಭಾವನೆ ಮೂಡುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಎಲ್ಲರ ಮೆಚ್ಚುಗೆ ಗಳಿಸುವಿರಿ. ತೆಗೆದುಕೊಂಡ ನಿರ್ಧಾರವನ್ನು ಬದಲಿಸುವುದಿಲ್ಲ. ದುಡುಕಿ ಹಣಕಾಸಿನ ವಿಚಾರದಲ್ಲಿ ತಪ್ಪಾಗಿ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಯಶಸ್ಸು ದೊರೆಯಲಿದೆ. ಕುಟುಂಬದಲ್ಲಿ ಕಿರಿಯ ಸದಸ್ಯರ ವಿವಾಹ ನಿಶ್ಚಯವಾಗುತ್ತದೆ. ಹಣಕಾಸಿನ ವ್ಯವಹಾರದ ಬಗ್ಗೆ ಆತ್ಮೀಯರ ಜೊತೆಯಲ್ಲಿ ಚರ್ಚಿಸುವಿರಿ. ಕೋಪ ಕಡಿಮೆ ಮಾಡಿಕೊಳ್ಳಿ.

ಧನಸ್ಸು ರಾಶಿ:
ಕಣ್ತಪ್ಪಿನಿಂದ ಉದ್ಯೋಗ ಕ್ಷೇತ್ರದಲ್ಲಿ ಮಾಡುವ ತಪ್ಪನ್ನು ಮೇಲಧಿಕಾರಿಗಳು ಮನ್ನಿಸುತ್ತಾರೆ. ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸುವುದರಿಂದ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಲಭಿಸಬಹುದು. ವಿನಾಕಾರಣ ಕುಟುಂಬದಲ್ಲಿ ಮಾನಸಿಕ ಒತ್ತಡ ಉಂಟು ಮಾಡುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಗಮನ ವಹಿಸಿ. ಕೈ ಹಿಡಿದ ಕೆಲಸ ಕಾರ್ಯಗಳಲ್ಲಿಯೂ ಸುಲಭವಾಗಿ ಜಯ ಗಳಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಆಧುನಿಕತೆಗೆ ಬದಲಾಗಬೇಕಾಗುತ್ತದೆ. ಮನದ ಬೇಸರ ಕಳೆಯಲು ಪ್ರವಾಸ ಕೈಗೊಳ್ಳುವಿರಿ. ಕೋಪ ಬಂದಷ್ಟೇ ವೇಗವಾಗಿ ಶಾಂತರಾಗುವಿರಿ. ಗುರಿ ತಲುಪುವವರೆಗೂ ಮನಸ್ಸು ಬದಲಿಸದಿರಿ. ಹೊಸ ವಾಹನ ಕೊಳ್ಳುವಿರಿ.

ಮಕರ ರಾಶಿ:
ಆತುರದಿಂದ ಮಾಡುವ ಕೆಲಸ ಕಾರ್ಯಗಳಲ್ಲಿ ತೊಂದರೆ ಉಂಟಾಗಲಿದೆ. ಒತ್ತಡದಲ್ಲಿಯೂ ಸರಿಯಾದ ಹಾದಿಯಲ್ಲಿ ನಡೆಯುವಿರಿ. ಒಳ್ಳೆಯ ಮಾತು ಕತೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಕುಟುಂಬದ ಹಣಕಾಸಿನ ನಿರ್ವಹಣೆಯ ಜವಾಬ್ದಾರಿ ನಿಮ್ಮದಾಗುತ್ತದೆ. ಉದ್ಯೋಗದಲ್ಲಿ ಎಲ್ಲರಿಗೂ ಮಾದರಿಯಾಗಿ ಬಾಳುವಿರಿ. ಕುಟುಂಬದ ಹಿರಿಯರ ತೀರ್ಮಾನಗಳನ್ನು ಒಪ್ಪಬೇಕಾಗುತ್ತದೆ. ಸಂಗಾತಿಗಾಗಿ ದುಬಾರಿ ಒಡವೆ ವಸ್ತ್ರಕೊಳ್ಳುವಿರಿ. ಉದ್ಯೋಗದಲ್ಲಿ ಉನ್ನತ ಸ್ಥಾನ ಲಭಿಸುತ್ತದೆ. ಕಷ್ಟ ನಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಸಲುವಾಗಿ ಸಂಘ ಸಂಸ್ಥೆಯನ್ನು ಆರಂಭಿಸುವಿರಿ. ಸಮಾಜದ ಗಣ್ಯ ವ್ಯಕ್ತಿಗಳ ಪರಿಚಯ ಆಗಲಿದೆ.

ಕುಂಭ ರಾಶಿ:
ಆರೋಗ್ಯದ ಬಗ್ಗೆ ಗಮನವಿರಲಿ. ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸು ಸಂತಸ ನೀಡುತ್ತದೆ. ಮನ ಬಿಚ್ಚಿ ಆತ್ಮೀಯರೊಂದಿಗೆ ಮಾತನಾಡಿ. ಅನಾವಶ್ಯಕ ವಿಚಾರಗಳ ಬಗ್ಗೆ ಚಿಂತೆ ಇರುತ್ತದೆ. ಕುಟುಂಬದಲ್ಲಿ ಹಣಕಾಸಿನ ಸಂಬಂಧ ವಿವಾದಗಳಿರುತ್ತವೆ. ಸಮಾಜ ಸೇವೆ ಮಾಡುವ ಇಂಗಿತದಿಂದ ರಾಜಕೀಯ ಪ್ರವೇಶಿಸುವಿರಿ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ಹಣದ ವ್ಯವಹಾರದ ಬಗ್ಗೆ ಯೋಚಿಸುವುದು ಒಳ್ಳೆಯದು. ಕೈ ಕಾಲಿಗೆ ಪೆಟ್ಟು ಬೀಳುವ ಸಾಧ್ಯತೆ ಇರುತ್ತದೆ. ಸೋದರನ ಜೊತೆ ಹಣಕಾಸಿನ ವಿಚಾರದಲ್ಲಿ ವಿವಾದ ಉಂಟಾಗಲಿದೆ. ನಿಮ್ಮ ಮನಸ್ಸನ್ನು ಅರಿಯಲು ಯಾರಿಂದಲೂ ಸಾಧ್ಯವಾಗದು. ಹೊಸತನದ ನಿರೀಕ್ಷೆ ಮನೆ ಮಾಡಿರುತ್ತದೆ.

ಮೀನ‌ ರಾಶಿ:
ಆತ್ಮೀಯ ಬಂಧುಗಳ ಆಗಮನ ಸಂತಸ ನೀಡುತ್ತದೆ. ಆಡುವ ಮಾತುಗಳಲ್ಲಿ ಪ್ರೀತಿ ವಿಶ್ವಾಸ ಇರುತ್ತದೆ. ಎಲ್ಲರನ್ನೂ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಸಂತಾನ ಲಾಭವಿದೆ. ಉದ್ಯೋಗದಲ್ಲಿ ಹಿತಕರ ಬದಲಾವಣೆಗಳು ಆಗಲಿವೆ. ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳಬಹುದು. ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗಲಿವೆ. ಕೃಷಿ ಭೂಮಿಯನ್ನು ಕೊಳ್ಳುವ ಸೂಚನೆಗಳಿವೆ. ನೀರಿರುವ ಸ್ಥಳಕ್ಕೆ ಮನರಂಜನೆಗಾಗಿ ತೆರಳುವಿರಿ. ದೃಢವಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲರಾಗುವಿರಿ. ಶೀತದ ತೊಂದರೆ ಇರುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಗಮನ ಇರಲಿ.

Leave a Comment

Your email address will not be published. Required fields are marked *