Ad Widget .

2023ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ/ ಪ್ರಶಸ್ತಿಗೆ ಭಾಜನರಾದ ಲಕ್ಷ್ಮೀಶ ತೋಳ್ಪಾಡಿ

ಸಮಗ್ರ ನ್ಯೂಸ್: 2023ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಪ್ರಕಟವಾಗಿದ್ದು, ಕರ್ನಾಟಕದ ಹೆಸರಾಂತ ಸಾಹಿತಿ ಹಾಗೂ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮಾಧವ್ ಕೌಶಿಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 24 ಭಾರತೀಯ ಭಾಷೆಗಳಲ್ಲಿ ಪ್ರತಿಷ್ಠಿತ ತೀರ್ಪುಗಾರರ ಸದಸ್ಯರು ಶಿಫಾರಸು ಮಾಡಿದ ಪ್ರಶಸ್ತಿಗಳನ್ನು ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಮಂಡಳಿಯು ಅನುಮೋದಿಸಿತು.

Ad Widget . Ad Widget .

9 ಕವನಗಳು, 6 ಕಾದಂಬರಿಗಳು, 5 ಸಣ್ಣ ಕಥೆಗಳು, 3 ಪ್ರಬಂಧಗಳು ಮತ್ತು 1 ಸಾಹಿತ್ಯ ಅಧ್ಯಯನಗಳು 2023ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದಿದ್ದು, ಇದರಲ್ಲಿ ಲಕ್ಷ್ಮೀಶ ತೋಳ್ಪಾಡಿ ಅವರು ಬರೆದ “ಮಹಾಭಾರತ ಅನುಸಂಧಾನದ ಭಾರತಯಾತ್ರೆ” ಪ್ರಬಂಧಕ್ಕೆ ಈ ವಿಶೇಷ ಗೌರವ ಅರಸಿ ಬಂದಿದೆ.

Ad Widget . Ad Widget .

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಶಾಂತಿಗೋಡು ಗ್ರಾಮದವರಾದ ಲಕ್ಷ್ಮೀಶ ತೋಳ್ಪಾಡಿ ಅವರು ಲೇಖಕ, ಚಿಂತಕ ಮತ್ತು ವಿದ್ವಾಂಸರು. ಇವರು ಕೆಲ ಕಾಲ ಬೆಂಗಳೂರಿನಲ್ಲಿದ್ದಾಗ ವೈ.ಎನ್.ಕೆ, ಗೋಪಾಲಕೃಷ್ಣ ಅಡಿಗ, ಲಂಕೇಶ ಪತ್ರಿಕೆ, ಕಿ.ರಂ. ನಾಗರಾಜ ಅವರ ಒಡನಾಟ ಇವರಿಗೆ ಸಿಕ್ಕಿತ್ತು.

ಹಲವು ಪತ್ರಿಕೆಗಳಲ್ಲಿ ಲಕ್ಷ್ಮೀಶ ಅವರ ಲೇಖನಗಳು ಪ್ರಕಟವಾಗಿದ್ದು, ಭಗವದ್ಗೀತೆಯ ಬಗೆಗಿನ ಮಹಾಯುದ್ದಕ್ಕೆ ಮುನ್ನ ಮೊದಲ ಪ್ರಕಟಿತ ಕೃತಿ. ಈ ಕೃತಿಯ ಬಗ್ಗೆ ಬಂದಿರುವ ಪತ್ರಿಕಾ ವಿಮರ್ಶೆಯಲ್ಲಿ ಆಧುನಿಕನಿಗೆ ಹೃದಯಸ್ಪರ್ಶಿ ಎಂಬ ಮೆಚ್ಚುಗೆ ವ್ಯಕ್ತವಾಗಿತ್ತು. ಅಂತರ್ಜಾಲ ಪತ್ರಿಕೆಯಲ್ಲಿ ಭಾಗವತದ ಬಗ್ಗೆ ಬರೆದ ಸರಣಿ ಬರಹಗಳ ಸಂಕಲನ ಸಂಪಿಗೆ ಭಾಗವತ, ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ, ಭವ ತಲ್ಲಣ (ತಾಳಮದ್ದಲೆ ಕುರಿತು) ಕೃತಿಗಳು ಪ್ರಕಟವಾಗಿವೆ.

Leave a Comment

Your email address will not be published. Required fields are marked *