Ad Widget .

ನಾಲ್ಕು ವರ್ಷದ ಕೆಳಗಿನ ಮಕ್ಕಳ ಈ ನೆಗಡಿ ಔಷಧ ಬ್ಯಾನ್| ಭಾರತೀಯ ಔಷಧ ನಿಯಂತ್ರಣ ಮಂಡಳಿ ಆದೇಶ

ಸಮಗ್ರ ನ್ಯೂಸ್: ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ chlorpheniramine maleate ಮತ್ತು phenylephrine ಮಿಶ್ರಣದ ಔಷಧಿಗಳನ್ನು ಸಾಮಾನ್ಯ ನೆಗಡಿ ಅಥವಾ ಶೀತದ ಸಮಸ್ಯೆಗೆ ನೀಡುವುದನ್ನು ಭಾರತದ ಔಷಧಿ ನಿಯಂತ್ರಣ ಸಂಸ್ಥೆ ನಿರ್ಬಂಧಿಸಿದೆ. ಭಾರತದಲ್ಲಿ ತಯಾರಿಸಲಾದ ಕೆಮ್ಮಿನ ಸಿರಪ್‌ ಸೇವಿಸಿ ಜಾಗತಿಕವಾಗಿ 141 ಮಕ್ಕಳ ಸಾವಿನ ವಿದ್ಯಮಾನದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.

Ad Widget . Ad Widget .

ಈ ಫಿಕ್ಸೆಡ್‌ ಡ್ರಗ್‌ ಕಾಂಬಿನೇಶನ್‌ ಅಥವಾ ಮಿಶ್ರಣ ಮಕ್ಕಳಿಗೆ ಅನುಮೋದಿತವಲ್ಲ ಎಂಬ ಕುರಿತು ವ್ಯಾಪಕ ಚರ್ಚೆಯ ನಂತರ ನಾಲ್ಕು ವರ್ಷದ ಕೆಳಗಿನ ಮಕ್ಕಳಿಗೆ ಈ ಮಿಶ್ರಣದ ಔಷಧಿಯನ್ನು ನೀಡುವುದನ್ನು ನಿಷೇಧಿಸಲಾಗಿದೆ.

Ad Widget . Ad Widget .

ಈ ಕುರಿತಾದ ಆದೇಶವನ್ನು ಡಿಸೆಂಬರ್‌ 18ರಂದು ಹೊರಡಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಸಹ ಐದು ವರ್ಷದ ಕೆಳಗಿನ ಮಕ್ಕಳಿಗೆ ಶೀತ ಮತ್ತು ನೆಗಡಿ ಸಮಸ್ಯೆಗಾಗಿ ʼಓವರ್‌ ದಿ ಕೌಂಟರ್‌ʼ ಕೆಮ್ಮಿನ ಸಿರಪ್‌ ಅಥವಾ ಔಷಧಿಗಳನ್ನು ಶಿಫಾರಸು ಮಾಡುವುದಿಲ್ಲ.

2019ರಿಂದೀಚೆಗೆ ಗಾಂಬಿಯಾ, ಉಜ್ಬೆಕಿಸ್ತಾನ್‌ ಮತ್ತು ಕ್ಯಾಮರೂನ್‌ನಲ್ಲಿ ಕನಿಷ್ಠ 141 ಮಕ್ಕಳು ಕೆಮ್ಮು ನಿವಾರಕ ಸಿರಪ್‌ ಸೇವಿಸಿ ಸಾವನ್ನಪ್ಪಿರುವುದು ಭಾರತದಲ್ಲಿ ತಯಾರಾಗುವ ಔಷಧಿಗಳ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನೆತ್ತಿದೆ.

Leave a Comment

Your email address will not be published. Required fields are marked *