ಸಮಗ್ರ ನ್ಯೂಸ್: ಬೆಂಗಳೂರಿನ ಚಿತ್ರಕಲಾ ಪರಿಷತ್‍ನಲ್ಲಿ ಚಿತ್ರಸಂತೆ ಜನವರಿ 1ರಿಂದ ನಡೆಯಲಿದ್ದು, ಚಿತ್ರಸಂತೆಗೆ ಬರಲು ಚಿತ್ರಕಲಾಪ್ರಿಯರಿಗೆ ಆನ್‍ಲೈನ್ ಅರ್ಜಿ ಆಹ್ವಾನ ಮಾಡಲಾಗಿದೆ. ಮೂರು ಸಾವಿರಕ್ಕೂ ಹೆಚ್ಚು ಕಲಾಪ್ರಿಯರು ಚಿತ್ರಸಂತೆಗೆ ಬರಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ಈ ಬಾರಿ ಚಂದ್ರಯಾನ ಸಕ್ಸಸ್ ಥೀಮ್ ಚಿತ್ರಸಂತೆ ಆಯೋಜನೆ ಮಾಡಲಾಗಿದ್ದು, ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಆರಂಭವಾಗುವ ಚಿತ್ರಸಂತೆ, ಸಂಜೆ 8 ಗಂಟೆಯವರೆಗೂ ನಡೆಯಲಿದೆ.