ಸಮಗ್ರ ನ್ಯೂಸ್: ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡ ವರ್ಷಾವಧಿ ಜಾತ್ರೋತ್ಸವವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ಡಿ.15 ಹಾಗೂ 16 ರಂದು ನಡೆಯಿತು.

ಡಿ. 15 ನೇ ಶುಕ್ರವಾರದಂದು ಚಂಡಿಕಾಯಾಗದ ಪೂರ್ಣಾಹುತಿ, ಸುವಾಸಿನಿ ಪೂಜೆ, ಶ್ರೀ ದೇವರಿಗೆ ಕಲತಾಭಿಷೇಕ, ಹಸಿರು ಹೊರೆಕಾಣಿಕೆ ಸಮರ್ಪಣೆ, ಮಹಾಪೂಜೆ, ಪ್ರಸಾರ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಬಳಿಕ ರಾತ್ರಿ ಗಂಟೆ 7 ಕ್ಕೆ ಶ್ರೀ ದೇವಿಗೆ ದೊಡ್ಡ ರಂಗಪೂಜೆ ಹಾಗೂ ಮಹಾಪೂಜೆ. ರಾತ್ರಿ ಗಂಟೆ 8-00ರಿಂದ; ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆ ಪೂಜೆ, ಬೆಡಿ ಪ್ರದರ್ಶನ ನಡೆಯಿತು.
ಡಿ. 16 ನೇ ಶನಿವಾರದಂದು ಸಂಜೆ ರಕೇಶ್ವರಿ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಿತು.

ಈ ಕಾರ್ಯಕ್ರಮಕ್ಕೆ ಊರಸಮಸ್ತರು ಭಾಗವಹಿಸಿದ್ದರು.