ಕೇರಳದಲ್ಲಿ ಹೆಚ್ಚಾಗ್ತಿದೆ ಕೊರೊನಾ| ಜನಸಂಚಾರ ನಿರ್ಬಂಧ, ಲಾಕ್ ಡೌನ್ ಸಾಧ್ಯತೆ

ಸಮಗ್ರ ನ್ಯೂಸ್: ದೇಶವನ್ನೇ ಕಾಡಿದ್ದ ಸಾಂಕ್ರಾಮಿಕ ರೋಗ ಕೊರೋನಾ ಮತ್ತೆ ಕೇರಳದಲ್ಲಿ ಉಲ್ಬಣವಾಗಿದ್ದು, ಜನ ಸಂಚಾರಕ್ಕೆ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

Ad Widget ... ..

ಈ ಹಿಂದೆಯೂ ಕೇರಳದಲ್ಲೇ‌ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿತ್ತು. ಈಗ ಮತ್ತೆ ಅದೇ ರಾಜ್ಯದಲ್ಲಿ ಸಾಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ನಿರಂತರ ಮುಂಜಾಗ್ರತೆ ವಹಿಸುವಂತೆ ಸೂಚನೆಗಳನ್ನು ನೀಡಲಾಗಿದೆ.

Ad Widget

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇದ್ದರೆ ಕೇರಳ ಸರ್ಕಾರವು ಸೂಕ್ಷ್ಮ ಪ್ರದೇಶಗಳಲ್ಲಿ ನಿರ್ಬಂಧಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ವಿಧಿಸಬಹುದು ಎಂದು ಹೇಳಲಾಗುತ್ತಿದೆ. ಕೇವಲ ಒಂದು ತಿಂಗಳಲ್ಲಿ ಕೇರಳದಲ್ಲಿ ಸಕ್ರಿಯ ಪ್ರಕರಣಗಳು 33 ರಿಂದ 768 ಕ್ಕೆ ಏರಿಕೆಯಾಗಿದ್ದು ಆತಂಕವನ್ನು ಉಂಟುಮಾಡಿದೆ.

Leave a Comment

Your email address will not be published. Required fields are marked *