Ad Widget .

ರಾಜಕೀಯ, ಧಾರ್ಮಿಕ ಸಮಾವೇಶವನ್ನು ಮೀರಿಸಿದ ಗುತ್ತಿಗಾರಿನ ಸೌಜನ್ಯಳ ಪರ ನ್ಯಾಯಕ್ಕಾಗಿ ಹೋರಾಟ| ಅಜೆಂಡಾ, ಸಿದ್ದಾಂತಗಳಿಗೆ ಎರಡನೇ ಪ್ರಾಶಸ್ತ್ಯ;ಪ್ರಬುದ್ದ ಯೋಚನೆಗಳತ್ತ ಯುವ ಸಮುದಾಯದ ಮಿಡಿತ..?

ಸಮಗ್ರ ನ್ಯೂಸ್: ಸೌಜನ್ಯ ಹೋರಾಟ ಸಮಿತಿ ಗುತ್ತಿಗಾರು ವತಿಯಿಂದ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ‌ ಜರುಗಿದ ಪ್ರತಿಭಟನಾ ಸಭೆ ಗುತ್ತಿಗಾರಿನ ಮಟ್ಟಿಗೆ ಐತಿಹಾಸಿಕ ಜನಸ್ತೋಮವಾಗಿದ್ದು , ಯುವ ಸಮುದಾಯದ ಪ್ರಯತ್ನಗಳಿಗೆ ಸಿಕ್ಕ ಯಶಸ್ಸು ಎಂದೇ ವಿಶ್ಲೇಷಿಸಲಾಗಿದೆ.

Ad Widget . Ad Widget .

ಸಂಘಟಕರ ನಿರೀಕ್ಷೆಯನ್ನು ಮೀರಿ ನೆರೆದಿದ್ದ ಜನಸ್ತೋಮ ಗುತ್ತಿಗಾರಿನ ಮಟ್ಟಿಗೆ ಇದುವರೆಗೆ ರಾಜಕೀಯ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಮಾವೇಶಗೊಂಡಿದ್ದ ಜನಸಂಖ್ಯೆಯನ್ನು ಮೀರಿಸಿದ ಕಾರ್ಯಕ್ರಮವಾಗಿತ್ತು.

Ad Widget . Ad Widget .

ಎರಡು ದಶಕಗಳ ಹಿಂದೆ ಗುತ್ತಿಗಾರಿನಲ್ಲಿ ನಡೆದಿದ್ದ ಕನ್ನಡ ಸಾಹಿತ್ಯ ಸಮ್ಮೇಳನ‌ ಮತ್ತು ಪ್ರಥಮ‌ ನವಸಾಕ್ಷರರ ಸಮ್ಮೇಳನದ ಸಾಹಿತ್ಯ ಸಂಗಮ ಇಲಾಖೆ ಮತ್ತು ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಜರುಗಿತ್ತು. ಆದರೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಏಕಕಾಲಕ್ಕೆ ಸಮಾವೇಶಗೊಂಡಿರಲಿಲ್ಲ ಎಂದು ಹಲವರು ನೆನಪಿಸಿಕೊಳ್ಳುತ್ತಿದ್ದಾರೆ.

ಸೈದ್ದಾಂತಿಕ ಭಿನ್ನತೆಗಳ ನಡುವೆ ಸಮಾನಮನಸ್ಕ ಯೋಚನೆಗಳ ಉದ್ದೇಶಗಳೊಂದಿಗೆ ಸಂಘಟಿಸಿದ ಯುವ ಸಮುದಾಯದ ಪ್ರಯತ್ನಗಳಿಗೆ ಕರೆಗೊಟ್ಟ ಜನತೆ ತಾವು ಕೂಡಾ ಅಜೆಂಡಾ, ಸಿದ್ದಾಂತಗಳಿಗೆ ಎರಡನೇ ಪ್ರಾಶಸ್ತ್ಯ ನೀಡಿ ಬೃಹತ್ ಜನಸ್ತೋಮದ ಸಂಗಮವಾಗಿರುವುದು
ಪ್ರಬುದ್ದ ಯೋಚನೆಗಳತ್ತ ಯುವ ಸಮುದಾಯವು ಮಿಡಿತಗೊಂಡಿರುವುದನ್ನು ಸಾರಿ ಹೇಳಿದೆ.

ಸೌಜನ್ಯಳ ನ್ಯಾಯಕ್ಕಾಗಿ ಹಾತೊರೆಯುತಿರುವ ನೂರಾರು ಸಮಾನ ಮನಸ್ಕ ಯುವ ಸಮುದಾಯ ಪಕ್ಷಾತೀತವಾಗಿ ಏಕಮನಸ್ಕವಾಗಿ ಒಗ್ಗಟ್ಟು,
ಹುರುಪಿನಿಂದ ಸಿದ್ದತೆಯಲ್ಲಿ ತೊಡಗಿಸಿಕೊಂಡಿತ್ತು. ರಾಷ್ಟ್ರೀಯ ಪಕ್ಷಗಳ ಹಲವಾರು ನಾಯಕರನ್ನೊಳಗೊಂಡ ರಾಜಕೀಯ ಶಕ್ತಿ ಕೇಂದ್ರ ಎನಿಸಿರುವ ಮತ್ತು ಬಹು ಆಯಾಮಗಳ ಕೇಂದ್ರಸ್ಥಾನವೆನಿಸಿರುವ ಗುತ್ತಿಗಾರಿನಲ್ಲಿ ಆಯೋಜಿತ ಪ್ರತಿಭಟನೆ ಕುತೂಹಲವೂ ಮೂಡಿಸಿತ್ತು. ರಾಜಕೀಯ ಪ್ರಮುಖ ನಾಯಕರು ತಟಸ್ಥ ಧೋರಣೆ ಅನುಸರಿಸಿದ್ದರು.

ತಮ್ಮ ನೆರವು, ಮಾರ್ಗದರ್ಶನ, ಕೈಚಳಕವಿಲ್ಲದೆ ಎರಡು ರಾಷ್ಟ್ರೀಯ ಪಕ್ಷಗಳ ಶಕ್ತಿಕೇಂದ್ರ ಎನಿಸಿಕೊಂಡಿದ್ದ ಗುತ್ತಿಗಾರಿನಲ್ಲಿ ಕಾರ್ಯಕ್ರಮ ಯಶಸ್ವಿಗೊಳ್ಳದು ಎಂದೇ ಭಾವಿಸಿದ್ದರು. ತಮಗೆ ವೈಯಕ್ತಿಕ ರಾಜಕೀಯ ಲಾಭವಿಲ್ಲದಿರುವುದರಿಂದ ಕಾರ್ಯಕ್ರಮಕ್ಕೂ ಬಹುತೇಕ ಮಂದಿ ಭಾಗವಹಿಸಿರಲಿಲ್ಲ, ಸಂಘಟನಾ ಕಾರ್ಯಕ್ಕೂ ನೆರವಾಗಿರಲಿಲ್ಲ.

ಆದರೆ ಈ ಹಿಂದಿನ ಬೃಹತ್ ರಾಜಕೀಯ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಮೀರಿ ಜನ ಸಂಗಮಗೊಂಡಿದ್ದು ಸ್ವಾರ್ಥ, ನಿಷ್ಕಾಳಜಿಯ ರಾಜಕಾರಣಿಗಳ ಭವಿಷ್ಯದ ಬಗೆಗಿನ ಚಿಂತನೆ ಬಗೆಗೆ ಥರಗುಟ್ಟಿಸಿದ್ದಂತೂ ಸುಳ್ಳಲ್ಲ. ಸೌಜನ್ಯಳ ಪರ ಹೋರಾಟದಲ್ಲಿ ಅತ್ಯಂತ ಯಶಸ್ವೀ ಕಾರ್ಯಕ್ರಮ ಇದಾಗಿದ್ದು, ಹೋರಾಟಗಾರರಿಗೆ ಹೊಸ ಭರವಸೆ ನೀಡಿದ್ದಂತೂ ಸತ್ಯ.

Leave a Comment

Your email address will not be published. Required fields are marked *