Ad Widget .

ಮುಂಬೈ ನಾಯಕತ್ವದಿಂದ ಹೊರಬಂದ ರೋಹಿತ್/ ಟಿ-20 ಗೆ ವಿದಾಯ ಹೇಳ್ತಾರಾ ಹಿಟ್‍ಮ್ಯಾನ್

ಸಮಗ್ರ ನ್ಯೂಸ್: ಟಿ20 ವಿಶ್ವಕಪ್ ಮುಂದಿನ ವರ್ಷ ವೆಸ್ಟ್ ಇಂಡೀಸ್ ಮತ್ತು ಯುಎಇ ಆತಿಥ್ಯದಲ್ಲಿ ಜೂನ್‍ನಲ್ಲಿ ನಡೆಯುವ ಸಾಧ್ಯತೆ ಇದ್ದು, ಈ ವಿಶ್ವಕಪ್‍ನಲ್ಲಿ ರೋಹಿತ್ ಶರ್ಮ ಆಡಲಿದ್ದಾರ? ಎಂಬುದರ ಕುರಿತು ಚರ್ಚೆಗಳು ಕಳೆದ ಕೆಲವು ದಿನಗಳಿಂದ ಶುರುವಾಗಿದೆ.

Ad Widget . Ad Widget .

ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಐಪಿಎಲ್ ನ ಮುಂಬೈ ಇಂಡಿಯನ್ಸ್ ತಂಡದ ನಾಯಕನನ್ನಾಗಿ ನೇಮಿಸಿ, ರೋಹಿತ್ ಅವರನ್ನು ಈ ಸ್ಥಾನದಿಂದ ಕೆಳಗಿಳಿಸಲಾಗಿದ್ದು, ಇದು ರೋಹಿತ್ ಶರ್ಮ ಅವರ ಟಿ20 ಕ್ರಿಕೆಟ್ ಬಾಳ್ವೆ ಬಹುತೇಕ ಕೊನೆಗೊಂಡಿರುವ ಸುಳಿವೊಂದನ್ನು ನೀಡಿದೆ.

Ad Widget . Ad Widget .

‘ಟಿ20 ವಿಶ್ವಕಪ್‍ನಲ್ಲಿ ರೋಹಿತ್ ಅವರ ಸ್ಥಾನದ ಬಗ್ಗೆ ಈಗಲೇ ಭರವಸೆ ನೀಡಲಾಗುವುದಿಲ್ಲ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇತ್ತೀಚೆಗೆ ಹೇಳಿಕೆಯೊಂದನ್ನು ನೀಡಿದ್ದು, ಇದರಿಂದ ಹಲವು ಅನುಮಾನಗಳು ಶುರುವಾಗಿದೆ.

ಇನ್ನೊಂದು ಮೂಲಗಳ ಪ್ರಕಾರ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‍ನಿಂದ ಈಗಾಗಲೇ ದೂರ ಉಳಿಯಲು ನಿರ್ಧರಿಸಿದ್ದು ಕೇವಲ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‍ಗೆ ಮಾತ್ರ ಗಮನ ನೀಡಲು ನಿರ್ಧರಿಸಿರುವುದಾಗಿ ವರದಿಯೊಂದು ತಿಳಿಸಿದೆ. ಏಕದಿನ ವಿಶ್ವಕಪ್ ಸೋಲಿನ ಬಳಿಕವೇ ಉಭಯ ಆಟಗಾರರು ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *