Ad Widget .

ಮಕ್ಕಳ ಕೈಯಲ್ಲೇ ಶೌಚಾಲಯ ಕ್ಲೀನ್ ಮಾಡಿಸಿದ ಶಿಕ್ಷಕರು…! ಒಂದು ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ

ಸಮಗ್ರ ನ್ಯೂಸ್: ಇತ್ತಿಚೇಗಷ್ಟೆ ಶೌಚಗುಂಡಿಗೆ ಮಕ್ಕಳನ್ನ ಇಳಿಸಿದ ಪ್ರಕರಣ ಕೋಲಾರದಲ್ಲಿ ನಡೆದಿತ್ತು. ಅದು ಮಾಸುವ ಬೆನ್ನೆಲ್ಲೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಯಲ್ಲಿ ಮತ್ತೊಂದು ಘಟನೆ ನಡೆದಿದೆ. ಯಶವಂತ ವಿಧಾನಸಭಾ ಕ್ಷೇತ್ರದ ಆಂದ್ರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕೈಯಿಂದ ಟಾಯ್ಲೇಟ್ ಕ್ಲೀನಿಂಗ್ ಮಾಡಿಸಲಾಗಿದೆ.

Ad Widget . Ad Widget .

ಈ ಬಗ್ಗೆ ಪೋಷಕರಿಗೆ ವಿಷಯ ಗೊತ್ತಾಗಿ, ಶಾಲೆಯ ಮುಂದೆ ಪ್ರತಿಭಟನೆ ಮಾಡಲಾಗುತ್ತಿದೆ. ಮಕ್ಕಳ ಕೈಯಿಂದ ಶೌಚಾಲಯ ಸ್ವಚ್ಛಗೊಳಿಸಿದ್ದಕ್ಕೆ ಪೋಷಕರು ಅಸಮಾಧಾನಗೊಂಡಿದ್ದಾರೆ. ಶಾಲೆಯ ಮುಂದೆ ಜಮಾಯಿಸುತ್ತಿರುವ ಪೋಷಕರು ಈ ಬಗ್ಗೆ ಕಂಪ್ಲೇಂಟ್​ ಮಾಡುತ್ತಿದ್ದಾರೆ. ಮಕ್ಕಳ ಕೈಯಲ್ಲಿ ಈ ರೀತಿ ಕೆಲಸ ಮಾಡಿಸಬಾರದು ಎಂದು ಹೇಳುತ್ತಿದ್ದಾರೆ.

Ad Widget . Ad Widget .

ಪೋಷಕರು ಸೇರುತ್ತಿದ್ದಂತೆ ಶಾಲೆಗೆ ತಡವಾಗಿ ಬಂದ ಶಿಕ್ಷಕರು ಈ ಬಗ್ಗೆ ಏನು ಉತ್ತರ ನೀಡಬೇಕು ಎಂದು ತೋಚದೆ ಸುಮ್ಮನಾಗಿದ್ದಾರೆ. ತಮ್ಮ ಮಕ್ಕಳನ್ನು ಈ ರೀತಿ ನಡೆಸಿಕೊಂಡದ್ಯಾಕೆ ಎಂಬ ಪ್ರಶ್ನೆಯನ್ನು ಪಾಲಕರು ಮಾಡುತ್ತಾ ಇದ್ದಾರೆ. ವಿದ್ಯಾರ್ಥಿಗಳು ಮನೆಗೆ ಬಂದು ತಾವು ಶೌಚಾಲಯ ತೊಳೆದ ಬಗ್ಗೆ ಹೇಳಿಕೊಂಡಿದ್ದಾರೆ. ಮಕ್ಕಳು ಶಾಲೆಯಲ್ಲಿ ಈ ರೀತಿ ಕೆಲಸ ಮಾಡಿರುವುದರಿಂದ ಪಾಲಕರಿಗೆ ಬೇಸರವಾಗಿದೆ. ಆ ಕಾರಣಕ್ಕಾಗಿ ಈಗ ಎಲ್ಲ ಪಾಲಕರು ಶಾಲೆಯ ಹೊರಾಂಗಣಕ್ಕೆ ಆಗಮನಿಸಿ ಪ್ರಶ್ನೆ ಮಾಡುತ್ತಿದ್ದಾರೆ.

ಅದೂ ಅಲ್ಲದೇ ಅದೇ ದಿನ ಶಿಕ್ಷಕರು ಲೇಟಾಗಿ ಶಾಲೆಗೆ ಬಂದಿದ್ದಾರೆ. ಅದನ್ನೂ ಸಹ ಪಾಲಕರು ಪ್ರಶ್ನೆ ಮಾಡಿದ್ದಾರೆ. ಯಾಕೆ ಈ ರೀತಿ ಮಾಡ್ತಾ ಇದ್ದೀರಾ? ನಿಮ್ಮನ್ನು ನಂಬಿ ನಾವು ಮಕ್ಕಳನ್ನು ಶಾಲೆಗೆ ಕಳಿಸುತ್ತೇವೆ ನೀವೇ ಈ ರೀತಿ ಮಾಡಿದರೆ ಹೇಗೆ ಎಂದು ಪಾಲಕರು ಕೇಳುತ್ತಿದ್ದಾರೆ. ಮಕ್ಕಳು ಮೇನ್​ ರೋಡ್​ನಲ್ಲಿ ನಿಂತಿದ್ದಾರೆ ಅವರಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ ಎಂಬುದಾಗಿ ಪ್ರಶ್ನೆ ಮಾಡುತ್ತಿದ್ದಾರೆ.

ಶಾಲಾ ಸಮಯಕ್ಕಿಂತ ಲೇಟಾಗಿ ಶಾಲಾ ಬಾಗಿಲು ತೆರೆದಿದ್ದಾರೆ ಎಂದು ಹೇಳಲಾಗಿದೆ. ಮಕ್ಕಳ ಕೈಯಲ್ಲಿ ಬಾತ್​ ರೂಮ್​ ಮತ್ತು ಬಚ್ಚಲನ್ನು ತೊಳೆಸಿದ್ದಾರೆ. ಈ ಬಗ್ಗೆ ಯಾರೂ ಪ್ರಶ್ನೆ ಮಾಡೋದಿಲ್ಲ ಅಂತ ತಿಳಿಯಬೇಡಿ ನಾವು ಈ ಕುರಿತು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಪಾಲಕರು ಆಕ್ರೋಶ ಹೊರಹಾಕಿದ್ದಾರೆ.

Leave a Comment

Your email address will not be published. Required fields are marked *