ಕುಕ್ಕೆಯಲ್ಲಿಂದು ನೀರು ಬಂಡಿ ಉತ್ಸವ| ಚಂಪಾಷಷ್ಟಿ ಮಹೋತ್ಸವಕ್ಕೆ ತೆರೆ

ಸಮಗ್ರ ನ್ಯೂಸ್: ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.24ರಂದು ಕೊಪ್ಪರಿಗೆ ಇಳಿಯುವುದರೊಂದಿಗೆ ಚಂಪಾಷಷ್ಠಿ ಮಹೋತ್ಸವ ಸಮಾಪನಗೊಳ್ಳಲಿದೆ. ರಾತ್ರಿ ನೀರಿನಲ್ಲಿ ಬಂಡಿ ಉತ್ಸವ, ದೈವಗಳ ನಡಾವಳಿ ನಡೆಯಲಿದೆ.

Ad Widget ... ..

ಮದ್ಯಾಹ್ನ ಮಹಾಪೂಜೆ ಬಳಿಕ ದೇಗುಲದ ಹೊರಾಂಗಣದ ಸುತ್ತ ನೀರು ತುಂಬಲಾಗುತ್ತದೆ. ರಾತ್ರಿ ಮಹಾಪೂಜೆ ಬಳಿಕ ತುಂಬಿರುವ ನೀರಿನಲ್ಲಿ ಬಂಡಿ ತೇರನ್ನು ಎಳೆಯಲಾಗುತ್ತದೆ. ವರ್ಷದಲ್ಲಿ ಒಮ್ಮೆ ಈ ಉತ್ಸವ ನಡೆಯುತ್ತದೆ.

Ad Widget

ಬಳಿಕ ದೀಪಾರಾಧನೆ ಯುಕ್ತ ಪಾಲಕಿ ಉತ್ಸವ, ಕ್ಷೇತ್ರದ ದೈವಗಳಿಗೆ ಗೋಪುರ ನಡಾವಳಿ ನಡೆಯುತ್ತದೆ. ಡಿ.25ರಂದು ಮುಂಜಾನೆ ಪುರುಷರಾಯ ದೈವವು ಕುಮಾರಧಾರ ಮತ್ಯ್ಸ ತೀರ್ಥದಲ್ಲಿರುವ ಮೀನುಗಳಿಗೆ ಆಹಾರ ನೀಡುವುದು ವಿಶೇಷ. 2024ರ ಜನವರಿ 16ರಂದು ಕ್ಷೇತ್ರದಲ್ಲಿ ಕಿರುಷಷ್ಠಿ ಮಹೋತ್ಸವ ಜರುಗಲಿದೆ.

Leave a Comment

Your email address will not be published. Required fields are marked *