ಸಮಗ್ರ ನ್ಯೂಸ್: ಅದೊಂದು ವಿಚಿತ್ರ ಪ್ರೇಮಕಥೆ. ಅವನು ಎರಡು ಮಕ್ಕಳ ತಂದೆ. ಅವಳು ಕೂಡಾ ವಿವಾಹಿತೆ. ಆದ್ರೆ ಆತ ತನ್ನ ಹೆಂಡತಿ ಸಹೋದರಿ ಜೊತೆ ಪ್ರೇಮಪಾಶದಲ್ಲಿ ಸಿಲುಕ್ಕಿದ್ದ. ಅವಳು ಗಂಡನ ಬಿಟ್ಟು ಬಾವನ ಜೊತೆ ಸಂಬಂಧ ಬೆಳೆಸಿದ್ಲು. ಕದ್ದುಮುಚ್ಚಿ ಇದ್ದ ಬಾವ-ನಾದಿನಿ ಸಂಬಂಧ ಗುಟ್ಟು ರಟ್ಟಾಗಿತ್ತು. ಹೆಂಡತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿತ್ತು ಆ ಜೋಡಿ. ಆದ್ರೆ ಇದೀಗ ಆ ಜೋಡಿ ನೇಣಿಗೆ ಕೊರಳೊಡ್ಡಿದೆ.
ಅವರದ್ದು ಬೆಂಗಳೂರು ಆದರು ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಹುಬ್ಬಳ್ಳಿಯಲ್ಲಿ. ಆತ್ಮಹತ್ಯೆಗೂ ಮುನ್ನ ಆ ಜೋಡಿ ಸೆಲ್ಪಿ ವಿಡಿಯೋ ಮಾಡಿಕೊಂಡಿದೆ. ಅದೂ ಅವರಿಗೆ ಸಹಾಯ ಮಾಡಿದ ಆಟೋ ಡ್ರೈವರ್ ಮನೆಯಲ್ಲಿ. ಆತ್ಮಹತ್ಯೆಗೆ ಶರಣಾದವರ ಹೆಸರು 36 ವರ್ಷದ ಲೋಕೇಶ್ ಮತ್ತು 26 ವರ್ಷದ ಶಾಂತಾ. ಮೂಲತಃ ಇವರಿಬ್ಬರೂ ಬೆಂಗಳೂರು ನಿವಾಸಿಗಳು. ಭಾನುವಾರ ಸಂಜೆ ಹುಬ್ಬಳ್ಳಿಗೆ ಬಂದ ಇವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಲೋಕೇಶ್ ಗೆ ಪಾರ್ವತಿ ಎಂಬುವರ ಜೊತೆ ಮದುವೆಯಾಗಿತ್ತು.ಮದುವೆಯಾಗಿ ಎರಡು ಮಕ್ಕಳಿವೆ. ತನ್ನ ಹೆಂಡತಿಯ ಸಹೋದರಿ ಶಾಂತಾ ಜೊತೆ ಲೋಕೇಶ್ ಅಕ್ರಮ ಸಂಬಂಂಧ ಹೊಂದಿದ್ದ. ಕದ್ದು ಮುಚ್ಚಿ ಹೆಂಡತಿಯ ಸಹೋದರಿ ಶಾಂತಾ ಜೊತೆ ತಿರುಗಾಡ್ತಿದ್ದ. ಕಳೆದ ಗುರುವಾರ ಪಾರ್ವತಿಗೆ ಈ ಜೋಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿತ್ತು. ಇದನ್ನು ನೋಡಿ ಪಾರ್ವತಿ ಬೇಸತ್ತು ಮನೆಯೊಳಗೆ ರೂಂ ಬಾಗಿಲು ಹಾಕಿಕೊಂಡಿದ್ದಳು. ತನ್ನ ತಂಗಿಯ ಜೊತೆ ಗಂಡನನ್ನ ಕಂಡ ಪಾರ್ವತಿ ಇನ್ನೂ ಕುಸಿದು ಹೋಗಿದ್ಲು. ಯಾವಾಗ ಹೆಂಡತಿ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಲೋಕೇಶ್ ಹಾಗೂ ಶಾಂತಾ ತಗಲಾಕೊಂಡ್ರೋ ಅವರ ಮಾನ ಮಾರ್ಯದೆ ಹೋಗಿತ್ತು.
ಇದಾದ ಬಳಿಕ ನಾವಿನ್ನು ಇರಬಾರದು ಎಂದು ಅಂದುಕೊಂಡ ಬಾವ-ನಾದಿನಿ ಸಾಯಬೇಕು ಎಂದು ನಿರ್ಧಾರ ಮಾಡ್ತಾರೆ, ಲಾಡ್ಜ್ ಒಂದರಲ್ಲಿ ಅವರು ಆತ್ಮಹತ್ಯೆ ಮಾಡಿಕೊಳ್ಳೋಕೆ ಪ್ಲ್ಯಾನ್ ಮಾಡಿದ್ರು. ಹುಬ್ಬಳ್ಳಿಗೆ ಬಂದಿಳಿದು ಆಟೋ ಒಂದನ್ನ ಕೇಳ್ತಾರೆ. ಹುಬ್ಬಳ್ಳಿಯ ಅಕ್ಷಯ್ ಪಾರ್ಕ್ ನಲ್ಲಿ ಆಟೋ ಹತ್ತಿದ ಜೋಡಿಗೆ ಆಟೋ ಡ್ರೈವರ್ ಪರಿಚಯ ಆಗತ್ತೆ. ಅಸಲಿಗೆ ಆಟೋ ಡ್ರೈವರ್ ಹಾಗೂ ಆ ಜೋಡಿಯ ಸಮುದಾಯ ಒಂದೇ ಆಗಿರೋ ಕಾರಣಕ್ಕೆ ಆಟೋ ಚಾಲಕ ನಮ್ಮ ಮನೆಯಲ್ಲಿ ಫ್ರೆಷ್ ಆಗಿ ಎಂದು ಹೇಳ್ತಾನೆ. ಅವರನ್ನ ಬಿಟ್ಟು ಆಟೋ ಚಾಲಕ ಹೊರ ಹೋದಾಗ ಅವರಿಬ್ಬರೂ ಅದೇ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮನ್ನು ನಂಬಿ ಆಟೋ ಚಾಲಕ ಮನೆ ಕೊಟ್ಟಿರೋದಕ್ಕೆ ಆತ್ಮಹತ್ಯೆಗೂ ಮುನ್ನ ಆಟೋ ಚಾಲಕ ಮಾರುತಿ ಅವರಲ್ಲಿ ಲೋಕೇಶ್-ಶಾಂತಾ ಕ್ಷಮೆಯನ್ನು ಕೇಳಿದ್ದಾರೆ. ಇದಲ್ಲದೆ ಲೋಕೇಶ್ ತನ್ನ ಹೆಂಡತಿಗೆ ಕೊನೆಯ msg ಕೂಡಾ ಮಾಡಿದ್ದಾನೆ.
ನೇಣಿಗೆ ಕೊರಳೊಡ್ಡಿದ್ದ ಶಾಂತಾಗೆ ಈಗಾಗಲೇ ರಮೇಶ್ ಎಂಬುವರ ಜೊತೆ ಮದುವೆಯಾಗಿತ್ತು. ಈ ಹಿಂದೆ ಶಾಂತಾ ಇನ್ನೂ ಇಬ್ಬರ ಜೊತೆ ಮದುವೆಯಾಗಿದ್ದಳು. ಆದರೆ ಆ ಮದುವೆಗಳನ್ನು ಕಡಿದುಕೊಂಡಿದ್ದಳು. ರಮೇಶ್ ಜೊತೆ ಶಾಂತಾದು ಮೂರನೇ ಮದುವೆ ಎನ್ನಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಇದೇ ಶಾಂತಾ ಮತ್ತೊಬ್ಬರ ಜೊತೆ ಅಫೇರ್ ಇರೋದು ಗಂಡ ರಮೇಶ್ನಿಗೆ ಗೊತ್ತಾಗಿತ್ತು. ಇದು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಅದು ಹೇಗೋ ಪೊಲೀಸರು ಸರಿ ಮಾಡಿದ್ದರು. ಅದಾದ ಬಳಿಕವೂ ಶಾಂತಾ ತನ್ನ ಚಟ ಬಿಟ್ಟಿರಲಿಲ್ಲ. ಅಕ್ಕನ ಗಂಡನ ಜೊತೆಯೇ ಸಂಬಂಧ ಕುದುರಿಸಿಕೊಂಡಿದ್ದಳು. ಆದ್ರೆ ಅದು ಯಾರಿಗೂ ಗೊತ್ತಾಗಲ್ಲ ಅಂದುಕೊಂಡ ಶಾಂತಾ, ಅಕ್ಕನ ಗಂಡನ ಜೊತೆಯೇ ಸಂಬಂಧ ಬೆಳೇಸ್ತಾಳೆ.
ಆತ್ಮಹತ್ಯೆಗೂ ಮುನ್ನ ಬೀಯರ್ ಸೇವನೆ ಮಾಡಿದ್ದಾರೆ. ಮೃತ ದೇಹದ ಪಕ್ಕ ಬೀಯರ್ ಬಾಟಲ್ ಗಳಿವೆ. ಪೊಲೀಸರು ಆಟೋ ಚಾಲಕ ಮಾರುತಿಯನ್ಮ ವಿಚಾರಣೆ ಮಾಡುತ್ತಿದ್ದಾರೆ.
ಒಟ್ಟಾರೆ ಅನೈತಿಕ ಸಂಬಂಧಕ್ಕೆ ಎರಡು ಜೀವಗಳು ಬಲಿಯಾದರೆ, ಮಾನವೀಯತೆ ತೋರಿದ ಆಟೋ ಚಾಲಕನ ಜೀವನವೂ ಬೀದಿಗೆ ಬಿದ್ದಿದೆ