Ad Widget .

ಕೋವಿಡ್ ಭೀತಿಯ ನಡುವೆ ಕರಾವಳಿಯಲ್ಲಿ ದಿಡೀರ್ ಜ್ವರದ ಪ್ರಕರಣ ಏರಿಕೆ| ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್

ಸಮಗ್ರ ನ್ಯೂಸ್: ಕೇರಳದಲ್ಲಿ ಕೋವಿಡ್ ರೂಪಾಂತರಿ ಜೆಎನ್-1 ವೈರಸ್ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಕೇರಳದ ಜೊತೆ ಗಡಿ ಹಂಚಿಕೊಂಡ ದಕ್ಷಿಣಕನ್ನಡ ಜಿಲ್ಲೆಯಲ್ಲಿಯೂ ಕೋವಿಡ್ ಆತಂಕ ಹೆಚ್ಚಾಗುತ್ತಿದೆ. ಹೀಗಾಗಿ ಜಿಲ್ಲೆಯ ಸ್ವರ್ಗ, ಸಾರಡ್ಕ, ಜಾಲ್ಸೂರು, ತಲಪಾಡಿ, ಈಶ್ವರಮಂಗಲ ಗಡಿಪ್ರದೇಶದಲ್ಲಿ ಅಲರ್ಟ್‌ಗೆ ಸೂಚಿಸಲಾಗಿದೆ.

Ad Widget . Ad Widget .

ಇದರ ನಡುವೆ ಹವಾಮಾನ ವೈಪರೀತ್ಯಗಳಿಂದ ವೈರಲ್ ಫಿವರ್ ಪ್ರಮಾಣ ದಿಢೀರ್ ಏರಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈರಸ್ ಜ್ವರದ ಪ್ರಮಾಣ ಏರಿಕೆಯಾಗಿದೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

Ad Widget . Ad Widget .

ದ.ಕ ಜಿಲ್ಲೆಯ ಸುಳ್ಯ, ಕಡಬ, ಬಂಟ್ವಾಳ, ಬೆಳ್ತಂಗಡಿ ತಾಲೂಕು ಭಾಗದಲ್ಲಿ ಜ್ವರದ ಪ್ರಮಾಣ ಅಧಿಕವಾಗಿದೆ. ಖಾಸಗಿ ಕ್ಲಿನಿಕ್​ಗಳಲ್ಲಿ ಕಳೆದ ಒಂದು ವಾರದಿಂದ ಜ್ವರದ ಕಾರಣಕ್ಕೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ SARI ಮತ್ತು ILI ಪ್ರಕರಣಗಳ ಬಗ್ಗೆ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ಬಗ್ಗೆ ಖಾಸಗಿ ಸಂಸ್ಥೆ, ವೈದ್ಯಕೀಯ ಕಾಲೇಜುಗಳಿಗೆ ಈಗಾಗಲೇ ಸುತ್ತೋಲೆ ಕಳಿಸಲಾಗಿದೆ ಎಂದು ದಕ್ಷಿಣ ಕನ್ನಡ DHO ಡಾ.ಎಚ್.ಆರ್ ತಿಮ್ಮಯ್ಯ ತಿಳಿಸಿದ್ದಾರೆ.

ಖಾಸಗಿ ಸಂಸ್ಥೆ, ವೈದ್ಯಕೀಯ ಕಾಲೇಜುಗಳಿಗೆ ಈಗಾಗಲೇ ಸುತ್ತೋಲೆ ಹೊರಡಿಸಿದ್ದೇವೆ. ILI ಮತ್ತು SARI ಪ್ರಕರಣಗಳ ಬಗ್ಗೆ ನಿಗಾ ಇಡಬೇಕು. ಈ ಬಗ್ಗೆ ಇಲಾಖೆಗೆ ಮಾಹಿತಿ ಕೊಡುವಂತೆ ಸೂಚನೆ ನೀಡಿದ್ದೇವೆ. ತಾಲೂಕು ವೈದ್ಯರುಗಳ ಸಭೆ ಕರೆದು ಸಹ ಸೂಚನೆ ಕೊಟ್ಟಿದ್ದೇವೆ. SARI ಪ್ರಕರಣಗಳೆಲ್ಲವನ್ನು ಪರೀಕ್ಷೆಗೆ ಒಳಪಡಿಸಬೇಕಾಗಿದೆ. ILI ಪ್ರಕರಣಗಳಲ್ಲಿ 20 ರಲ್ಲಿ ಒಂದು ಟೆಸ್ಟ್ ಗೆ ಒಳಪಡಿಸುತ್ತೇವೆ. ರಾಜ್ಯಮಟ್ಟದಲ್ಲಿ ಬರುವ ನಿರ್ದೇಶನವನ್ನು ಪಾಲಿಸುತ್ತೇವೆ. ಕೇರಳದಿಂದ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜಿಲ್ಲೆಗೆ ಬರ್ತಾರೆ. ಎಲ್ಲಾ ವಿದ್ಯಾಸಂಸ್ಥೆಗಳಿಗೂ ಲಿಖಿತವಾಗಿ ತಿಳಿಸುತ್ತೇವೆ. ಕೇರಳದಿಂದ ಬರುವ ವಿದ್ಯಾರ್ಥಿಗಳಲ್ಲಿ ರೋಗ ಲಕ್ಷಣ ಕಂಡು ಬಂದ್ರೆ ಅವರನ್ನು ಐಸೋಲೇಟ್ ಮಾಡಬೇಕು. ಅಗತ್ಯ ಬಿದ್ರೆ ಚಿಕಿತ್ಸೆ ನೀಡಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದೇವೆ ಎಂದು ಡಾ.ಎಚ್.ಆರ್ ತಿಮ್ಮಯ್ಯ ಅವರು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದ್ದಾರೆ.

Leave a Comment

Your email address will not be published. Required fields are marked *