Ad Widget .

ಮಂಗಳೂರು: ಶಾಲೆ ಮುಂದೆ ಬಿಯರ್ ಬಾಟಲ್ ಎಸೆದಿದ್ದನ್ನು ಪ್ರಶ್ನಿಸಿದ್ದೇ ತಪ್ಪಾಯ್ತು| ಯುವಕನನ್ನು ‌ಇರಿದು ಕೊಂದ ಪಾತಕಿಗಳು!!

ಸಮಗ್ರ ನ್ಯೂಸ್: ಬಿಯರ್ ಬಾಟಲ್ ಅನ್ನು ರಸ್ತೆಗೆ ಯಾಕೆ ಎಸೆದಿದ್ದೀರಿ ಎಂದು ಯುವಕನೊಬ್ಬ ಕುಡುಕರನ್ನು ಪ್ರಶ್ನಿಸಿದ್ದೇ ತಪ್ಪಾಗಿದೆ. ಪ್ರಶ್ನೆ ಮಾಡಿದ ಯುವಕನನ್ನು ಇರಿದು ಕೊಲೆ ಮಾಡಿದ ಘಟನೆ ಮಂಗಳೂರು ಹೊರವಲಯದಲ್ಲಿ ನಡೆದಿದೆ. 28 ವರ್ಷದ ವರುಣ್ ಗಟ್ಟಿ ಮೃತ ದುರ್ದೈವಿ. ಬುಧವಾರ (ಡಿಸೆಂಬರ್ 13) ರಾತ್ರಿ ಈ ಘಟನೆ ನಡೆದಿದೆ.

Ad Widget . Ad Widget .

ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯ ಸಾರಸ್ವತ ಕೊಲನಿಯ ಜಾಯ್ ಲ್ಯಾಂಡ್ ಶಾಲೆ ಬಳಿ ಬುಧವಾರ ರಾತ್ರಿ 10.45ರ ಸುಮಾರಿಗೆ ಆರೋಪಿಗಳಾದ ಸೂರಜ್ ಮತ್ತು ರವಿರಾಜ್ ಮದ್ಯಪಾನ ಮಾಡಿದ್ದಾರೆ. ಕುಡಿದ ಬಿಯರ್ ಬಾಟಲ್‌ ಅನ್ನು ರಸ್ತೆಗೆ ಎಸೆದಿದ್ದಾರೆ. ಜಾಯ್ ಲ್ಯಾಂಡ್ ಶಾಲಾ ಬಳಿಯ ನಿವಾಸಿ ವರುಣ್ ಗಟ್ಟಿ ಮತ್ತು ಆತನ ಸ್ನೇಹಿತ ಅಕ್ಷಯ್, ಕುಡಿದು ಶಾಲೆಯ ಮುಂದೆ ಯಾಕೆ ಬಾಟಲ್‌ ಎಸೆಯುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ವಿಚಾರವಾಗಿ ಎರಡು ಗುಂಪುಗಳು ನಡುವೆ ವಾಗ್ವಾದ, ತಳ್ಳಾಟ ನಡೆದಿದೆ.

Ad Widget . Ad Widget .

ಈ ವೇಳೆ ಸೂರಜ್ ಎಂಬುವವನು ವರುಣ್ ಬೆನ್ನಿಗೆ ಹರಿತವಾದ ಆಯುಧದಿಂದ ಘಟನೆಯಲ್ಲಿ ಗಂಭೀರ ಗಾಯಗೊಂಡ ವರುಣ್ ಸಮೀಪದ ತನ್ನ ಮನೆ ಕಡೆ ನಡೆದು ಹೋಗಿದ್ದು ಆತನ ಸಹೋದರ ಶರಣ್ ಮತ್ತು ಸ್ನೇಹಿತರು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ವರುಣ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಆರೋಪಿ ಸೂರಜ್ ಮತ್ತು ಆತನೊಂದಿಗಿದ್ದ ರವಿರಾಜ್ ಸಾರಸ್ವತ ಕೊಲೊನಿ ನಿವಾಸಿಗಳಾಗಿದ್ದು ಇಬ್ಬರನ್ನೂ ಕ್ಷಿಪ್ರವಾಗಿ ಉಳ್ಳಾಲ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರವಿರಾಜ್ ಸೋಮೇಶ್ವರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯನಾಗಿದ್ದು ಸೂರಜ್ ಮರಳು ಸಾಗಿಸೋ ಲಾರಿ ಚಾಲಕನಾಗಿದ್ದಾನೆ. ಮೃತ ವರುಣ್ ‘ಮುಡಾ’ ಕಮೀಷನರ್ ಅವರ ವಾಹನದ ಚಾಲಕನಾಗಿದ್ದ. ಮೃತ ವರುಣ್‌ಗೆ ತಂದೆ, ತಾಯಿ, ಸಹೋದರ, ಸಹೋದರಿಯರು ಇದ್ದಾರೆ. ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *