KSRTC ಹೆಸರು ಬಳಕೆಗೆ ಕರ್ನಾಟಕಕ್ಕೆ ಗ್ರೀನ್ ಸಿಗ್ನಲ್| ಕೇರಳದ ಅರ್ಜಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

ಸಮಗ್ರ ನ್ಯೂಸ್: KSRTC ಹೆಸರು ಬಳಕೆ ವಿಚಾರವಾಗಿ ಕೇರಳ ಸಾರಿಗೆ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ವಜಾ ಮಾಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ KSRTC ಅಂತ ಹೆಸರು ಬಳಸಲು ಯಾವುದೇ ಅಭ್ಯಂತರ ಇಲ್ಲ ಅಂತ ಹೈಕೋರ್ಟ್‌ ಹೇಳಿದೆ. ಅಂದಹಾಗೆ 1973ರಿಂದ ಈ ಹೆಸರನ್ನ ಬಳಸ್ತಿರುವ ಬಗ್ಗೆ ಕರ್ನಾಟಕ ದಾಖಲೆಗಳನ್ನು ಸಲ್ಲಿಸಿ ಟ್ರೇಡ್‌ ಮಾರ್ಕ್‌ ಪಡೆದಿದೆ.

Ad Widget ... ..

ಚೆನ್ನೈ ಮೂಲದ ಟ್ರೇಡ್‌ ಮಾರ್ಕ್‌ ರಿಜಿಸ್ಟ್ರೇಶನ್‌ ಸಂಸ್ಥೆ ಕರ್ನಾಟಕಕ್ಕೆ ಟ್ರೇಡ್‌ ಮಾರ್ಕ್‌ ನೀಡಿದೆ. ಆದರೆ ಕೇರಳ ಸಾರಿಗೆ ಸಂಸ್ಥೆ ತಕರಾರು ತೆಗೆದು ಚೆನ್ನೈ ಇಂಟಲೆಕ್ಚುವಲ್‌ ಪ್ರಾಪರ್ಟಿ ಅಪೀಲ್‌ ಬೋರ್ಡ್‌ಗೆ ಅರ್ಜಿ ಸಲ್ಲಿಸಿತ್ತು. ಕೇಂದ್ರ ಸರ್ಕಾರ ಆ ಬೋರ್ಡನ್ನೇ ರದ್ದು ಮಾಡಿ ಅಲ್ಲಿದ್ದ ಕೇಸ್‌ಗಳನ್ನು ಮದ್ರಾಸ್‌ ಹೈ ಕೋರ್ಟ್‌ಗೆ ವರ್ಗಾಯಿಸಿತ್ತು. ಮದ್ರಾಸ್‌ ಹೈ ಕೋರ್ಟ್‌ ಇದು ವಿಶೇಷ ಕೇಸ್‌ ಅಂತ ಪರಿಗಣಿಸಿ ವಿಚಾರಣೆ ನಡೆಸಿದೆ.

Ad Widget

ಅಲ್ಲದೆ ಕರ್ನಾಟಕದ ಲೋಗೋದಲ್ಲಿ ಗಂಡಬೇರುಂಢದ ಚಿತ್ರ ಇದೆ. ಕೇರಳ ಸಾರಿಗೆ ಲೋಗೊದಲ್ಲಿ ಆನೆ ಚಿತ್ರ ಇದೆ. ಇಲ್ಲಿ ಟ್ರೇಡ್‌ ಮಾರ್ಕ್‌ ಉಲ್ಲಂಘನೆಯೇ ಆಗಿಲ್ಲ. ಕರ್ನಾಟಕ ಸಾರಿಗೆ KSRTC ಹೆಸರು ಬಳಸೋದಕ್ಕೆ ಯಾವುದೇ ಅಭ್ಯಂತರ ಇಲ್ಲ ಅಂತ ಹೇಳಿದೆ.

Leave a Comment

Your email address will not be published. Required fields are marked *