Ad Widget .

ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಕೇಕ್ ಶೋ/ ವಿವಿಧ ಮಾದರಿಯ ಕೇಕ್‍ಗಳು ವೀಕ್ಷಣೆಗೆ ಲಭ್ಯ

ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನಿಂದ ಜನವರಿ 1ರ ವರೆಗೆ ಯುಬಿ ಸಿಟಿ ಸಮೀಪದ ಸೇಂಟ್ ಜೋಸೆಫ್ ಶಾಲೆಯ ಮೈದಾನದಲ್ಲಿ ‘ ಕೇಕ್ ಶೋ’ ನಡೆಯಲಿದೆ.

Ad Widget . Ad Widget .

ಕೇಕ್ ತಯಾರಿಕೆಯ ಕೆಲಸಗಳನ್ನು ಕಳೆದ ಆರು ತಿಂಗಳಿನಿಂದ ನಡೆಸಲಾಗಿದ್ದು, ಈ ಬಾರಿ ವಿಶೇಷವಾಗಿ ಥಿಂಕ್ ಲೋಕಲ್ – ಆಯಕ್ಟ್ ಗ್ಲೋಬಲ್ ಪರಿಕಲ್ಪನೆಯಲ್ಲಿ ಕೇಕ್ ಪ್ರದರ್ಶನಕ್ಕೆ ಜಾಗತಿಕ ವಿನ್ಯಾಸದ ಟಚ್ ನೀಡಲಾಗಿದೆ. ಚಿಕ್ಕಮಕ್ಕಳಿಂದ ಹಿಡಿದು ಹಿರಿಯರ ಅಭಿರುಚಿಗೆ ತಕ್ಕಂತೆ ವಿನ್ಯಾಸ ರಚಿಸಲಾಗಿದ್ದು, ಈ ಬಾರಿಯ ಕ್ರಿಸ್‍ಮಸ್ -ಹೊಸ ವರ್ಷದ ವಿಶ್ವದ ಅತಿದೊಡ್ಡ ಕೇಕ್‍ಗಳಾಗಿ ಗುರುತಿಸಿಕೊಳ್ಳಲಿದೆ ಎಂದು ಕೇಕ್ ಶೋ ಆಯೋಜಕ ಜಿ.ಮನೀಶ್ ಮಾಹಿತಿ ನೀಡಿದ್ದಾರೆ.

Ad Widget . Ad Widget .

3ಡಿ ಸಕ್ಕರೆ – ಕೇಕ್ ರಚನೆಯ ಥೀಮ್‍ನಲ್ಲಿ ಒಂದು ಆಕಾರ ನೀಡಲಾಗುತ್ತದೆ. ಸುಮಾರು 16 ಮಂದಿಯ ತಂಡದಿಂದ 23 ಪ್ರಕಾರದ ಕೇಕ್ ತಯಾರಿಸಲಾಗಿದೆ. ಇದಕ್ಕಾಗಿ ಸುಮಾರು 6,062 ಕೆ.ಜಿ.ಗೂ ಹೆಚ್ಚಿನ ಕೇಕ್ ಸಕ್ಕರೆ ಬಳಕೆ ಮಾಡಲಾಗಿದೆ. ಕೇಕ್ ಪ್ರದರ್ಶನದಲ್ಲಿ ಸಂಸತ್ತಿನ ಸೊಬಗು, ಕುದುರೆ ಮೇಲೆ ಕುಳಿತ ಶಿವಾಜಿ ಮಹಾರಾಜ, ದಿ ನೇಕೆಡ್ ರೆಡ್ ವೆಲ್ವೆಟ್, ಸಕ್ಕರೆ ಶಿಲ್ಪಕಲೆಯಲ್ಲಿ ಚಂದ್ರಯಾನ, ಬದಲಾಗುತ್ತಿರುವ ಡಾಲ್ ಕೇಕ್, ಮೊಸಳೆ, ಬೀಚ್, ಬಸ್ ಮಾದರಿ ಸೇರಿದಂತೆ ಹಲವು ರೀತಿಯ ಕೇಕ್‍ಗಳು ಶೋ ನಲ್ಲಿ ಇರಲಿವೆ ಎಂದು ಹೇಳಿದ್ದಾರೆ.

ಇಂದಿನಿಂದ ಒಟ್ಟು 18 ದಿನ ಕೇಕ್ ಶೋ ಇರಲಿದ್ದು, ನಿತ್ಯ ಬೆಳಗ್ಗೆ 11 ರಿಂದ ರಾತ್ರಿ 9 ರವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮನೀಶ್ ತಿಳಿಸಿದ್ದಾರೆ.

Leave a Comment

Your email address will not be published. Required fields are marked *