ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಚಂಪಾ ಷಷ್ಠಿ ಸಂಭ್ರಮದಂದು ಹರಕೆ ರೂಪದಲ್ಲಿ ಭಕ್ತರಿಗೆ ಎಡೆ ಸ್ನಾನ ಸೇವೆ ಜರಗಿದೆ. 2011 ರವರೆಗೆ ಶ್ರೀ ಕ್ಷೇತ್ರದಲ್ಲಿ ಎಂಜಲು ಎಲೆ ಮೇಲೆ ಉರುಳು ಸೇವೆ ಕ್ರಮವಿತ್ತು. ಚರ್ಮ ರೋಗ, ವೈಯುಕ್ತಿಕ ಸಮಸ್ಯೆ ನಿವಾರಣೆಗೆ ಭಕ್ತಿಯಿಂದ ಉರುಳು ಸೇವೆ ನಡೆಸುತ್ತಿದ್ದರು. ಸಮಾಜದಲ್ಲಿ ಬದಲಾವಣೆ ಈಗಿನ ಕಾಲ ಘಟ್ಟದಲ್ಲಿ ಎಂಜಲು ಎಲೆ ಮೇಲೆ ಉರುಳುವ ದು ಸರಿಯಲ್ಲವೆಂದು ಮನಗಂಡು ಉಡುಪಿ ಪೇಜಾವರ ಶ್ರೀ ಗಳ ಸಮ್ಮುಖದಲ್ಲಿ, ಸಂಘದ ಹಿರಿಯರಾದ ಕಲ್ಲಡ್ಕ ಪ್ರಭಾಕರ ಭಟ್, ನ.ಸೀತಾರಾಮ ಮತ್ತು ಆಗಿನ ದೇವಸ್ಥಾನ ವ್ಯವಸ್ತಾಪನ ಸಮಿತಿ ಅಧ್ಯಕ್ಷರಾದ ಕೃಷ್ಣಪ್ರಸಾದ್ ಮಡ್ತಿಲ ಜೊತೆಯಾಗಿ ಈ ಬಗ್ಗೆ ಚರ್ಚೆ, ಸಂವಾದಗಳು ನಡೆದು ಎಂಜಲು ಎಲೆ ಮೇಲೆ ಉರುಳುವುದು ಪ್ರಸ್ತುತ ಬದಲಾದ ಪರಿಸ್ಥಿತಿಯಲ್ಲಿ ಸರಿಯಲ್ಲವೆಂದು ಮನಗಾಣಲಾಯಿತು.
ಮುಂದೆ ಶೈವಾಗಮ ಪಂಡಿತರ ಮಾರ್ಗದರ್ಶನದಂತೆ ಮಧ್ಯಾಹ್ನ ಮಹಾಪೂಜೆ ನಂತರ ಹೊರಾಂಗಣ ದಲ್ಲಿ 432 ಬಾಳೆ ಎಲೆ ಹಾಕಿ ದೇವರ ನೈವೇದ್ಯಗಳನ್ನು ದನಗಳು ತಿಂದ ನಂತರ , ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿದ ಭಕ್ತರು ಅದರ ಮೇಲೆ ಉರುಳು ಸೇವೆ ಮಾಡುವ ಹೊಸ ಕ್ರಮ ಪ್ರಾರಂಭವಾಗಿದೆ.
ಪರಿವರ್ತನೆ ಯಾರ ಮನಸ್ಸಿಗೆ ನೋವಾಗದ ಮತ್ತು ಕ್ಷೇತ್ರದ ಭಕ್ತರ ಭಾವನೆಗೆ ಸೌಹಾರ್ದ ಪ್ರಯತ್ನ 2012-13 ಆಗಿನ ವ್ಯವಸ್ಥಾಪನಾ ಮಂಡಳಿ ಸಮಿತಿ ಅಧ್ಯಕ್ಷರಾದ ಕೃಷ್ಣಪ್ರಸಾದ್ ಮಡ್ತಿಲ ಮತ್ತು ಸದಸ್ಯರ, ಕ್ಷೇತ್ರದ ಹಿರಿಯರ ಕ್ರಮ ಮಾದರಿಯಾಗಿದ್ದು ನೆನಪಿಸಿಕೊಳ್ಳಬೇಕು.
ಇದರೊಂದಿಗೆ ಮಹತ್ವದ ಇನ್ನೊಂದು ಕ್ರಮ ಬದಲಾವಣೆ ಎಂದರೆ ಬ್ರಹ್ಮರಥ ಎಳೆದ ಬೆತ್ತವನ್ನು ಹಿಂದೆ ಭಕ್ತರು ಪಡೆದುಕೊಳ್ಳಲು ರಾದ್ದಾಂತವಾಗುತ್ತಿತ್ತು. ಪ್ರಸಾದ ರೂಪದ ಬೆತ್ತಕ್ಕಾಗಿ ಮಾರಣಾಂತಿಕ ಗಾಯಗಳಾಗಿದ್ದೂ ಇದೆ. ಅದನ್ನು ಸೇವೆಯ ಪ್ರಸಾದವಾಗಿ ಹಂಚುವ ಕ್ರಮದ ಮೂಲಕ ಬೆತ್ತಕಾಗಿ ನಡೆಯುತಿದ್ದ ಕಾಳಗಕ್ಕೆ ಇತಿ ಶ್ರೀ ಹಾಡಿದ್ದು ಮತ್ತು ಬ್ರಹ್ಮರಥ ಸೇವೆ ಮಾಡಿಸುವವರಿಗೆ ಬೆಳಗ್ಗೆ ರಥ ವನ್ನೆಳೆಯಲು ಪಾಸ್ ವಿತರಣೆಯ ಮಹತ್ವದ ಕ್ರಮ ಜಾರಿ ತರುವ ಮೂಲಕ ನೂಕುನುಗ್ಗಲು, ರಾದ್ದಾಂತಗಳಿಗೆ ಇತಿಶ್ರೀ ಹೇಳಿದ್ದು ಮಡ್ತಿಲ ಕೃಷ್ಣಪ್ರಸಾದ ಅವರ ನೇತೃತ್ವದ ಆಡಳಿತ ಮಂಡಳಿ.
ಅದಾದ ಬಳಿಕ ಹಲವು ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯವು ಹಲವು ಮಾದರಿ ಕಾರ್ಯಗಳಿಗೆ ಸಾಕ್ಷಿಯಾಗಿದೆ. ಇದೀಗ ಲಕ್ಷಾಂತರ ಭಕ್ತರ ಆರಾಧ್ಯ ತಾಣವಾಗಿರುವ ಕುಕ್ಕೆ ಹಲವು ಗೊಂದಲಗಳಿಂದ ಹೊರಬಂದಿದೆ. ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ಆಗಬೇಕಿದೆ. ಇಚ್ಛಾಶಕ್ತಿಯ ಕೃಪಾಕಟಾಕ್ಷವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರು ಇನ್ನಷ್ಟು ನೀಡಿದರೆ ದೇಗುಲದ ಅಭಿವೃದ್ಧಿ ಮತ್ತಷ್ಟು ಸಾಧ್ಯವಾಗಲಿದೆ.