Ad Widget .

ಬೆಂಗಳೂರಿನಿಂದ ಆಯೋಧ್ಯೆಗೆ ಸಾಗಲಿದೆ ಗಂಟೆ ಮತ್ತು ಪೂಜಾ ಸಾಮಾಗ್ರಿಗಳು

ಸಮಗ್ರ ನ್ಯೂಸ್: ರಾಮಮಂದಿರ ಉದ್ಘಾಟನೆಗೆ ಸಜ್ಜಾಗುತ್ತಿದ್ದು ಮನೆ ಮನೆಗಳಲ್ಲಿ ದೀಪ ಬೆಳಗಿಸಲು, ಗ್ರಾಮ ಗ್ರಾಮಗಳಲ್ಲಿ ಕಾರ್ಯಕ್ರಮ ಪೂಜೆ ಪುನಸ್ಕಾರ ಆಯೋಜಿಸಲು ಸಿದ್ಧತೆ ನಡೆಯುತ್ತಿದೆ. ಇದರ ಭಾಗವಾಗಿ ಬೆಂಗಳೂರಿನ ಬನಶಂಕರಿ ಒಂದನೇ ಹಂತದಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕೆ 2.5 ಟನ್ ತೂಕದ ಘಂಟೆಗಳು, 30 ಸಣ್ಣ ಗಂಟೆಗಳು, 38 ಕೆಜಿ ತೂಕದ ಬೆಳ್ಳಿಯ ಸಾಮಾನುಗಳನ್ನು ಸಮರ್ಪಣೆ ಮಾಡಲಾಗಿದೆ.

Ad Widget . Ad Widget .

ಸಮರ್ಪಣೆ ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಭಾಗಿಯಾಗಿದ್ದಾರೆ. ತಮಿಳುನಾಡಿನ ನಾಮಕ್ಕಲ್‍ನಲ್ಲಿ ಈ ಘಂಟೆಗಳನ್ನು ತಯಾರು ಮಾಡಲಾಗಿದ್ದು, 2.5 ಟನ್ ತೂಕದ ಘಂಟೆಗಳನ್ನು ದೇವಸ್ಥಾನದ ಒಳಗಡೆ ಬಳಸಲಾಗುತ್ತದೆ. ಈ ಘಂಟೆಗಳನ್ನು ಬನಶಂಕರಿಯ ರಾಜೇಂದ್ರ ನಾಯ್ಡು ಎಂಬುವವರು ಅಯೋಧ್ಯೆಯ ರಾಮಮಂದಿರಕ್ಕೆ ಸಮರ್ಪಣೆ ಮಾಡಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *