Ad Widget .

ಹೊಸ ವರ್ಷಕ್ಕೆ ಹೊಸ ನಿಯಮ; ಹಲವು ಆರ್ಥಿಕ ಬದಲಾವಣೆಗಳಿಗೆ ಸಜ್ಜಾಗಿ

ಸಮಗ್ರ ನ್ಯೂಸ್: ಕ್ಯಾಲೆಂಡರ್ ವರ್ಷ 2023ಕ್ಕೆ ವಿದಾಯ ಹೇಳಲು ದಿನಗಣನೆ ಆರಂಭವಾಗಿದೆ. ದೈನಂದಿನ ಜನಜೀವನದ ಮೇಲೆ ಪರಿಣಾಮ ಬೀರುವಂಥ ಅನೇಕ ಬದಲಾವಣೆಗಳು 2024ರ ಜನವರಿಯಿಂದ ಜಾರಿಗೆ ಬರಲಿವೆ. ಡಿಸೆಂಬರ್ 31ರ ಮಧ್ಯರಾತ್ರಿ ಕಳೆಯುತ್ತಲೇ ಜಾರಿಗೆ ಬರಲಿರುವ ಬದಲಾವಣೆಗಳತ್ತ ಒಂದು ಪಕ್ಷಿ ನೋಟ ಇಲ್ಲಿದೆ.

Ad Widget . Ad Widget .

*ಡಿಮ್ಯಾಟ್ ನಾಮನಿರ್ದೇಶನ:* ಷೇರು ಮತ್ತು ಸೆಕ್ಯುರಿಟಿಗಳನ್ನು ವಿದ್ಯುನ್ಮಾನ ರೂಪದಲ್ಲಿ ಹೊಂದಲು ಬಳಕೆಯಾಗುವ ಡಿಮ್ಯಾಟ್ ಖಾತೆಗೆ 2024ರ ಜನವರಿ 1ರೊಳಗೆ ಜನರು ತಮ್ಮ ನಾಮನಿರ್ದೇಶನ ಘೋಷಣೆಗಳನ್ನು ಸಲ್ಲಿಸಬೇಕು ಎಂಬುದನ್ನು ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿ ಕಡ್ಡಾಯಗೊಳಿಸಿದೆ. ಅದನ್ನು ಪಾಲಿಸಲು ವಿಫಲರಾದವರು ಷೇರು ವ್ಯವಹಾರ ನಡೆಸಲು ಸಾಧ್ಯವಾಗುವುದಿಲ್ಲ.

Ad Widget . Ad Widget .

*ಬ್ಯಾಂಕ್ ಲಾಕರ್ ಒಪ್ಪಂದ*: ಡಿಸೆಂಬರ್ 31ರೊಳಗೆ ಪರಿಷ್ಕೃತ ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಅವರ ಲಾಕರ್ಗಳು ಸ್ಥಗಿತಗೊಳ್ಳುತ್ತವೆ (ಫ್ರೀಜ್) ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಎಚ್ಚರಿಸಿದೆ.

ಆಧಾರ್ ಉಚಿತ ತಿದ್ದುಪಡಿ: ಆಧಾರ್ ವಿವರಗಳನ್ನು ಆನ್ಲೈನ್ನಲ್ಲಿ ಉಚಿತವಾಗಿ ಸಕಾಲಿಕಗೊಳಿಸುವ ಗಡುವು ಡಿ. 31ಕ್ಕೆ ಮುಗಿಯಲಿದ್ದು, ನಂತರ ಈ ಪ್ರಕ್ರಿಯೆಗೆ 50 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.

*ಸಿಮ್ ಕಾರ್ಡ್ ಕೆವೈಸಿ:* ಮೊಬೈಲ್ ಫೋನ್ ಬಳಕೆದಾರರು ಹೊಸ ಸಿಮ್ ಖರೀದಿಸಬೇಕಾದರೆ ಸಲ್ಲಿಸುವ ಪೇಪರ್-ಆಧಾರಿತ ಗ್ರಾಹಕರ ವಿವರ (ಕೆವೈಸಿ) ಡಿಸೆಂಬರ್ 31ರ ನಂತರ Development ಬರುವುದಿಲ್ಲ ಎಂದು ದೂರಸಂಪರ್ಕ ಇಲಾಖೆ ಸ್ಪಷ್ಟಪಡಿಸಿದೆ.

Leave a Comment

Your email address will not be published. Required fields are marked *