Ad Widget .

ಸರ್ಕಾರಿ ಆಸ್ಪತ್ರೆಗಳಿಗೆ ಲೋಕಾಯುಕ್ತ ಶಾಕ್‌‌…

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಸರ್ಕಾರಿ ಆಸ್ಪತ್ರೆಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಕೆ.ಸಿ ಜನರಲ್ ಆಸ್ಪತ್ರೆಗೆ ಲೋಕಾಯುಕ್ತ ಡಿಜಿಪಿ ಮತ್ತು ಎಸ್​​ಪಿ ಭೇಟಿ ನೀಡಿದ್ದರು. ಲೋಕಾಯುಕ್ತ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಹಾಗೂ ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದರು. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಾದ ಡಾ. ಇಂದಿರಾ ಕಬಾಡೆ ಬಳಿ ಲೋಕಾಯುಕ್ತ ಡಿಜಿಪಿ ಬಳಿ ಮಾಹಿತಿ ಪಡೆದರು.

Ad Widget . Ad Widget .

ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಅಸ್ಪತ್ರೆಗಳ ಮೇಲೆ ದಾಳಿ ಮಾಡಿ ಲೋಕಾಯುಕ್ತ ಶಾಕ್‌ ನೀಡಿದೆ. ಕೆ.ಸಿ ಜನರಲ್ ಆಸ್ಪತ್ರೆ, ಇಂದಿರಾಗಾಂಧಿ ಅಸ್ಪತ್ರೆ, ವಾಣಿವಿಲಾಸ್, ಸಂಜಯ್ ಗಾಂಧಿ ಅಸ್ಪತ್ರೆ, ಯಲಹಂಕ, ಕೆ.ಆರ್.ಪುರ, ಜಯನಗರ ಹಾಗೂ ನೆಲಮಂಗಲ ಸರ್ಕಾರಿ ಅಸ್ಪತ್ರೆಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

Ad Widget . Ad Widget .

ಲೋಕಾಯುಕ್ತ ಅಧಿಕಾರಿಗಳು ದಾಳಿ ವೇಳೆ ಆಸ್ಪತ್ರೆಗೆ ಬಂದಿರುವ ಮಕ್ಕಳ ಪೋಷಕರ ಬಳಿ ಮಾಹಿತಿ ಪಡೆದುಕೊಂಡರು. ಚಿಕಿತ್ಸೆ ಸರಿಯಾಗಿ ಸಿಗ್ತಿದ್ಯಾ? ಸೌಲಭ್ಯಗಳು ಸರಿ ಇದ್ಯಾ? ಚಿಕಿತ್ಸೆಗೆ ಹಣ ಕೊಡ್ತಿದ್ದೀರಾ ಎಂದು ಪ್ರಶ್ನಿಸಿ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೇ ಆಸ್ಪತ್ರೆಯ ಪ್ರತಿ ವಿಭಾಗಕ್ಕೂ ತೆರಳಿ ಪರಿಶೀಲನೆ ನಡೆಸಿದ್ದು, ನ್ಯಾ.ಎಸ್.ಎನ್.ಪಾಟೀಲ್ ಅವರು ಮ್ಯೂಸಿಕ್ ತೆರಪಿ ವಿಭಾಗದಲ್ಲಿ ಕುಳಿತು ತೆರಪಿ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಪರಿಶೀಲನೆ ವೇಳೆ ವಾಣಿವಿಲಾಸ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ.ಸವಿತಾ ಹಾಜರಿದ್ದರು.
ಇನ್ನು, ಕೆ ಸಿ ಜನರಲ್ ಅಸ್ಪತ್ರೆಗೆ ಲೋಕಾಯುಕ್ತ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಭೇಟಿ ನೀಡಿ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಂಡರು. ಕೆ ಸಿ ಜನರಲ್ ಅಸ್ಪತ್ರೆ ವೈದ್ಯಕೀಯ ಆಧೀಕ್ಷಕರಾದ ಡಾ. ಇಂದಿರಾ ಕಬಾಡೆ ಅವರು ಈ ವೇಳೆ ಹಾಜರಿದ್ದರು.

Leave a Comment

Your email address will not be published. Required fields are marked *