ನಾಯಕನ ಆಟವಾಡಿದ ಸೂರ್ಯಕುಮಾರ್/ ಸರಣಿ ಸಮಬಲದಲ್ಲಿ ಅಂತ್ಯ

ಸಮಗ್ರ ನ್ಯೂಸ್: ಭಾರತ ತಂಡ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ 106 ರನ್ ಗಳಿಂದ ಜಯ ಸಾದಿಸಿದ್ದು, ಇದರೊಂದಿಗೆ 3 ಪಂದ್ಯಗಳ ಸರಣಿ ಸಮಬಲಗೊಂಡಿದೆ. ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿದ್ದು, ಎರಡನೇ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದುಕೊಂಡಿತ್ತು.

Ad Widget ... ..

ಮೊದಲು ಬ್ಯಾಟ್ ಮಾಡಿದ್ದ ಭಾರತ ನಾಯಕ ಸೂರ್ಯಕುಮಾರ್ ಯಾದವ್ ಸ್ಪೋಟಕ ಶತಕ ಮತ್ತು ಯಶಸ್ವಿ ಜೈಸ್ವಾಲ್ ಆಕರ್ಷಕ ಅರ್ಧ ಶತಕದ ನೆರವಿನಿಂದ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಭಾರತ 202 ರನ್ ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕುಲದೀಪ್ ಯಾದವ್ ಸ್ಪಿನ್ ದಾಳಿಗೆ ನಲುಗಿ, 13.5 ಓವರ್‍ನಲ್ಲಿ 95 ರನ್‍ಗೆ ಸರ್ವ ಪತನ ಕಂಡಿತು. ಕುಲ್‍ದೀಪ್ ಯಾದವ್ 5 ವಿಕೆಟ್ ಪಡೆದು ಮಿಂಚಿದರು. ರವೀಂದ್ರ ಜಡೇಜಾ 2, ಮುಖೇಶ್ ಕುಮಾರ್ ಹಾಗೂ ಅರ್ಶದೀಪ್ ಸಿಂಗ್ ತಲಾ ಒಂದು ವಿಕೆಟ್ ಕಬಳಿಸಿದರು.

Ad Widget

ಸೂರ್ಯಕುಮಾರ್ ಕೇವಲ 56 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ ನೆರವಿನಿಂದ 100 ರನ್ ಗಳಿಸಿದರು. ಯಶಸ್ವಿ ಜೈಸ್ವಾಲ್ 41 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 60 ರನ್ ಬಾರಿಸಿದರು. ಸೂರ್ಯ ಹಾಗೂ ಜೈಸ್ಟಾಲ್ ಮೂರನೇ ವಿಕೆಟ್‍ಗೆ 112 ರನ್ ಜೊತೆಯಾಟ ನೀಡಿದರು.

Leave a Comment

Your email address will not be published. Required fields are marked *