Ad Widget .

ಮಂಗಳೂರು: ಹವ್ಯಕ ಸಭಾದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ವೈದಿಕ ಸಮ್ಮಾನ ಕಾರ್ಯಕ್ರಮ

ಸಮಗ್ರ ನ್ಯೂಸ್: ಮಂಗಳೂರು ನಂತೂರು ಶ್ರೀ ಭಾರತೀ ಕಾಲೇಜು ಆವರಣದಲ್ಲಿರುವ ಶಂಕರಶ್ರೀ ಸಭಾಭವನದಲ್ಲಿ ಪ್ರತಿ ವರ್ಷ ನಡೆದು ಬರುವಂತೆ ಈ ವರ್ಷವೂ ಮಂಗಳೂರು ಹವ್ಯಕ ಸಭಾದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವೈದಿಕ ಸಮ್ಮಾನ ಕಾರ್ಯಕ್ರಮ ಡಿ.14 ರಂದು ಜರುಗಿತು.

Ad Widget . Ad Widget .

ಹವ್ಯಕ ಸಭಾ ಅಧ್ಯಕ್ಷರಾದ ಗೀತಾದೇವಿ ಚೂಂತಾರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ವೈದಿಕ ಕೃಷ್ಣ ಭಟ್ ದಂಪತಿಯನ್ನು ಸಮ್ಮಾನಿಸಲಾಯಿತು.

Ad Widget . Ad Widget .

ವೈದಿಕರಾದ ಶಿವಪ್ರಸಾದ್ ಅಮೈ ಮಾತನಾಡಿ ಎಪ್ರಿಲ್ ತಿಂಗಳಲ್ಲಿ ವಸಂತ ವೇದಪಾಠ ಶಿಬಿರದ ಬಗ್ಗೆ ಮಾಹಿತಿ ನೀಡಿದರು.
ವೇದಮೂರ್ತಿ ಶಿವಪ್ರಸಾದ ಭಟ್ ಅಮೈ ಅವರ ನೇತೃತ್ವದಲ್ಲಿ ಹವ್ಯಕ ಸಭಾದ ನಿಕಟಪೂರ್ವ ಅಧ್ಯಕ್ಷ ಡಾ.ಬಿ.ರಾಜೇಂದ್ರ ಪ್ರಸಾದ್ ದಂಪತಿ ಗಣಪತಿ ಹವನ ನೆರವೇರಿಸಿದರು. ಬಳಿಕ ಸಾಮೂಹಿಕ ಸಂಕಲ್ಪದೊಂದಿಗೆ ಅಧ್ಯಕ್ಷರಾದ ಗೀತಾದೇವಿ ಚೂಂತಾರು ದಂಪತಿ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿಸಿದರು. ಸಾಮೂಹಿಕ ವಿಷ್ಣು ಸಹಸ್ರನಾಮ ಪಠನ, ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಅಶೋಕ್ ಹಾರ್ನಳ್ಳಿ, ಶ್ರೀರಾಮಚಂದ್ರಾಪುರಮಠದ ಚಂದ್ರಮೌಳೀಶ್ವರ ದೇವಸ್ಥಾನ ಆಡಳಿತ ಮಂಡಳಿಯ ಹರಿಪ್ರಸಾದ್ ಪೆರಿಯಪ್ಪು, ಕಟೀಲು ದೇವಸ್ಥಾನದ ಅರ್ಚಕರಾದ ಹರಿನಾರಾಯಣ ಅಸ್ರಣ್ಣ, ನಿಕಟಪೂರ್ವ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್, ದ. ಕ. ಹಾಗೂ ಕಾಸರಗೋಡು ಹವ್ಯಕ ಮಹಜನಾ ಸಭಾದ ಅಧ್ಯಕ್ಷ ನಿಡುಗಳ ಕೃಷ್ಣ ಭಟ್, ಭಾರತೀ ಸೌಹಾರ್ದ ಸೊಸೈಟಿ ಅಧ್ಯಕ್ಷ ಜಿ. ಕೆ ಭಟ್ ಕೊಣಾಜೆ ಮತ್ತಿತರರು ಉಪಸ್ಥಿತರಿದ್ದರು.

ಉಪಾಧ್ಯಕ್ಷೆ ಸುಮಾ ರಮೇಶ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಶ್ರೀಕೃಷ್ಣ ನೀರಮೂಲೆ ಅವರು ಸಮ್ಮಾನಿತರನ್ನು ಪರಿಚಯಿಸಿದರು. ಜತೆ ಕಾರ್ಯದರ್ಶಿ ಮಮತಾ ಪ್ರಶಸ್ತಿ ಪತ್ರ ವಾಚಿಸಿದರು. ಕಾರ್ಯದರ್ಶಿ ಮೀರಾ ಭಟ್ ವಂದಿಸಿದರು. ಭಾಸ್ಕರ ಹೊಸಮನೆ ಕಾರ್ಯಕ್ರಮ ನಿರೂಪಿಸಿದರು.

.

Leave a Comment

Your email address will not be published. Required fields are marked *