ಡಿ.ಕೆ.ಶಿವಕುಮಾರ್ ಭೇಟಿಯಾದ ಕಿಚ್ಚ ಸುದೀಪ್….!

ಸಮಗ್ರ ನ್ಯೂಸ್: ನಟ ಕಿಚ್ಚ ಸುದೀಪ್ ಅವರು ಇಂದು (ಡಿ. 17)ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದಾರೆ

Ad Widget ... ..

ಸುದೀಪ್ ಮಾತ್ರ ಅಲ್ಲದೆ ಅವರೊಟ್ಟಿಗೆ ನಿರ್ಮಾಪಕ ಕೆಪಿ ಶ್ರೀಕಾಂತ್, ಕೆಆರ್​ಜಿಯ ಕಾರ್ತಿಕ್ ಗೌಡ ಇನ್ನೂ ಹಲವರು ಒಟ್ಟಿಗೆ ಡಿಕೆಶಿ ಅವರನ್ನು ಭೇಟಿಯಾಗಿದ್ದಾರೆ. ಡಿ.ಕೆ ಶಿವಕುಮಾರ್ ಅವರನ್ನು ರಾಜಕೀಯ ಕಾರಣದಿಂದ ಸುದೀಪ್ ಹಾಗೂ ಅವರ ತಂಡ ಭೇಟಿ ಆಗಿರಲಿಲ್ಲ. ಕಿಚ್ಚ ಸುದೀಪ್ ಅವರು ಮತ್ತೊಮ್ಮೆ ಕೆಸಿಸಿ ಕ್ರಿಕೆಟ್ ಟೂರ್ನಿಮೆಂಟ್ ನಡೆಸುತ್ತಿದ್ದಾರೆ. ಕೆಸಿಸಿ ಟೂರ್ನಿಯ ಉದ್ಘಾಟನೆಯನ್ನು ಡಿಕೆಶಿಯಿಂದ ಉದ್ಘಾಟನೆ ಮಾಡಿಸಲಿದ್ದಾರೆ. ಈ ಕಾರಣಕ್ಕೆ ಕೆಸಿಸಿ ಉದ್ಘಾಟನೆಗೆ ಡಿಕೆಶಿಯವರನ್ನು ಆಹ್ವಾನಿಸಲೆಂದು ಕಿಚ್ಚ ಸುದೀಪ್ ಹಾಗೂ ಕೆಸಿಸಿ ಆಯೋಜಕರ ತಂಡ ಇಂದು ಹೋಗಿತ್ತು.

Ad Widget

ಕಳೆದ ಚುನಾವಣೆಯಲ್ಲಿ ಸುದೀಪ್ ಬಿಜೆಪಿ ಪರವಹಿಸಿದ್ದರು, ಡಿಕೆಶಿ, ಕೆಪಿಸಿಸಿ ಅಧ್ಯಕ್ಷರಾಗಿದ್ದರು. ರಾಜಕೀಯವಾಗಿ ಭಿನ್ನ ಹಾದಿ ಇದ್ದರು ಇಬ್ಬರ ನಡುವೆ ಒಳ್ಳೆಯ ಗೆಳೆತನವಂತು ಇದೆ. ಈ ಹಿಂದೆ ಡಿಕೆಶಿ ಅವರ ಮಾಲ್ ಅನ್ನು ಸುದೀಪ್ ಅವರಿಂದ ಉದ್ಘಾಟಿಸಿದ್ದಾರೆ.

Leave a Comment

Your email address will not be published. Required fields are marked *