Ad Widget .

ವಸತಿ ನಿಲಯಗಳು ನಿಲಯಾರ್ಥಿಗಳಿಗೆ ಮನೆ ಇದ್ದಂತೆ- ಡಾ. ಅನುರಾಧಾ ಕುರುಂಜಿ

ಸಮಗ್ರ ನ್ಯೂಸ್: ವಿದ್ಯಾರ್ಜನೆಗಾಗಿ ವಸತಿ ನಿಲಯಗಳಿಗೆ ಬರುವ ನಿಲಯಾರ್ಥಿಗಳಿಗೆ ವಸತಿ ನಿಲಯಗಳು ತಮ್ಮ ಮನೆ ಇದ್ದ ಹಾಗೆ.  ಅಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳು ತಂದೆ ತಾಯಿಯರಂತೆ 24*7  ತಮ್ಮ ಸೇವೆಯಲ್ಲಿ ನಿರತರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ನಿಲಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿ ತಾವು ನೆಲೆಸಿದ ವಸತಿ ನಿಲಯಗಳಿಗೆ ಒಳ್ಳೆಯ ಹೆಸರು ಹಾಗೂ ಕೀರ್ತಿಯನ್ನು ತಂದು ಕೊಡುವ ಕೆಲಸವನ್ನು ಮಾಡಬೇಕು ಎಂದು ಉಪನ್ಯಾಸಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರು ಅಭಿಪ್ರಾಯಪಟ್ಟರು.

Ad Widget . Ad Widget .

ಅವರು ಸುಳ್ಯದ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ – ವಿಭಜನೆ ಇಲ್ಲಿ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ‘ಜೀವನದಲ್ಲಿ ಪ್ರತಿಯೊಂದು ಹೆಜ್ಜೆಯನ್ನು ಬಹಳ ಎಚ್ಚರಿಕೆಯಿಂದ ಇಡಬೇಕು, ಯಾಕೆಂದರೆ ಸಮಾಜದ ನೂರಾರು ಕಣ್ಣುಗಳ ದೃಷ್ಟಿ ತಮ್ಮ ಹೆಜ್ಜೆಯನ್ನು ಗಮನಿಸುತ್ತಿರುತ್ತದೆ. ನೀವು ಇಡುವ ಪ್ರತಿ ಹೆಜ್ಜೆಯು ನಿಮ್ಮ ಭವಿಷ್ಯ ರೂಪಿಸಲು ಸಹಕಾರಿ ಎಂದರು. 

Ad Widget . Ad Widget .

ಕಾರ್ಯಕ್ರಮವನ್ನು ಡಾ.ಅನುರಾಧಾ ಕುರುಂಜಿಯವರು ದೀಪ ಬೆಳಗಿ ಉದ್ಘಾಟಿಸಿ, ನಿಲಯದ ಮೇಲ್ವಿಚಾರಕ ಸುಹಾಸಿನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುರುಂಜಿಭಾಗ್ ನಲ್ಲಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದ ಮೇಲ್ವಿಚಾರಕರಾದ ಗೀತಾ, ಶಿಕ್ಷಕಿ ಹರಣಾಕ್ಷಿ, ನಿಲಯದ ಅಡುಗೆ ಸಿಬ್ಬಂದಿಗಳಾದ ಪದ್ಮಾವತಿ, ರೇವತಿ, ಕಾವೇರಮ್ಮ, ಪದ್ಮ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ರಮದಲ್ಲಿ ಈ ಹಿಂದೆ ನಿಲಯದ ಅಡುಗೆ ಸಿಬ್ಬಂದಿಯಾಗಿದ್ದು, ಇದೀಗ ಶಿಕ್ಷಕಿಯಾಗಿ ನೇಮಕಗೊಂಡ ಹರಿಣಾಕ್ಷಿ ಇವರನ್ನು ಸನ್ಮಾನಿಸಲಾಯಿತು. ನಿಲಯದ ವಿದ್ಯಾರ್ಥಿನಿ ಶ್ರುತಿ ಸನ್ಮಾನಿತರನ್ನು ಪರಿಚಯಿಸಿದರು. ನಿಲಯಕ್ಕೆ ನೂತನವಾಗಿ ಸೇರ್ಪಡೆಗೊಂಡ ನಿಲಯಾರ್ಥಿಗಳಾದ ಬಿಂದುಶ್ರೀ, ಪ್ರಜ್ಞಾ, ಮಾನ್ಯ, ಶೃುತಿ  ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾಭ್ಯಾಸವನ್ನು ಪೂರೈಸಿ ನಿಲಯದಿಂದ ತೆರಳಲಿರುವ ದರ್ಶಿನಿ, ಕಾವ್ಯ, ಗೀತಾಂಜಲಿ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.  ಸುಷ್ಮಾ ಹಾಗೂ ಯಶಸ್ವಿ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ನಿಲಯದ ನಾಯಕಿ ಪೂರ್ವಿಕಾ  ಸ್ವಾಗತಿಸಿ,  ಸಿಂಚನ ಹೆಚ್ ಆರ್  ವಂದಿಸಿದರು. ಜ್ಯೋತಿ ಬಿ ಹೆಚ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ  ಮನೋರಂಜನಾ ಕಾರ್ಯಕ್ರಮ ನಡೆಯಿತು.

Leave a Comment

Your email address will not be published. Required fields are marked *