Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಗ್ರಹಗತಿಗಳ ಸ್ಥಾನದ ಆಧಾರದ ಮೇಲೆ ವೈದಿಕ ಶಾಸ್ತ್ರದಲ್ಲಿ ಭವಿಷ್ಯ ಹೇಳಲಾಗುವುದು. ಈ ವಾರ (ಡಿಸೆಂಬರ್ 15-23) ದ್ವಾದಶ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಿದೆ ಎಂದು ನೋಡೋಣ:

Ad Widget . Ad Widget .

ಮೇಷ:
ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಮುಂದುವರೆಯುವಿರಿ. ಕೌಟುಂಬಿಕ ವಿಚಾರಗಳಲ್ಲಿ ಯಶಸ್ಸು ಕಾಣುವಿರಿ. ಕುಟುಂಬದಲ್ಲಿ ಧನಾತ್ಮಕ ವಾತಾವರಣ ಉಂಟು ಮಾಡುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಉದ್ಯೋಗದಲ್ಲಿ ದುಡುಕಿನ ಮಾತಿನಿಂದ ಸಮಸ್ಯೆಯೊಂದು ಎದುರಾಗಬಹುದು. ವಿದ್ಯಾರ್ಥಿಗಳು ವ್ಯಾಸಂಗದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಆರೋಗ್ಯದ ಬಗ್ಗೆ ಗಮನ ಇರಲಿ. ಭೂವ್ಯವಹಾರದಿಂದ ಧನ ಲಾಭವಿದೆ. ಆತ್ಮೀಯರೊಂದಿಗೆ ಮನಸ್ತಾಪ ಉಂಟಾಗಲಿದೆ. ಕುಟುಂಬಕ್ಕೆ ಸೇರಿದ ಭೂಮಿಯನ್ನು ಮಾರಾಟ ಮಾಡಿ ವ್ಯಾಪಾರವನ್ನು ಅಭಿವೃದ್ಧಿ ಪಡಿಸುವಿರಿ. ಮಂಗಳಕಾರ್ಯನಿಮಿತ್ತ ಪರಸ್ಥಳಕ್ಕೆ ತೆರಳುವಿರಿ.

Ad Widget . Ad Widget .

ವೃಷಭ:
ಕುಟುಂಬದ ಮುಖ್ಯವಾದ ಕೆಲಸ ಕಾರ್ಯಗಳಲ್ಲಿ ಯಾವುದೇ ಮುನ್ನಡೆ ಕಾಣದು. ಗಂಭೀರ ವಾತಾವರಣದಲ್ಲೂ ಧೈರ್ಯಗೆಡುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಹೊಸ ಆಸೆ ಮೂಡುತ್ತದೆ. ಕಷ್ಟದ ಸಂದರ್ಭ ಎದುರಾದರೂ ಶಾಂತಿ ಸಂಯಮದಿಂದ ವರ್ತಿಸುವಿರಿ. ಉದ್ಯೋಗದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಎದುರಾಗದು. ವ್ಯಾಪಾರ ವ್ಯವಹಾರಗಳಲ್ಲಿ ಹೇರಳ ಲಾಭವಿರುತ್ತದೆ. ಕುಟುಂಬಕ್ಕಾಗಿ ಸ್ವಂತ ಆಸೆ ಆಕಾಂಕ್ಷೆಗಳನ್ನು ಮರೆಯಬೇಕಾಗುತ್ತದೆ. ವಿದ್ಯಾರ್ಥಿಗಳು ತಮ್ಮ ವರ್ಚಸ್ಸನ್ನು ಉಳಿಸಿಕೊಳ್ಳುತ್ತಾರೆ. ತಾಳ್ಮೆ ಕಳೆದುಕೊಳ್ಳಬೇಡಿರಿ. ಸಂಗಾತಿಯ ಬೆಂಬಲ ಜೀವನಕ್ಕೆ ಆಸರೆಯಾಗುತ್ತದೆ. ಪ್ರಮುಖ ಕೆಲಸ ಕಾರ್ಯಗಳನ್ನು ಮುಂದೂಡದಿರಿ.

ಮಿಥುನ:
ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಉದ್ಯೋಗ ಬದಲಾಯಿಸುವ ಅವಕಾಶವಿದೆ. ಭೂವಿವಾದವೊಂದು ಬಗೆಹರಿಯಲಿದೆ. ಕುಟುಂಬದಲ್ಲಿ ಬೇರೆಯವರ ವಿಚಾರಕ್ಕಾಗಿ ಮನಸ್ತಾಪ ಉಂಟಾಗಲಿದೆ. ಹಣಕಾಸಿನ ವಿಚಾರದಲ್ಲಿ ಒಮ್ಮತ ಇರುವುದಿಲ್ಲ. ತಪ್ಪಿಲ್ಲದೇ ಹೋದರೂ ದುಡುಕಿ ಮಾತನಾಡುವ ಕಾರಣ ವಿವಾದ ಎದುರಿಸಬೇಕಾಗುತ್ತದೆ. ಮಕ್ಕಳ ಬಗ್ಗೆ ಕಾಳಜಿ ಇರಲಿ. ತೆಗೆದುಕೊಂಡ ನಿರ್ಧಾರ ಬದಲಿಸದಿರಿ. ಪತಿ ಪತ್ನಿಯ ಮಧ್ಯೆ ಹಣದ ವ್ಯವಹಾರದಲ್ಲಿ ಪರಸ್ಪರ ಸಹಾಯ ಸಹಕಾರ ಇರುತ್ತದೆ. ತಂದೆಯಿಂದ ಹಣದ ಸಹಾಯ ದೊರೆಯುತ್ತದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಆಸಕ್ತಿ ಮೂಡುತ್ತದೆ.

ಕಟಕ:
ಮನದಲ್ಲಿ ಅಳುಕಿನ ಭಾವನೆ ಇರುತ್ತದೆ. ಪ್ರತಿ ವಿಚಾರದಲ್ಲೂ ಆತುರದ ಧೋರಣೆ ಇರುತ್ತದೆ. ಚುರುಕಿನಿಂದ ಕೆಲಸ ಕಾರ್ಯಗಳನ್ನು ಪೂರೈಸುವಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಉದ್ಯೋಗದಲ್ಲಿ ಇದ್ದ ತೊಂದರೆ ದೂರವಾಗುವುದು. ಬುದ್ಧಿವಂತಿಕೆಯ ತೀರ್ಮಾನದಿಂದ ವಿವಾದವೊಂದು ಪರಿಹಾರಗೊಳ್ಳಲಿದೆ. ಖ್ಯಾತ ಹಣಕಾಸು ಸಂಸ್ಥೆಯಲ್ಲಿ ಅಧಿಕಾರಿಯ ಸ್ಥಾನ ದೊರೆಯುತ್ತದೆ. ವಿದ್ಯಾರ್ಥಿಗಳು ಉನ್ನತ ಸ್ಥಾನ ಗಳಿಸುತ್ತಾರೆ. ಕುಟುಂಬದ ಒಟ್ಟಾರೆ ಆದಾಯ ಹೆಚ್ಚುತ್ತದೆ. ಸ್ವಂತ ಭೂಮಿ ಅಥವಾ ಮನೆ ಕೊಳ್ಳುವ ರೂಪು ರೇಷೆ ಸಿದ್ದಪಡಿಸುವಿರಿ. ಧಾರ್ಮಿಕ ಕೆಲಸ ಕಾರ್ಯಗಳಿಗೆ ಹೆಚ್ಚಿನ ಹಣ ಬೇಕಾಗುತ್ತದೆ.

ಸಿಂಹ:
ಅನಿವಾರ್ಯವಾಗಿ ವಾಸಸ್ಥಳವನ್ನು ಬದಲಾಯಿಸುವಿರಿ. ಸಮಾಜದಲ್ಲಿ ಗೌರವಯುತ ಸ್ಥಾನ ಮಾನ ದೊರೆಯುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಯಶಸ್ಸು ದೊರೆಯುತ್ತದೆ. ಉದ್ಯೋಗದ ಕೆಲಸ ಕಾರ್ಯಗಳು ಸುಲಭವಾಗಿ ಕೈಗೊಳ್ಳಲಿವೆ. ಉನ್ನತ ಅಧಿಕಾರ ಹೊಂದಿರುವವರು ಆತಂಕದ ಕ್ಷಣಗಳನ್ನು ಎದುರಿಸಲಿದ್ದಾರೆ. ಮನೆ ಕೊಳ್ಳುವ ಮುನ್ನ ಎಚ್ಚರಿಕೆ ವಹಿಸಿ. ಅನಾವಶ್ಯಕ ಖರ್ಚು ವೆಚ್ಚಗಳು ಬೇಸರ ಮೂಡಿಸುತ್ತದೆ. ಜನ ಸಾಮಾನ್ಯರ ವಾದ ವಿವಾದಗಳನ್ನು ಬಗೆಹರಿಸುವಿರಿ. ವಿಧ್ಯಾರ್ಥಿಗಳಿಗೆ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ಕುಟುಂಬದ ಒಟ್ಟಾರೆ ಖರ್ಚು ವೆಚ್ಚಗಳು ಹೆಚ್ಚಲಿವೆ. ಮುಂಗೋಪದ ಗುಣ ಇರುತ್ತದೆ.

ಕನ್ಯಾ:
ಉಡುಗೊರೆಯಾಗಿ ವಂಶದ ಹಿರಿಯರಿಂದ ಭೂಮಿ ದೊರೆಯುತ್ತದೆ. ಕೆಲಸ ಕಾರ್ಯಗಳು ಪೂರ್ಣವಾಗುವವರೆಗೂ ಮನಸ್ಸು ಬದಲಿಸದಿರಿ. ಅದೃಷ್ಟದ ಕಾರಣ ಕೆಲಸ ಕಾರ್ಯಗಳು ಪೂರ್ಣಗೊಳ್ಳುವುದು. ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಹಣದ ಗಳಿಕೆಯಲ್ಲಿ ಸ್ಥಿರತೆ ಕಂಡುಬರದು. ಸಹನೆಯಿಂದ ನಡೆದುಕೊಂಡಲ್ಲಿ ಕೈತಪ್ಪಿದ ಉದ್ಯೋಗವನ್ನು ಮರಳಿ ಗಳಿಸಬಹುದು. ಸ್ವಂತ ತಪ್ಪಿಗೆ ಬೇರೆಯವರನ್ನು ದೂಷಿಸುವಿರಿ. ಆದಾಯ ಹೆಚ್ಚಿಸಿಕೊಳ್ಳಲು ಸ್ವಂತ ವ್ಯಾಪಾರವೊಂದನ್ನು ಆರಂಭಿಸುವಿರಿ. ಕುಟುಂಬದ ಒಳಗೂ ಹೊರಗೂ ಉನ್ನತ ಗೌರವ ಸ್ಥಾನ ಮಾನ ಲಭಿಸುತ್ತದೆ. ಅನಾವಶ್ಯಕವಾಗಿ ಎಲ್ಲರ ಕೆಲಸವನ್ನೂ ಟೀಕಿಸುವಿರಿ.

ತುಲಾ:
ಕ್ರಿಯಾಶೀಲ ವ್ಯಕ್ತಿತ್ವದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ನೇರ ನಿಷ್ಠುರದ ವ್ಯಕ್ತಿತ್ವದಿಂದ ವಿವಾದಕ್ಕೆ ಗುರಿಯಾಗುವಿರಿ. ಮಾಡಿದ ತಪ್ಪನ್ನು ಅಂಜಿಕೆ ಇಲ್ಲದೆ ಒಪ್ಪಿಕೊಂಡು ಸರಿಪಡಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ದೊರೆಯುತ್ತದೆ. ಕಷ್ಟ ನಷ್ಟದಲ್ಲಿ ಇದ್ದವರಿಗೆ ಸಹಾಯವನ್ನು ಮಾಡುವಿರಿ. ಅವಿವಾಹಿತರಿಗೆ ವಿವಾಹಯೋಗವಿದೆ. ಕುಟುಂಬದವರ ಜೊತೆಯಲ್ಲಿ ಹಣಕಾಸಿನ ಸಂಸ್ಥೆಯನ್ನು ಆರಂಭಿಸುವ ಸೂಚನೆಯಿದೆ. ಕೈಕಾಲುಗಳಲ್ಲಿ ನಿತ್ರಾಣ ಉಂಟಾಗಬಹುದು. ಆತುರದ ನಿರ್ಧಾರ ತೆಗೆದುಕೊಳ್ಳದಿರಿ. ವಾರಾಂತ್ಯಕ್ಕೆ ದೂರದ ಸ್ಥಳಕ್ಕೆ ತೆರಳುವ ಸಂಭವವಿದೆ. ಸಾಲದ ವ್ಯವಹಾರ ಮಾಡುವ ಸಂದಿಗ್ಧತೆಗೆ ಒಳಗಾಗುವಿರಿ.

ವೃಶ್ಚಿಕ:
ಹಟ ಮತ್ತು ಕೋಪದಿಂದ ದೊಡ್ಡ ಅವಕಾಶವನ್ನು ಕಳೆದುಕೊಳ್ಳುವಿರಿ. ಮಾಡಿದ ತಪ್ಪನ್ನು ಒಪ್ಪದೆ ವಾದ ವಿವಾದದಲ್ಲಿ ತೊಡಗುವಿರಿ. ಸಹನೆಯಿಂದ ತೆಗೆದು ಕೊಳ್ಳುವ ನಿರ್ಧಾರಗಳಲ್ಲಿ ಯಶಸ್ಸು ದೊರೆಯುತ್ತದೆ. ಬೇರೆಯವರ ತಪ್ಪನ್ನು ಕ್ಷಮಿಸುವ ಗುಣ ಬೆಳೆಸಿಕೊಳ್ಳಿರಿ. ಕುಟುಂಬದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವಿರಿ. ಸೋದರರ ಸಹಾಯ ದೊರೆಯುತ್ತದೆ. ಸಣ್ಣಪ್ರಮಾಣದ ವ್ಯಾಪಾರ ಆರಂಭಿಸುವಿರಿ. ಕೌಟುಂಬಿಕ ಕಲಹ ದೂರವಾಗಿ ತಂದೆ ತಾಯಿಯ ಪ್ರೀತಿ ದೊರೆಯುತ್ತದೆ. ಎಲ್ಲರೊಂದಿಗೆ ಸಂತೋಷದಿಂದ ಜೀವನದಲ್ಲಿ ಮುಂದುವರಿಯಿವಿರಿ. ಬೇರೊಬ್ಬರ ಅಧೀನದಲ್ಲಿ ಕೆಲಸ ಮಾಡಲು ಇಚ್ಚಿಸುವುದಿಲ್ಲ.

ಧನಸ್ಸು:
ತಂದೆಯ ಅನಾರೋಗ್ಯ ಎಲ್ಲರಿಗೂ ಒತ್ತಡ ಉಂಟು ಮಾಡುತ್ತದೆ. ಹೆಚ್ಚಿನ ಹಣಕಾಸಿನ ಅವಶ್ಯಕತೆ ಇರುತ್ತದೆ. ಸ್ಥಿರವಾದ ಮನಸ್ಸಿರುವುದಿಲ್ಲ. ಅವಮಾನ ಸಹಿಸದೆ ಸೇಡಿನ ಪ್ರವೃತ್ತಿಯನ್ನು ತೋರುವಿರಿ. ಕುಟುಂಬದ ಎಲ್ಲರಿಗೂ ಅನುಕೂಲವಾಗುವ ಕೆಲಸ ಮಾಡುವಿರಿ. ವಿರೋಧಿಗಳಿಗೂ ಶುಭ ಕೋರುವಿರಿ. ಪರೋಪಕಾರದ ಗುಣ ನಿಮ್ಮಲ್ಲಿರುತ್ತದೆ. ಕೋಪ ಬಂದರೂ ಸಹನೆಯಿಂದ ವರ್ತಿಸುವಿರಿ. ಬಂಧು ಬಾಂಧವರ ಜೊತೆಯಲ್ಲಿ ಶಾಂತಿ ನೆಮ್ಮದಿ ನೆಲೆಸಲು ಕಾರಣವಾಗುವಿರಿ. ಕಷ್ಟ ಪಟ್ಟು ದುಡಿವ ಕಾರಣ ಸೋಲೆಂಬ ಮಾತಿಲ್ಲ. ಹಣಕಾಸಿನ ಕೊರತೆ ಇರುತ್ತದೆ. ಉದ್ಯೋಗದಲ್ಲಿ ಅಧಿಕಾರಿಯ ಪಟ್ಟ ಲಭಿಸುತ್ತದೆ.

ಮಕರ:
ಬೇಸರ ಉಂಟಾಗುವಂತೆ ಮಾತನಾಡುವಿರಿ. ಆಡುವ ಮಾತಿನಂತೆ ನಡೆದುಕೊಳ್ಳುವಿರಿ. ಸುಲಭವಾಗಿ ಕೆಲಸ ಕಾರ್ಯಗಳನ್ನು ಆರಂಭಿಸುವುದಿಲ್ಲ. ಹಣಕಾಸಿನ ಕೊರತೆ ಕ್ರಮೇಣವಾಗಿ ಕಡಿಮೆಯಾಗುತ್ತದೆ. ನಿಧಾನ ನಿರ್ಧಾರದಿಂದಾಗಿ ಕೆಲಸ ಕಾರ್ಯಗಳು ಪೂರ್ಣಗೊಳ್ಳದು. ಹೊಸ ಮನೆ ಕೊಳ್ಳುವ ಆಸೆಯಿಂದ ಕೂಡಿಟ್ಟ ಹಣ ಖರ್ಚುಮಾಡುವಿರಿ. ಎಲ್ಲರ ಪ್ರೀತಿ ವಿಶ್ವಾಸದಿಂದ ಸಮಾಜದ ನಾಯಕ ಸ್ಥಾನ ಅಲಂಕರಿಸುವಿರಿ. ಉದ್ಯೋಗದಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯುತ್ತದೆ. ಮನಸ್ಸು ಒಳ್ಳೆಯದಾದರೂ ದುಡುಕಿನ ಮಾತಿನಿಂದ ಕೆಟ್ಟ ಹೆಸರು ಗಳಿಸುವಿರಿ. ವಿವಾಹ ಯೋಗವಿದೆ, ಯಾರನ್ನೂ ಕಡೆಯಾಗಿ ನೋಡದಿರಿ. ಹಣದ ತೊಂದರೆ ಬಾರದು.

ಕುಂಭ:
ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಧೈರ್ಯ ಸಾಹಸದ ಗುಣ ಇರುತ್ತದೆ. ಕ್ರೀಡಾಪಟುಗಳಿಗೆ ವಿಶೇಷವಾದ ಅವಕಾಶ ದೊರೆಯಲಿದೆ. ಮೌನವಾಗಿದ್ದುಕೊಂಡೇ ಬಹುತೇಕ ಸಮಸ್ಯೆಗಳು ನಿವಾರಿಸುವಿರಿ. ಉದ್ಯೋಗದಲ್ಲಿ ತೊಂದರೆ ಇರದು. ಕೆಲಸ ಕಾರ್ಯಗಳಲ್ಲಿ ನಿಧಾನವಾಗಿ ಯಶಸ್ಸು ದೊರೆಯುತ್ತದೆ. ಭೂ ವಿವಾದವೊಂದು ನೆಮ್ಮದಿ ಕೆಡಿಸುತ್ತದೆ. ಪಶುಸಂಗೋಪನೆಯಲ್ಲಿ ಲಾಭವಿದೆ. ವಿದ್ಯಾರ್ಥಿಗಳು ಮನವಿಟ್ಟು ಅಭ್ಯಾಸದಲ್ಲಿ ನಿರತರಾಗಬೇಕು. ಮನೆಯವರ ಮಾತು ಕೇಳಿದಲ್ಲಿ ಯಾವುದೇ ತೊಂದರೆ ಇರದು. ಸ್ತ್ರೀಯರು ಅಂತರ್ಮುಖಿಯಾಗಿ ವರ್ತಿಸುತ್ತಾರೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಮನೆಯನ್ನು ಬದಲಾಯಿಸುವ ಸಾಧ್ಯತೆ ಇದೆ.

ಮೀನ:
ಸಮಯ ವ್ಯರ್ಥ ಮಾಡದೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವಿರಿ. ಕಷ್ಟ ಪಟ್ಟು ದುಡಿಯುವ ಜನರಿಗೆ ಸಹಾಯ ಮಾಡುವಿರಿ. ಹಣದ ತೊಂದರೆ ಬಾರದು. ಗೆಲ್ಲುವ ಗುರಿಯಿಂದಲೇ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಅನಿರೀಕ್ಷಿತ ಆದಾಯ ಮತ್ತು ವೆಚ್ಚ ಕಂಡುಬರುತ್ತದೆ. ಯೋಗ ಭರತನಾಟ್ಯದಂತಹ ಸಾಂಪ್ರದಾಯಕ ಕಲೆ ಬಲ್ಲವರಿಗೆ ದೇಶ ವಿದೇಶಗಳಲ್ಲಿಅವಕಾಶ ದೊರೆಯಲಿದೆ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ ಇದ್ದರೂ ತೊಂದರೆ ಇರುವುದಿಲ್ಲ. ತಂದೆಯ ಕೆಲಸವೊಂದರಲ್ಲಿ ಸಹಾಯ ಮಾಡುವಿರಿ. ಸಮಯಕ್ಕೆ ತಕ್ಕಂತೆ ತೀರ್ಮಾನ ತೆಗೆದುಕೊಳ್ಳಲು ಪ್ರಯತ್ನಿಸಿ. ಬೇಸಾಯದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಪದೇ ಪದೇ ಮನಸ್ಸು ಬದಲಿಸದಿರಿ.

Leave a Comment

Your email address will not be published. Required fields are marked *