Ad Widget .

ಬಚ್ಚನ್ ಮನೆ ಬಿಟ್ಟು ಹೊರ ಬಂದ ಐಶ್ವರ್ಯಾ ರೈ! ಸೊಸೆಯನ್ನು ಅನ್ ಫಾಲೊ ಮಾಡಿದ ಬಿಗ್ ಬಿ

ಸಮಗ್ರ ನ್ಯೂಸ್: ಸಿನಿಮಾ ತಾರೆಗಳಂದ್ರೆ ಹಿಂಗೆ ಏನದ್ರು ಒಂದು ಗಾಸಿಪ್ ಗಳಿಗೆ ಸುದ್ದಿಯಾಗ್ತಾನೆ ಇರ್ತಾರೆ. ಅದರಲ್ಲೂ ಬಾಲಿವುಡ್ ಅಂತೂ ಡಿವೋರ್ಸ್​ ಹಾಗೂ ಮರು ಮದುವೆಗಳಿಂದಲೇ ಫೇಮಸ್. ಈಗ ನಟಿ ಐಶ್ವರ್ಯಾ ರೈ ಅವರ ವಿಚ್ಛೇದನೆ ಸುದ್ದಿ ಬಹಳಷ್ಟು ದಿನಗಳಿಂದ ಕೇಳಿ ಬರುತ್ತಿದೆ. ಇದು ನಿಜವೋ ಅನ್ನೊದು ಕುತೂಹಲವಾಗಿದೆ.

Ad Widget . Ad Widget .

ಇತ್ತೀಚೆಗಷ್ಟೇ ಅಮಿತಾಭ್ ಬಚ್ಚನ್ ತಮ್ಮ ಮುದ್ದಿನ ಸೊಸೆ ಐಶ್ವರ್ಯಾ ರೈ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೋ ಮಾಡಿದಾಗ ಈ ರೂಮರ್ ಶುರುವಾಯಿತು. ಇದೀಗ ಮತ್ತೊಮ್ಮೆ ಐಶ್ವರ್ಯಾ ಹಾಗೂ ಅಭೀಷೇಕ್ ವಿಚ್ಛೇದನೆ ಸುದ್ದಿ ಮುನ್ನೆಲೆಗೆ ಬಂದಿದೆ. ಅಭಿಷೇಕ್ ಐಶ್ವರ್ಯಾ ಮಧ್ಯೆ ಹಲವಾರು ವರ್ಷಗಳಿಂದ ದಾಂಪತ್ಯದಲ್ಲಿ ಕಲಹ ಇದ್ದರೂ ಅವರು ಹೊರಗೆ ತೋರಿಸಿಕೊಂಡಿರಲಿಲ್ಲ. ಆದರೆ ಈಗ ಈ ಜೋಡಿ ನಡುವಿನ ಕಲಹ ಕ್ರಿಟಿಕಲ್ ಹಂತಕ್ಕೆ ಬಂದಿದೆ ಎನ್ನಲಾಗುತ್ತಿದೆ.

Ad Widget . Ad Widget .

ಮಗಳಿಗಾಗಿ ಮಾತ್ರವೇ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಇನ್ನೂ ಒಟ್ಟಿಗೆ ಇದ್ದಾರೆ. ಅವರ ಮಧ್ಯೆ ಹಲವಾರು ವರ್ಷಗಳಿಂದ ಹಲವಾರು ಸಮಸ್ಯೆಗಳಿವೆ. ಆದರೆ ಈಗ ಈ ವಿಷಯ ಹೆಚ್ಚು ಸೀರಿಯಸ್ ಆಗಿದೆ ಎಂದು ಬಚ್ಚನ್ ಕುಟುಂಬದ ಆಪ್ತ ಮೂಲವೊಂದು ತಿಳಿಸಿದೆ.

ಐಶ್ವರ್ಯಾ ರೈ ಅವರು ಬಚ್ಚನ್ ಮನೆಯಿಂದ ಹೊರಗೆ ಬಂದು ತನ್ನ ತಾಯಿಯ ಜೊತೆ ಸೆಟಲ್ ಆಗಿದ್ದಾರೆ ಎಂಬ ವದಂತಿಯು ಹಬ್ಬುತ್ತಿದೆ.

ಐಶ್ವರ್ಯಾ ಹಾಗೂ ಅತ್ತೆ ಜಯಾ ಬಚ್ಚನ್ ಮಧ್ಯೆ ಹಲವಾರು ಸಮಸ್ಯೆಗಳಿವೆ ಎನ್ನಲಾಗುತ್ತಿದೆ. ಕೆಲ ಹಿಂದೆ ಅಷ್ಟೇ ಬಚ್ಚನ್ ಹುಟ್ಟುಹಬ್ಬದಂದು ಪೋಟೋ ಕ್ಲಿಕ್ ಮಾಡಿ ಪೋಸ್ಟ್ ಮಾಡಲಾಗಿತ್ತು. ಆದ್ರೆ ಐಶ್ವರ್ಯ ಅತ್ತೆ ಜಯಾ ಬಚ್ಚನ್ ಅದನ್ನು ಕ್ರಾಪ್ ಮಾಡಿ ಬರಿ ಮಾವ, ಮಗಳ ಪೋಟೋ ಪೋಸ್ಟ್ ಮಾಡಿದ್ದಾರೆ. ಇದು ಮುನಿಸಿಗೆ ಪುಷ್ಟಿ ನೀಡಿತ್ತು.
ಇದೇ ತರವಾಗಿ ಹಲವಾರು ವರ್ಷಗಳಿಂದ ಅವರು ಮಾತನಾಡುತ್ತಿಲ್ಲ ಎಂದೂ ಹೇಳಲಾಗುತ್ತಿದೆ.

ಇನ್ನೂ ಐಶ್ವರ್ಯ ಮದುವೆ ನಂತರ ಮಾಡಿದ ಸಿನಿಮಾಗಳು ಅತ್ತೆಗೆ ಆಕ್ಷೇಪಗಳಿವೆ. ಪದೇ ಪದೇ ಜಗಳ ಮಾಡುತ್ತಿದ್ದರಂತೆ. ಹಾಗೇ ಬಚ್ಚನ್ ಪುತ್ರಿ ಗಂಡನ ಮನೆ ಬಿಟ್ಟು ತವರು ಮನೆಯಲ್ಲಿ ಇರೋದು ಐಶ್ವರ್ಯಗೆ ಇಷ್ಟವಾಗಿಲ್ಲವಂತೆ. ಈ ಕಾರಣಗಳೆಲ್ಲ ಕೇಳಿಬರುತ್ತಿದೆ.

ಇನ್ನೂ ಬಾಲಿವುಡ್ ನಟ, ಬಿಗ್​ ಬಿ ಪುತ್ರ, ನಟಿ ಐಶ್ವರ್ಯಾ ರೈ ಪತಿ ಅಭಿಷೇಕ್ ಬಚ್ಚನ್ ಅವರು ಮದುವೆಯಾಗಿ 16 ವರ್ಷಗಳಾದವು. ಆದರೆ ಇತ್ತೀಚೆಗೆ ಅಭಿಷೇಕ್ ಬಚ್ಚನ್ ಅವರು ಇದೇ ಮೊದಲಬಾರಿಗೆ ವೆಡ್ಡಿಂಗ್ ರಿಂಗ್ ಧರಿಸದೆ ಪಬ್ಲಿಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅಭೀಷೇಕ್ ಬಚ್ಚನ್ ಸಾರ್ವಜನಿಕವಾಗಿ ಮದುವೆ ರಿಂಗ್ ಧರಿಸದೆ ಕಾಣಿಸಿಕೊಂಡಿದ್ದು ಡಿವೋರ್ಸ್ ರೂಮರ್ಸ್​ಗೆ ದಾರಿ ಮಾಡಿಕೊಟ್ಟಿದೆ. ನಟ ಒಮ್ಮೆಯೂ ವೆಡ್ಡಿಂಗ್ ರಿಂಗ್ ಇಲ್ಲದೆ ಕಾಣಿಸಿಕೊಂಡಿರಲಿಲ್ಲ. ಈಗ ಈ ರೀತಿ ಕಾಣಿಸಿಕೊಂಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

Leave a Comment

Your email address will not be published. Required fields are marked *