Ad Widget .

ನಾನು,ನನ್ನದು ಎಂಬ ಅಹಂಭಾವ ಬಿಟ್ಟಾಗ ನೆಮ್ಮದಿ – ಅಂಡಾಲ ಗಂಗಾಧರ ಶೆಟ್ಟಿ

ಸಮಗ್ರ ನ್ಯೂಸ್ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು , ಮಂಗಳೂರು ತಾಲೂಕು ಘಟಕ ಏರ್ಪಡಿಸಿದ ಹಿರಿಯ ಕವಿ ಮನೆಗೆ ಭೇಟಿ ಕಾರ್ಯಕ್ರಮವು ಅಂಡಾಲ ಗುತ್ತು ಚಾವಡಿಯಲ್ಲಿ ಡಿ.20 ರಂದು ನಡೆಯಿತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮನುಷ್ಯ , ನಾನು ನನ್ನದು ಎಂಬ ಅಹಂಭಾವವನ್ನು ತೊರೆದು , ಎಲ್ಲರನ್ನೂ ಪ್ರೀತಿಸುತ್ತಾ ಧರ್ಮ ಮಾರ್ಗದಲ್ಲಿ ಕರ್ಮ ನಿರತನಾದರೆ ಆನಂದ ಮತ್ತು ನೆಮ್ಮದಿ ಸಿಗುವುದು ಎಂದು ಹಿರಿಯ ಕವಿ ಅಂಡಾಲ ಗಂಗಾಧರ ಶೆಟ್ಟಿ ಹೇಳಿದರು. ಸಿರಿವಂತಿಕೆಯಿಂದ ಸಂತೋಷಪಡೆಯಬಹುದು ಎಂಬುದು ಬರೀ ಭ್ರಮೆ , ಅದು ಇಲ್ಲದೆಯೂ ಒಂದು ಒಳ್ಳೆಯ ಮಾತಿನಿಂದ ಸಂತಸ ಕೊಡಬಹುದು , ಆದುದರಿಂದ ಮಾನವೀಯತೆಯೇ ಮುಖ್ಯ ಎನ್ನುತ್ತಾ ತಮ್ಮ ಸಾಹಿತ್ಯದ ಹಾದಿಯ ನೆನಪುಗಳನ್ನು ಹಂಚಿಕೊಂಡರು.

Ad Widget . Ad Widget . Ad Widget .

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ। ವಸಂತ ಕುಮಾರ ಪೆರ್ಲ ಅವರು , ಇಂತಹ ಕಾರ್ಯಕ್ರಮಗಳಿಂದ , ಓರ್ವ ವ್ಯಕ್ತಿ ಯಾವ ಹಿನ್ನೆಲೆ ಮತ್ತು ಪ್ರೇರಣೆಯಿಂದ ಸಾಹಿತ್ಯದತ್ತ ಪ್ರವೃತ್ತರಾದರು ಎಂಬುದನ್ನು ತಿಳಿದುಕೊಳ್ಳಬಹುದು , ಗಂಗಾಧರ ಶೆಟ್ಟಿಯವರು ವಿಜಯಾ ಬ್ಯಾಂಕ್ ಉದ್ಯೋಗಿಯಾಗಿದ್ದೂ ಸಾಹಿತ್ಯ ಕೃಷಿ ಮಾಡಬೇಕಿದ್ದರೆ ಅವರ ಪರಿಸರ ಮತ್ತು ಮನೆಯವರ ಪ್ರೋತ್ಸಾಹವೇ ಮುಖ್ಯ ಕಾರಣ ಎಂದರು. ಅವರ ಸಾಹಿತ್ಯದಲ್ಲಿ ಅಧ್ಯಾತ್ಮ , ದೈವಭಕ್ತಿ ಮತ್ತು ಸಕಾರಾತ್ಮಕ ಚಿಂತನೆಗಳ ಅಂತ: ಸ್ರೋತವಿರುವ ಬಗೆಯನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ಘಟಕದ ಅಧ್ಯಕ್ಷ ಡಾ। ಮಂಜುನಾಥ ಎಸ್. ರೇವಣ್ಕರ್ ಗಂಗಾಧರ ಶೆಟ್ಟಿ- ವಿಶಾಲಾಕ್ಷಿ ದಂಪತಿಯನ್ನು ಸನ್ಮಾನಿಸಿ, ಅಭಿನಂದನೆಯ ಮಾತುಗಳನ್ನಾಡಿದರು.

ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಸ್ವಾಗತಿಸಿದರು. ಜ್ಯೂನಿಯರ್ ರಾಜ್ ಕುಮಾರ್ ಖ್ಯಾತಿಯ ಜಗದೀಶ್ ಶಿವಪುರ ಪ್ರಾರ್ಥಿಸಿದರು. ಸಮಿತಿ ಸದಸ್ಯ ಬಿ. ಕೃಷ್ಣಪ್ಪ ನಾಯ್ಕ್ ಸಹಕರಿಸಿದರು. ಬದ್ರುದ್ದೀನ್ ಕೂಳೂರು , ರೆಹಮಾನ್ ಖಾನ್ ಕುಂಜತ್ತಬೈಲು ಹಾಗೂ ಕವಿ ಕುಟುಂಬಿಕರು ಉಪಸ್ಥಿತರಿದ್ದರು. ಗೌ. ಕೋಶಾಧಿಕಾರಿ ಎನ್. ಸುಬ್ರಾಯ ಭಟ್ , ನಿರೂಪಿಸಿ ವಂದಿಸಿದರು.

Leave a Comment

Your email address will not be published. Required fields are marked *