Ad Widget .

ಪ್ರಶ್ನೆ ಮಾಡಿದ್ದಕ್ಕೆ ಪ್ರಿಯಕರನಿಗೆ ಬೆಂಕಿ ಇಟ್ಟ ರಾಣಿ..!

ಸಮಗ್ರ ನ್ಯೂಸ್: ಪ್ರಶ್ನೆ ಮಾಡಿದ ಪ್ರಿಯಕರನಿಗೆ ಮಹಿಳೆ ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Ad Widget . Ad Widget .

ಕಾನ್ಸ್​​ಟೇಬಲ್ ಸಂಜಯ್ ಮತ್ತು ಹೋಂ ಗಾರ್ಡ್ ರಾಣಿ ಇಬ್ಬರು ಬಸವನಗುಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮದುವೆಯಾಗಿ ಮಕ್ಕಳಿದ್ರೂ ಸಂಜಯ್ ಜೊತೆ ರಾಣಿ ಅನೈತಿಕ ಸಂಬಂಧ ಹೊಂದಿದ್ದಳು. ಒಂದೇ ಸೂರಿನಡಿ ಕೆಲಸ ಮಾಡುತ್ತಿದ್ದರಿಂದ ಇಬ್ಬರ ನಡುವೆ ಪ್ರೇಮವಾಗಿತ್ತು. ಆದರೆ ಕೆಲ ತಿಂಗಳಿನಿಂದ ಪ್ರಿಯಕರ ಸಂಜಯ್​ನಿಂದ ರಾಣಿ ಅಂತರ ಕಾಯ್ದುಕೊಂಡಿದ್ದಳು. ಎರಡು ದಿನದ ಹಿಂದೆ ಕರೆ ಮಾಡಿ ಸಂಜಯ್​ನನ್ನು ರಾಣಿ ಕರೆಸಿಕೊಂಡಿದ್ದಳು.

Ad Widget . Ad Widget .

ಈ ವೇಳೆ ಸಂಜಯ್ ಮತ್ತು ರಾಣಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಈ ಸಮಯದಲ್ಲಿ ಚೇತನ್ ಎಂಬಾತ ರಾಣಿಗೆ ಕರೆ ಮಾಡಿದ್ದಾನೆ. ಅನುಮಾನಗೊಂಡ ಸಂಜಯ್ ಯಾರು ಎಂದು ಪ್ರಶ್ನೆ ಮಾಡಿ ರಾಣಿಯ ಮೊಬೈಲ್ ಚೆಕ್ ಮಾಡಿದ್ದಾನೆ. ಚೇತನ್ ಜೊತೆ ರಾಣಿ ಸಲಿಗೆಯಿಂದ ಚಾಟ್ ಮಾಡಿರೋದು ಸಂಜಯ್ ಗಮನಕ್ಕೆ ಬಂದಿದೆ.

ಇದೇ ವಿಷಯವಾಗಿ ಸಂಜಯ್ ಮತ್ತು ರಾಣಿ ಮಧ್ಯೆ ಗಲಾಟೆ ನಡೆದಿದೆ. ಕ್ಯಾನ್​​ನಲ್ಲಿ ಸಂಜಯ್ ಪೆಟ್ರೋಲ್ ತಂದು ಸುಡ್ತಿಯಾ ಬೆಂಕಿ ಹಾಕು ಅಂತ ಹೇಳಿದ್ದಾನೆ. ಈ ವೇಳೆ ಸಂಜಯ್ ಹೊಟ್ಟೆ ಮತ್ತು ಬೆನ್ನಿನ ಭಾಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಕೂಡಲೇ ಸಂಜಯ್​ನನ್ನು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಂಜಯ್ ಸಾವನ್ನಪ್ಪಿದ್ದಾನೆ.

ಪೊಲೀಸರ ವಿಚಾರಣೆ ವೇಳೆ ಸಂಜಯ್​ ಬಂಕ್​ಗೆ ಹೋಗಿ ಪೆಟ್ರೋಲ್ ತಂದಿರೋದು. ಇದೊಂದು ಆಕಸ್ಮಿಕವಾಗಿ ನಡೆದ ಘಟನೆ ಎಂದು ರಾಣಿ ಹೇಳಿಕೆ ನೀಡಿದ್ದಾಳೆ. ಸದ್ಯ ಪೊಲೀಸರು ಆರೋಪಿ ರಾಣಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *