Ad Widget .

ಫೇಕ್ ಬಾಬಾನ ಮಾತು ಕೇಳಿ ಅಕ್ಕನನ್ನೇ ಕೂಡಿಹಾಕಿದ್ದ ತಮ್ಮ!

ಸಮಗ್ರ ನ್ಯೂಸ್: ಬೆಂಗಳೂರಿನ ಲಗ್ಗೆರೆಯಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಈ ನಡು ರಸ್ತೆಯಲ್ಲಿ ಹಿಗ್ಗಾಮುಗ್ಗಾ ಪೊರಕೆ ಏಟು ತಿಂತಿರೋದು ಬೇರೆ ಯಾರು ಅಲ್ಲ ಈತನೆ ಬಾಬಾ ಅಂದ್ರೆ ನಕಲಿ ಬಾಬಾ.

Ad Widget . Ad Widget .

ಈ ನಕಲಿ ಬಾಬಾನನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದ ಸ್ಥಳೀಯರು ಹಿಗ್ಗಾಮುಗ್ಗಾ ಬಾರಿಸಿದ್ದಾರೆ. ಈತ ಮಾಡಿರುವ ಕೆಲಸ ಗೊತ್ತಾದ್ರೆ ಹೊಡೆಯೊದ್ರಲ್ಲಿ ತಪ್ಪೇನಿಲ್ಲ ಬಿಡಿ. ಲಗ್ಗೆರೆ ನಿವಾಸಿ ಮಮತಾಶ್ರೀ ಇವರಿಗೆ 26 ವಯಸ್ಸು, ಕಳೆದ ನಾಲ್ಕೈದು ತಿಂಗಳ ಹಿಂದೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ತೋರಿಸಿದಾಗ ಕ್ಯಾನ್ಸರ್‌ ಇದೆ ಅಂತಾ ವೈದ್ಯರು ಹೇಳಿದ್ದರು. ಆದ್ರೆ ಕುಟುಂಬದವರು ಸೂಕ್ತ ಟ್ರೀಟ್‌ಮೆಂಟ್‌ ಕೊಡಿಸೊ ಬದಲು ಬಾಬಾ ಮೊರೆ ಹೋಗಿದ್ದರು.

Ad Widget . Ad Widget .

ಬೆಂಗಳೂರಿನ ಲಗ್ಗೆರೆಯಲ್ಲಿ ವಾಸವಿದ್ದ ಮಮತಾಶ್ರೀ ಕುಟುಂಬಕ್ಕೆ ಬೊಮ್ಮನಹಳ್ಳಿಯ ಅಬ್ದುಲ್ ಅನ್ನೋ ಬಾಬಾನ ಪರಿಚಯ ಆಗಿತ್ತು.. ಟ್ರೀಟ್‌ಮೆಂಟ್‌ ಅವಶ್ಯಕತೆಯಿಲ್ಲ. ದಿನವೂ ಅರಿಶಿಣದ ನೀರು ಕುಡಿಸಿ ಅಂತಾ ಹೇಳಿದ್ನಂತೆ.. ಅದೇ ಕಾರಣಕ್ಕೆ ಕಳೆದ ನಾಲ್ಕು ತಿಂಗಳಿಂದ ಮನೆಯಲ್ಲೇ ಕೂಡಿ ಹಾಕಿದ್ದಾರೆ. ನರಕ ಹಿಂಸೆಯನ್ನು ತಾಳಲಾರದೆ ಕಿರುಚಾಡಿದ ಯುವತಿ ಮಮತಾಶ್ರೀ, ಮನೆಯಲ್ಲೇ ಹಲ್ಲೆ ಮಾಡಿದ್ದಾನೆ ಸಹೋದರ.
ಅರಿಶಿನ ನೀರು ಕುಡಿಸಿ ಯುವತಿಯ ಆರೋಗ್ಯ ಮತ್ತಷ್ಟು ಕ್ಷೀಣಿಸುವಂತೆ ಮಾಡಿದ್ದಾರೆ. ತೀವ್ರ ಹೊಟ್ಟೆ ನೋವು ತಾಳಲಾರದೇ ಮನೆಯಲ್ಲಿ ಮಮತಾಶ್ರೀ ಕಿರುಚಾಡುತ್ತಿದ್ದರು. ಆಸ್ಪತ್ರೆಗೆ ದಾಖಲಿಸಿರಲಿಲ್ಲ. ಯುವತಿಯನ್ನ ಕೂಡಿಟ್ಟ ವಿಚಾರ ತಿಳಿದ ಸ್ಥಳೀಯರು, ಮಹಿಳಾ ಮತ್ತು ಮಕ್ಕಳಾಭಿವೃದ್ದಿ ಇಲಾಖೆ ಅಧಿಕಾರಿಗಳ‌ ಗಮನಕ್ಕೆ ತಂದಿದ್ದಾರೆ. ತೀವ್ರ ಅಸ್ವಸ್ಥಗೊಂಡು ನರಳಾಡ್ತಿದ್ದ ಯುವತಿಯನ್ನ ಬೆಂಗಳೂರು ಉತ್ತರ ವಲಯದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಶಿಧರ್ ಟೀಂ ರಕ್ಷಣೆ ಮಾಡಿ, ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಾಲ್ಕು ತಿಂಗಳಿನಿಂದ ಆಸ್ಪತ್ರೆಗೆ ತೋರಿಸದೇ ಮನೆಯಲ್ಲಿ ಸ್ವಂತ ಅಕ್ಕನನ್ನೇ ಕೂಡಿಟ್ಟು ಕಿರುಕುಳ ಕೊಟ್ಟ ಆರೋಪದ ಮೇರೆಗೆ ಯುವತಿಯ ತಮ್ಮ ಪ್ರಶಾಂತ್ ಹಾಗೂ ನಕಲಿ ಬಾಬಾ ಅಬ್ದುಲ್‌ನನ್ನ , ನಂದಿನಿ ಲೇಔಟ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ತಮ್ಮನೇ ಸಾಯಿಸೋದಕ್ಕೆ ಪ್ರಯತ್ನಿಸ್ತಿದ್ದಾನೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.
ಪದವಿ ಓದು ಮುಗಿಸಿರುವ ಈಕೆ ಬಾಳಿ ಬದುಕಬೇಕಾದವಳು ಆದರೆ ಈಗ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾಳೆ.

Leave a Comment

Your email address will not be published. Required fields are marked *