ಸಮಗ್ರ ನ್ಯೂಸ್: ಪಂಚ ಗ್ಯಾರೆಂಟಿಗಳಲ್ಲಿ ಒಂದಾದ ಯುವನಿಧಿಗೆ ಕೊನೆಗೂ ದಿನಾಂಕ ಫಿಕ್ಸ್ ಆಗಿದ್ದು, ಜನವರಿ 12ರಂದು ಶಿವಮೊಗ್ಗದಲ್ಲಿ ಅದ್ದೂರಿ ಚಾಲನೆ ದೊರೆಯಲಿದೆ. ಈ ಯೋಜನೆಗೆ ಒಟ್ಟು 250 ಕೋಟಿ ರೂ ಹಣ ನಿಗದಿ ಮಾಡಲಾಗಿದೆ
ಡಿಗ್ರಿ ಪದವಿ ಇದ್ದು ನಿರುದ್ಯೋಗಿಗಳಾಗಿರುವವರಿಗೆ ಯುವನಿಧಿ ಹಣ ಸೇರುತ್ತದೆ. ಮಧ್ಯದಲ್ಲಿ ಕೆಲಸ ಸಿಕ್ಕರೆ ಯುವನಿಧಿ ಹಣ ನೀಡಲಾಗುವುದಿಲ್ಲ. ಕೆಲಸದಲ್ಲಿದ್ದು ಹಣ ಪಡೆಯುವುದು ತಿಳಿದರೆ, ಪಡೆದಷ್ಟು ಹಣ ವಾಪಾಸ್ ಮಾಡಬೇಕು, ಜೊತೆಗೆ ಕಾನೂನು ಕ್ರಮ ಅನುಭವಿಸಬೇಕು
ಪ್ರತಿ ತಿಂಗಳು 25ರ ಒಳಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇದ್ದು, ಕರ್ನಾಟಕ ಒನ್, ಬಾಪೂಜಿ ಸೇವಾಕೇಂದ್ರ, ಗ್ರಾಮ ಒನ್‍ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು.
ಡಿಪ್ಲೋಮಾ ಓದಿದ್ದವರು 9ನೇ ಕ್ಲಾಸ್‍ನಿಂದ ಕರ್ನಾಟಕದಲ್ಲಿ ಓದಿರಬೇಕು ಮತ್ತು ಎಸ್‍ಎಸ್‍ಎಲ್‍ಸಿ, ಪಿಯುಸಿ ಹಾಗೂ ಡಿಗ್ರಿ“` ಕರ್ನಾಟಕದಲ್ಲೇ ಮಾಡಿರಬೇಕು







