ಪುತ್ತೂರು: ಮತ್ತೋರ್ವ ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಗಡಿಪಾರು ನೊಟೀಸ್

ಸಮಗ್ರ ನ್ಯೂಸ್: ಹಿಂದೂ ಸಂಘಟನೆಯ ಮತ್ತೋರ್ವ ಕಾರ್ಯಕರ್ತರೊಬ್ಬರಿಗೆ ಪುತ್ತೂರು ಸಹಾಯಕ ಆಯುಕ್ತರಿಂದ ಗಡಿಪಾರು ನೋಟಿಸ್ ನೀಡಲ್ಪಟ್ಟಿದೆ.

Ad Widget ... ..

ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ನಿವಾಸಿಯಾಗಿರುವ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತ ಪ್ರವೀಶ್ ಕುಮಾರ್ ನಾಯರ್ ಎಂಬವರಿಗೆ ಯಾಕೆ ಗಡಿಪಾರು ಮಾಡಬಾರದು ಎಂದು ಕಾರಣ ಕೇಳಿ ನೋಟಿಸ್ ನೀಡಲಾಗಿದೆ.

Ad Widget

ಎರಡು ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರವೀಶ್ ಕುಮಾರ್ ಗೆ ಡಿಸೆಂಬರ್ 20 ರಂದು ಸಹಾಯಕ ಆಯುಕ್ತರ ನ್ಯಾಯಾಲಯದ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಸದ್ಯಕ್ಕೆ ಪ್ರವೀಶ್ ಕುಮಾರ್ ನಾಯರ್ ಅಯ್ಯಪ್ಪ ಮಾಲಾಧಾರಿಯಾಗಿದ್ದು, ನೋಟೀಸ್ ನೀಡಿರುವ ಕ್ರಮಕ್ಕೆ ಹಿಂದೂ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *