ಸುಳ್ಯ: ವಾಹನ ಚಲಾಯಿಸುತ್ತಿದ್ದಾಗಲೇ ಹೃದಯಾಘಾತ| ಪಿಕಪ್ ಚಾಲಕ ಸಾವು

ಸಮಗ್ರ ನ್ಯೂಸ್: ಪಿಕಪ್‌ ವಾಹನ ಚಾಲನೆ ಮಾಡಿಕೊಂಡು ಬರುತ್ತಿದ್ದ ಸಂದರ್ಭ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡು, ಸಹ ಚಾಲಕ ಅವರನ್ನು ಆಸ್ಪತ್ರೆಗೆ ಕರೆ ತರುವ ವೇಳೆ ದಾರಿ ಮಧ್ಯೆ ಮೃತಪಟ್ಟ ಘಟನೆ ಸುಳ್ಯ ಸಮೀಪದ ಪೈಚಾರ್ ನಲ್ಲಿ ಡಿ.14ರ ರಾತ್ರಿ ಸಂಭವಿಸಿದೆ.

Ad Widget ... ..

ಮೃತರನ್ನು ಗದಗ ತಾಲೂಕು ಹೊಸೂರು ಗ್ರಾಮದ ಹುಸೇನಸಾಬ ಹೆಬಸುರ (45) ಎಂದು ಗುರುತಿಸಲಾಗಿದೆ. ಬೆಳ್ತಂಗಡಿಯಲ್ಲಿ ಶಾಮಿಯಾನ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು ಮಡಿಕೇರಿಯಲ್ಲಿ ಕಾರ್ಯಕ್ರಮವೊಂದಕ್ಕೆ ಅಳವಡಿಸಲಾಗಿದ್ದ ಶಾಮಿಯಾನವನ್ನು ತರಲೆಂದು ಮಡಿಕೇರಿಗೆ ಗುರುವಾರ ರಾತ್ರಿ ಹೊರಟ್ಟಿದ್ದರು.

Ad Widget

ವಾಹನ ಸುಳ್ಯದ ಪೈಚಾರು ಸಮೀಪ ಬರುತ್ತಿದ್ದಂತೆ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದ್ದು ಅಲ್ಲೇ ಬದಿಯಲ್ಲಿ ವಾಹನವನ್ನು ನಿಲ್ಲಿಸಿ ಬಳಿಯಲ್ಲಿ ಕುಳಿತಿದ್ದ ವ್ಯಕ್ತಿಗೆ ವಿಷಯ ತಿಳಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಆತ ಸಾವನ್ನಪ್ಪಿದ್ದಾಗಿ ತಿಳಿದುಬಂದಿದೆ.

Leave a Comment

Your email address will not be published. Required fields are marked *