ಸಮಗ್ರ ನ್ಯೂಸ್: ವಾರಣಾಸಿ ಮತ್ತು ಹೊಸದಿಲ್ಲಿ ನಡುವಿನ ಎರಡನೇ ವಂದೇ ಭಾರತ್ ರೈಲು ಸೇರಿದಂತೆ ಒಟ್ಟು ನಾಲ್ಕು ರೈಲುಗಳಿಗೆ ವಿಕಾಸ್ ಭಾರತ್ ಸಂಕಲ್ಪ ಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು. ರೈಲ್ವೆ ಸಚಿವಾಲಯವು ದೇಶದಲ್ಲಿ ಪ್ರಾರಂಭಿಸಲಿರುವ ಎರಡನೇ ಕೇಸರಿ ಬಣ್ಣದ ವಂದೇ ಭಾರತ್ ರೈಲು ಇದಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ವಂದೇ ಭಾರತ್ ರೈಲಿನಲ್ಲಿ ಐಷಾರಾಮಿ ಒಳಾಂಗಣ, ಸ್ಪರ್ಶ-ಮುಕ್ತ ಅನುಕೂಲಗಳೊಂದಿಗೆ ಜೈವಿಕ ನಿರ್ವಾತ ಶೌಚಾಲಯಗಳು, ಹರಡಿದ ಎಲ್‍ಇಡಿ ಲೈಟಿಂಗ್ ಮತ್ತು ಪ್ರತಿ ಸೀಟಿನ ಕೆಳಗೆ ಚಾಜಿರ್ಂಗ್ ಪಾಯಿಂಟ್ ಗಳು ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.
ರೈಲು ಪ್ರಯಾಗ್‍ರಾಜ್, ಕಾನ್ಸುರ್ ಸೆಂಟ್ರಲ್, ಇಟಾವಾ, ತುಂಡ್ಲಾ ಮತ್ತು ಅಲಿಗಢ ಮೂಲಕ ಹೊಸದಿಲ್ಲಿಯನ್ನು ತಲುಪುತ್ತದೆ. ವಂದೇ ಭಾರತ್ ಎಕ್ಸ್‍ಪ್ರೆಸ್‍ನ ನಿಯಮಿತ ಕಾರ್ಯಾಚರಣೆ ಡಿಸೆಂಬರ್ 20ರಂದು ಪ್ರಾರಂಭವಾಗಲಿದ್ದು, ವಾರಣಾಸಿಯಿಂದ ಮುಂಜಾನೆ 6ಕ್ಕೆ ಹೊರಡುವ ರೈಲು, 7.34ಕ್ಕೆ ಪ್ರಯಾಗರಾಜ್, 9:30ಕ್ಕೆ ಕಾನ್ಸುರ್ ಸೆಂಟ್ರಲ್ ಮತ್ತು ಅಂತಿಮವಾಗಿ ನವದೆಹಲಿಗೆ ಮಧ್ಯಾಹ್ನ 2.05 ಗಂಟೆಗೆ ತಲುಪುತ್ತದೆ. ಹೊಸದಿಲ್ಲಿಯಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ಕಾನ್ಸುರ ಸೆಂಟ್ರಲ್ ಅನ್ನು 7.12 ಗಂಟೆಗೆ ತಲುಪುತ್ತದೆ, ರಾತ್ರಿ 9.15ಕ್ಕೆ ಪ್ರಯಾಗರಾಜ್ ತಲುಪುತ್ತದೆ ಮತ್ತು 11.05 ಗಂಟೆಗೆ ವಾರಣಾಸಿಯಲ್ಲಿ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸುತ್ತದೆ.