ರಿಯಲ್ ಆಗಿ ಹೀರೋ ಆದ ರಿಷಭ್/ ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡ ಶೆಟ್ರು

ಸಮಗ್ರ ನ್ಯೂಸ್: ಕಾಂತಾರದ ಮೂಲಕ ಮನೆಮಾತಾಗಿರುವ ನಟ ರಿಷಬ್ ಶೆಟ್ಟಿ, ಇದೀಗ ಕೆರಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದುಕೊಳ್ಳುವ ಮೂಲಕ ಮತ್ತೊಮ್ಮೆ ಸದ್ದು ಮಾಡಿದ್ದಾರೆ.

Ad Widget ... ..

ತಾವು ಓದಿದ್ದ ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದುಕೊಳ್ಳುವ ತನ್ನ ನಿರ್ಧಾರವನ್ನು ಶಾಲಾ ಎಸ್‍ಡಿಎಂಸಿ ಸಭೆಯಲ್ಲಿ ರಿಷಬ್ ಪ್ರಕಟಿಸಿದ್ದಾರೆ. ಮೂವತ್ತು ವರ್ಷಗಳ ಹಿಂದೆ ಈ ಶಾಲೆಯಲ್ಲಿ 400ರಷ್ಟು ಮಕ್ಕಳಿದ್ದು, ಈಗ 71ಕ್ಕೆ ಇಳಿಕೆಯಾಗಿದೆ. ಒಬ್ಬರು ಖಾಯಂ ಶಿಕ್ಷಕರು, ಉಳಿದವರು ಗೌರವ ಶಿಕ್ಷಕರು. ಖುದ್ದಾಗಿ ಈ ಶಾಲೆಯ ಸ್ಥಿತಿಗತಿ ತಿಳಿದುಕೊಂಡಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಐದು ವರ್ಷಗಳ ಅವಧಿಗೆ ರಿಷಬ್ ಫೌಂಡೇಶನ್ ಈ ಶಾಲೆಯನ್ನು ದತ್ತು ಪಡೆದಿದೆ ಎಂದು ಅವರು ತಿಳಿಸಿದ್ದಾರೆ.

Ad Widget

ಮೂಲಭೂತ ಸೌಕರ್ಯ, ಕೊಠಡಿ, ಶಿಕ್ಷಕರು, ಆವರಣ ಗೋಡೆ, ಅಗತ್ಯವಿದ್ದರೆ ವಾಹನದ ವ್ಯವಸ್ಥೆಯನ್ನು ಇಲ್ಲಿಗೆ ಕಲ್ಪಿಸಲಾಗುವುದು. ಎಲ್‍ಜಿ, ಯುಕೆಜಿ, ಸ್ಪೋಕನ್ ಇಂಗ್ಲಿಷ್ ಕಲಿಕೆ ಆರಂಭಿಸುವ ಯೋಜನೆ ಕೂಡಾ ಇದೆ ಎಂದು ರಿಷಬ್ ಹೇಳಿದ್ದಾರೆ.

Leave a Comment

Your email address will not be published. Required fields are marked *