Ad Widget .

ಸೌಜನ್ಯಳ ನ್ಯಾಯಕ್ಕಾಗಿ ಪ್ರತಿಭಟನೆಗೆ ಗುತ್ತಿಗಾರು ಸಜ್ಜು|ಹಲವು ಸಮಾವೇಶಗಳನ್ನ ಮೀರಿಸಲಿದೆಯಾ ಜನಸ್ತೋಮ..?

ಸಮಗ್ರ ನ್ಯೂಸ್: ಸೌಜನ್ಯ ಹೋರಾಟ ಸಮಿತಿ ಗುತ್ತಿಗಾರು ವತಿಯಿಂದ ನಾಳೆ (ಡಿ.16 )ರಂದು ಸುಳ್ಯ ತಾಲೂಕಿನ ಗುತ್ತಿಗಾರು ಹೃದಯಭಾಗದಲ್ಲಿರುವ ದೇವಿಸಿಟಿ ಆವರಣದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ಸಭೆ ಯಶಸ್ಸಿನ ಸಿದ್ಧತಾ ಕಾರ್ಯಗಳು ಪೂರ್ಣಗೊಂಡಿವೆ. ಬೃಹತ್ ಜನಸ್ತೋಮ ಸೇರುವ ನಿರೀಕ್ಷೆಯಿದ್ದು, ಕ್ಷಣಗಣನೆ ಆರಂಭಗೊಂಡಿದೆ.

Ad Widget . Ad Widget .

ನ್ಯಾಯಕ್ಕಾಗಿ ಮಿಡಿಯುತ್ತಿರುವ ನೂರಾರು ಸಮಾನ ಮನಸ್ಕ ಯುವಸಮುದಾಯ ಪಕ್ಷಾತೀತವಾಗಿ ಒಗ್ಗಟ್ಟು, ಹುರುಪಿನಿಂದ ಸಿದ್ದತೆಯಲ್ಲಿ ತೊಡಗಿಸಿಕೊಂಡಿದ್ದು ಕಾರ್ಯಕ್ರಮ ಶಾಂತಿಯುತ ಮತ್ತು ಯಶಸ್ವಿಯಾಗಿ ನೆರವೇರಲು ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡಿದ್ದಾರೆ

Ad Widget . Ad Widget .

ಇದುವರೆಗೆ ಜರುಗಿದ ರಾಜಕೀಯ ಮತ್ತು ರಾಜಕೀಯೇತರ ಸಮಾವೇಶಗಳ ಮೀರಿಸುವ ಅಭೂತಪೂರ್ವ ಜನಸ್ತೋಮಕ್ಕೆ ಗುತ್ತಿಗಾರು ಪೇಟೆ ಸಾಕ್ಷಿಯಾಗಲಿದೆ ಎನ್ನುವುದು ಸಾರ್ವಜನಿಕರ ಮಾತ್ರವಲ್ಲ ಕಾನೂನು ಸುವ್ಯವಸ್ಥೆ ಇಲಾಖೆಗಳ ಲೆಕ್ಕಾಚಾರದಲ್ಲಿದೆ.
ರಾಷ್ಟ್ರೀಯ ಪಕ್ಷಗಳ ಹಲವಾರು ನಾಯಕರನ್ನೊಳಗೊಂಡ ರಾಜಕೀಯ ಶಕ್ತಿ ಕೇಂದ್ರ ಎನಿಸಿರುವ ಮತ್ತು ಬಹು ಆಯಾಮಗಳ ಕೇಂದ್ರಸ್ಥಾನವೆನಿಸಿರುವ
ಗುತ್ತಿಗಾರಿನಲ್ಲಿ ಆಯೋಜಿತ ಪ್ರತಿಭಟನೆ ಕುತೂಹಲ ಮೂಡಿಸಿದೆ. ರಾಜಕೀಯ ಪ್ರಮುಖ ನಾಯಕರು ತಟಸ್ಥ ಧೋರಣೆ ಅನುಸರಿಸಿರುವ ನಡುವೆ ಯುವಸಮುದಾಯ ಏಕಮನಸ್ಕವಾಗಿ ಪ್ರತಿಭಟನೆಗೆ ಯಶಸ್ಸಿಗೆ ಶ್ರಮಿಸುತಿರುವುದು ಹಲವರ ಪಾಲಿಗೆ “ಅತ್ತ ಧರೆ ಇತ್ತ ಹುಲಿ” ಎನ್ನುವಂತಾಗಿದೆ.

ಭದ್ರತೆ ಮತ್ತು ಶಾಂತಿಯುತವಾಗಿ ನೆರವೇರಲು ಪಾರ್ಕಿಂಗ್, ಸ್ವಯಂಸೇವಕರ ಜವಾಬ್ದಾರಿಗಳ ಹಂಚಿಕೆ ಸಹಿತ ಸಕಲ ವ್ಯವಸ್ಥೆಗಳನ್ನು ಕೈಗೊಂಡಿದ್ದು ಸಮಿತಿ ಸದಸ್ಯರು ಸ್ವಯಂಪ್ರೇರಿತ ವಾಗಿ ಮುನ್ನೆಚ್ಚರಿಕೆ ವಹಿಸಿಕೊಳ್ಳುತಿದ್ದಾರೆ.

ಕಾರ್ಯಕ್ರಮಕ್ಕೆ ಪ್ರಮುಖ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟೆಣ್ಣವರ್, ತುಳು ದೈವರಾಧಾನೆಯ ವಿಮರ್ಶಕರಾದ ತಮ್ಮಣ್ಣ ಶೆಟ್ಟಿ, ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ ಹಾಗು ಸೌಜನ್ಯಳ ತಾಯಿ ಕುಸುಮಾವತಿ ಚಂದಪ್ಪ ಗೌಡ, ವಕೀಲರಾದ ಮೋಹಿತ್ ಭಾಗವಹಿಸಲಿದ್ದಾರೆ.

Leave a Comment

Your email address will not be published. Required fields are marked *