ಸಂಸತ್ ಭದ್ರತಾ ಲೋಪದ ಮಾಸ್ಟರ್ ಮೈಂಡ್ ಲಲಿತ್ ಝಾ ಅರೆಸ್ಟ್| 7 ದಿನ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

ಸಮಗ್ರ ನ್ಯೂಸ್: ಲೋಕಸಭಾ ಸಂಸತ್ ಕಲಾಪದಲ್ಲೇ ಭಾರೀ ಭದ್ರತೆಯನ್ನು ಲೆಕ್ಕಿಸದೇ ಸದನಕ್ಕೆ ಧುಮುಕಿ, ದುಷ್ಕೃತ್ಯ ನಡೆಸಿದ್ದ ಆರೋಪದಲ್ಲಿ ಮಾಸ್ಟರ್ ಮೈಂಡ್ ಲಲಿತ್ ಝಾನನ್ನು ಪೊಲೀಸರು ಬಂಧಿಸಿದ್ದರು. ಅವರನ್ನು ದೆಹಲಿಯ ಪಟಿಯಾಲ ಕೋರ್ಟ್ ಗೆ ಹಾಜರಿಪಡಿಸಲಾಗಿತ್ತು. ಇದೀಗ ಅವರನ್ನು 7 ದಿನ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.

Ad Widget ... ..

ನಿನ್ನೆ ಸಂಸತ್ತಿನ ಭದ್ರತಾ ಉಲ್ಲಂಘನೆ ಘಟನೆಯ ಆರನೇ ಆರೋಪಿ ಮತ್ತು ಮಾಸ್ಟರ್ ಮೈಂಡ್ ಅನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಆರೋಪಿ ಲಲಿತ್ ಝಾನನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು.

Ad Widget

ಬಂಧಿತ ಆರೋಪಿ ಲಲಿತ್ ಝಾನನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿದ ನಂತರ, ದೆಹಲಿಯ ಪಟಿಯಾಲ ನ್ಯಾಯಾಲಯಕ್ಕೆ ದೆಹಲಿ ಪೊಲೀಸರು ಹಾಜರುಪಡಿಸಿದ್ದರು. ಅಲ್ಲದೇ ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಲು, ತಮ್ಮ ವಶಕ್ಕೆ ನೀಡುವಂತೆ ಕೋರ್ಟ್ ಕೋರಿದ್ದರು. ಅವರ ಕೋರಿಕೆಯಂತೆ 7 ದಿನಗಳ ಕಾಲ ನ್ಯಾಯಾಲಯವು ಆರೋಪಿ ಲಲಿತ್ ಝಾನನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

Leave a Comment

Your email address will not be published. Required fields are marked *