ಸಮಗ್ರ ನ್ಯೂಸ್: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದು, ಮೃತರ ವಾರಿಸುದಾರರು ಇದ್ದಲ್ಲಿ ಸಂಪರ್ಕಿಸುವಂತೆ ಕಡಬ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.21ರಂದು ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟಣ ರೈಲ್ವೇ ಸ್ಟೇಷನ್ ಬಳಿ ಅಪರಿಚಿತ ವ್ಯಕ್ತಿ ಅಸ್ವಸ್ಥನಾಗಿ ಬಿದ್ದುಕೊಂಡಿದ್ದು, ಆ ವ್ಯಕ್ತಿಯನ್ನು 108 ಆಂಬ್ಯುಲೆನ್ಸ್ ವಾಹನದಲ್ಲಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿ.22ರಂದು ಬೆಳಗ್ಗೆ ಆ ವ್ಯಕ್ತಿ ಚಿಕಿತ್ಸೆ ಫಲಿಸದೇ ಮೃತರಾಗಿದ್ದು,ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು ಅಂದಾಜು 30-35 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ 7 ಪೀಟ್ ಎತ್ತರ, ಕೋಲು ಮುಖ, ಗೋದಿ ಮೈ ಬಣ್ಣ, ಸಾಧರಣ ಶರೀರ, ಕಪ್ಪು ಬಿಳಿ ಮಿಶ್ತಿತ ತಲೆ ಕೂದಲು, ಗಡ್ಡ ಬಿಟ್ಟಿದ್ದು, ಎಡ ಕೈ ಹೆಬ್ಬೆಟ್ಟು ಮತ್ತು ತೋರು ಬೆರಳಿನ ಮಧ್ಯೆಯಲ್ಲಿ A ಎಂದು ಟ್ಯಾಟು ಹಾಕಿರುವುದು ಕಂಡು ಬರುತ್ತದೆ. ಎಡಕೆನ್ನೆಯ ಮೇಲೆ ಎಳ್ಳು ಮಚ್ಚೆ ಗುರುತು ಇರುತ್ತದೆ. ಸಿಮೆಂಟ್ ಬಣ್ಣದ ಟೀ ಶರ್ಟ್, ಟೀ ಶರ್ಟ್ ಮೇಲೆ FREEDOM IS NOT GIVER ಎಂದು ಬರೆದಿರುತ್ತದೆ ಹಾಗೂ ನೀಲಿ ಬಣ್ಣದ ಬರ್ಮುಡ ಚಡ್ಡಿ ಧರಿಸಿರುತ್ತಾರೆ. ಈ ಚಹರೆಯುಳ್ಳ ಗಂಡಸಿನ ಶವವು ಪುತ್ತೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು, ಶವದ ಗುರುತು ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಡಬ ಪೊಲೀಸು ಠಾಣೆಯನ್ನು ಸಮಪರ್ಕಿಸಲು ತಿಳಿಸಲಾಗಿದೆ.