ಕೊಟ್ಟಿಗೆಹಾರ: ಅಬಕಾರಿ ದಾಳಿ| 100 ಲೀಟರ್ ಬೆಲ್ಲದ ಕೊಳೆ, 5ಲೀ ಕಳ್ಳಬಟ್ಟಿ ವಶ

ಸಮಗ್ರ ನ್ಯೂಸ್ : ಬಣಕಲ್ ನ ಬಿ.ಹೊಸಳ್ಳಿಗೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ 5 ಲೀಟರ್ ಸಾರಾಯಿ, ನೂರು ಲೀಟರ್ ಬೆಲ್ಲದ ಕೊಳೆ ಹಾಗೂ ಪರಿಕರಗಳನ್ನು ವಶ ಪಡಿಸಿ ಕೊಳ್ಳಲಾಗಿದೆ. ಆರೋಪಿ ಪರಾರಿಯಾಗಿ ತಲೆಮರೆಸಿಕೊಂಡಿದ್ದಾರೆ.

Ad Widget ... ..

ಬಣಕಲ್ ಬಿ.ಹೊಸಳ್ಳಿಯ ಸುಂದರೇಶ್ ಆಲಿಯಾಸ್ ಮರಿ ಬಿನ್ ರಾಮೇಗೌಡ ಎಂಬುವವರ ತೋಟದ ಮೇಲೆ ಅಬಕಾರಿ ನಿರೀಕ್ಷಕ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ಈ ಸಮಯದಲ್ಲಿ ಆರೋಪಿ ಪರಾರಿಯಾಗಿದ್ದಾರೆ.

Ad Widget

ಕಾರ್ಯಾಚರಣೆಯಲ್ಲಿ ಅಬಕಾರಿ ಸಿಬ್ಬಂದಿಯಾದ ಸುರೇಶ್ ಕೆ,ಮಹಮ್ಮದ್ ಅಲಾವುದ್ದೀನ್ ಖಾನ್ , ವಾಹನ ಚಾಲಕ ಅನೂಪ್ ಮತ್ತಿತರರು ಭಾಗವಹಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *