Ad Widget .

ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಮಸೂದೆ-2023/ ಸದನದ ಅಂಗೀಕಾರ

ಸಮಗ್ರ ಸಮಾಚಾರ: “ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಮಸೂದೆ-2023″ಕ್ಕೆ ಸದನವು ಗುರುವಾರ ಒಪ್ಪಿಗೆ ನೀಡಿದ್ದು, ಇದು ವಕೀಲರ ಮೇಲೆ ವೃತ್ತಿಗೆ ಸಂಬಂಧಿಸಿದಂತೆ ಹಲ್ಲೆ ನಡೆಸುವುದು, ಬೆದರಿಕೆ ಒಡ್ಡುವುದು ಮತ್ತು ಕೆಲಸಕ್ಕೆ ಅಡ್ಡಿಪಡಿಸುವುದನ್ನು ನಿಷೇಧಿಸುತ್ತದೆ. ಹಲ್ಲೆ ನಡೆಸುವವರು, ಬೆದರಿಕೆ ಒಡ್ಡುವವರಿಗೆ ಆರು ತಿಂಗಳಿನಿಂದ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷದವರೆಗೆ ದಂಡ ವಿಧಿಸಲು ಈ ಮಸೂದೆ ಅವಕಾಶ ಕಲ್ಪಿಸಲಿದೆ. ಈ ಕಾಯ್ದೆಯ ಅಡಿಯಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆಯನ್ನು ವಿಶೇಷ ನ್ಯಾಯಾಲಯಗಳ ಮೂಲಕ ನಡೆಸಲಾಗುತ್ತದೆ.

Ad Widget . Ad Widget .

ಯಾವುದೇ ಅಪರಾಧ ಪ್ರಕರಣದಲ್ಲಿ ವಕೀಲರ ಬಂಧನ ಆದರೆ ಸದರಿ ವಕೀಲ ಸದಸ್ಯನಾಗಿರುವ ವಕೀಲರ ಸಂಘದ ಅಧ್ಯಕ್ಷ ಅಥವಾ ಕಾರ್ಯದರ್ಶಿಗೆ 24 ಗಂಟೆಗಳೊಳಗೆ ಪೆÇಲೀಸರು ಮಾಹಿತಿ ನೀಡಬೇಕೆಂಬ ಅಂಶವೂ ಮಸೂದೆಯಲ್ಲಿ ಇದ್ದು, ವಕೀಲರ ಬಂಧನದ ಬಳಿಕ ಬಾರ್ ಕೌನ್ಸಿಲ್‍ಗೆ ಮಾಹಿತಿ ನೀಡುವುದು, ಪರಿಹಾರ ಮತ್ತಿತರ ಅಂಶಗಳನ್ನು ನಿಯಮಗಳಲ್ಲಿ ಸ್ಪಷ್ಟಪಡಿಸುವುದಾಗಿ ಕಾನೂನು ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು. ಬಳಿಕ ಮಸೂದೆಗೆ ಅಂಗೀಕಾರ ನೀಡಲಾಯಿತು.

Ad Widget . Ad Widget .

Leave a Comment

Your email address will not be published. Required fields are marked *