Ad Widget .

ಮಂಗಳೂರು: ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಕಳ್ಳತನ| ಅರೇಬಿಕ್ ಶಿಕ್ಷಕರ 2.18 ಲಕ್ಷಕ್ಕೆ ಕನ್ನ ಹಾಕಿದ ಖದೀಮರು

ಸಮಗ್ರ ನ್ಯೂಸ್: ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ತೆರಳಿದ್ದ ಸಂದರ್ಭದಲ್ಲಿ ಅರೇಬಿಕ್‌ ಶಾಲೆಯ ಅಧ್ಯಾಪಕರ ₹ 2.18 ಲಕ್ಷ ಕಳವಾದ ಬಗ್ಗೆ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

‘ಭಟ್ಕಳದಿಂದ ಇಲ್ಲಿಗೆ ಡಿ. 9ರಂದು ಬಂದಿದ್ದ ಅಬ್ದುಲ್ ಹಮೀದ್ ಎಂಬುವರು ನಗರದ ಹಂಪನಕಟ್ಟೆ ಬಳಿಯ ನೂರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.

Ad Widget . Ad Widget .

ಈ ಸಂದರ್ಭ ₹ 2,18,480 ಇದ್ದ ಪ್ಲಾಸ್ಟಿಕ್‌ ಚೀಲವನ್ನು ಪ್ರಾರ್ಥನಾ ಕೊಠಡಿಯಲ್ಲಿರುವ ಕುರಾನ್ ಇಡುವ ಕಪಾಟಿನ ಬಳಿ ಇಟ್ಟಿದ್ದರು. ಪ್ರಾರ್ಥನೆ ಮುಗಿಸಿ ತಾವು ಟೀಚರ್ ಆಗಿ ಕೆಲಸ ಮಾಡುತ್ತಿರುವ ಇಕ್ರಾ ಅರೇಬಿಕ್ ಸ್ಕೂಲ್‌ಗೆ ತೆರಳಿ ಪರಿಚಯದವರೊಬ್ಬವರಿಗೆ ಹಣ ಕೊಡಲೆಂದು ಪ್ಲಾಸ್ಟಿಕ್‌ ಚೀಲವನ್ನು ತಡಕಾಡಿದಾಗ ಅದರಲ್ಲಿ ಹಣ ಇರಲಿಲ್ಲ.

ನೂರ್ ಮಸೀದಿಗೆ ಮರಳಿ ಸಿ.ಸಿ.ಟಿ.ವಿ. ಕ್ಯಾಮರಾ ಪರಿಶೀಲಿಸಿ ನೋಡಿದಾಗ ಯಾರೋ ಕಳ್ಳರು ಸಂಜೆ 7-48ರಿಂದ 7-50ರ ನಡುವೆ ಹಣವನ್ನು ಕಳವು ಮಾಡಿರುವುದು ಕಂಡು ಬಂದಿತ್ತು. ಈ ಬಗ್ಗೆ ಭಟ್ಕಳದಲ್ಲಿ ತಮಗೆ ಹಣ ನೀಡಿದ್ದ ಪೈಜಾನ್ ಕೋಬಟ್ಟೆ ಹಾಗೂ ಇತರರಲ್ಲಿ ಚರ್ಚಿಸಿ ಬಳಿಕ ದೂರು ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Comment

Your email address will not be published. Required fields are marked *