ಸಮಗ್ರ ನ್ಯೂಸ್: ಗುಜರಾತ್ ನ ಸೂರತ್ ನಗರದಲ್ಲಿ ನಿರ್ಮಾಣಗೊಂಡಿರುವ ಅಮೆರಿಕದ ಪ್ರತಿಷ್ಟಿತ ಪೆಂಟಗನ್ ಅನ್ನು ಮೀರಿಸುವ ವಿಶ್ವದ ಅತಿದೊಡ್ಡ ಕಾಪೆರ್Çರೇಟ್ ಕಚೇರಿ ಕೇಂದ್ರವಾದ “ಸೂರತ್ ಡೈಮಂಡ್” ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿ ಶುಭಹಾರೈಸಿದ್ದಾರೆ. ಈ ಮೂಲಕ ತವರುನಾಡು ಗುಜರಾತ್ ನ ಸೂರತ್ ನಗರವು ವಜ್ರದ ರಾಜಧಾನಿಯಾಗುವತ್ತ ಭವಿಷ್ಯ ಬರೆದಿದ್ದಾರೆ.
ಸೂರತ್ ಡೈಮಂಡ್ ಸಂಕೀರ್ಣವು 35.54 ಎಕರೆ ಭೂಪ್ರದೇಶವನ್ನು ಒಳಗೊಂಡಿದ್ದು, 3,400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. 4,500ಕ್ಕೂ ಹೆಚ್ಚು ನೆಟ್ವರ್ಕ್ ಕಚೇರಿ 65,000ಕ್ಕೂ ಹೆಚ್ಚು ವಜ್ರದ ವ್ಯಾಪಾರಿಗಳಿಗೆ ಒನ್‍ಸ್ಟಾಪ್ ಡೆಸ್ಟಿನೇಶನ್ ಪಾಕಿರ್ಂಗ್‍ಗೆ 20 ಲಕ್ಷ ಚದರ ಅಡಿ ವಿಸ್ತೀರ್ಣ ಪ್ರದೇಶ, ಚಿಲ್ಲರೆ ಆಭರಣ ವ್ಯಾಪಾರಕ್ಕಾಗಿ ಆಭರಣ ಮಳಿಗೆ, ಅಂತರರಾಷ್ಟ್ರೀಯ ಬ್ಯಾಂಕಿಂಗ್, ಸುರಕ್ಷಿತ ವಾಲ್ಸ್‍ಗಳನ್ನು ಒಳಗೊಂಡಿದೆ.