ಸಮಗ್ರ ನ್ಯೂಸ್: ನ್ಯೂ ಇಯರ್ ಪಾರ್ಟಿ ಮಾಡಬೇಕು ಎಂಬ ಗುಂಗಿನಲ್ಲಿದ್ದವರಿಗೆ ಶಾಕ್ ಕಾದಿದೆ. ದಿನನಿತ್ಯ ಬಳಕೆ ವಸ್ತುಗಳು ಈಗಾಗಲೇ ಗಗನಕ್ಕೇರಿವೆ. ಒಂದು ಕಡೆ ಸರ್ಕಾರ ಜನರ ಮೂಗಿಗೆ ತುಪ್ಪ ಸವರಿದಂತೆ, ಈ ಕಡೆ ಉಚಿತ ಭಾಗ್ಯ ಕೊಟ್ಟು ಮತ್ತೊಂದು ಕಡೆ ದರ ಏರಿಸಿ ಹೊರೆಯನ್ನು ಜನರ ಮೇಲೆಯೇ ಹಾಕುತ್ತಿದೆ.
ಸರ್ಕಾರದ ಖಜಾನೆಗೆ ಬೂಸ್ಟರ್ ಡೋಸ್ ಕೊಟ್ಟಿದ್ದ ಮದ್ಯಪ್ರಿಯರಿಗೆ ಇದೀಗ ಮತ್ತೊಮ್ಮೆ ರೇಟ್ ಹೈಕ್ ಬಿಸಿ ತಟ್ಟಲಿದೆ.
ಆರಂಭದಲ್ಲೇ ಸರ್ಕಾರ ಆರ್ಥಿಕ ಮೂಲವಾದ ಅಬಕಾರಿ ಸುಂಕದ ದರವನ್ನು 20 ಶೇ ಹೆಚ್ಚಳ ಮಾಡಿತ್ತು. ಇದೀಗ ಮತ್ತೆ ಜನವರಿ 1ರಿಂದ ಮದ್ಯ ದರ ಏರಿಕೆಗೆ ಸೂಚನೆ ನೀಡಲಾಗಿದೆ. ಹಾಲಿ ಓಟಿ 180 ಎಂಎಲ್‌ಗೆ 100 ರೂಪಾಯಿ ಇದ್ದು, ಜ.1 ರಿಂದ ಓಟಿ ಬೆಲೆ 123 ರೂ.ಗೆ ಏರಿಕೆಯಾಗಲಿದೆ. ಬಿಪಿ ದರ ಹಾಲಿ 123 ರೂ. ಇದ್ದು ಜನವರಿಯಿಂದ 159 ರೂ. ಆಗಲಿದೆ. 8ಪಿಎಂ ದರ ಹಾಲಿ 100 ರೂ. ಇದ್ದು 123 ರೂ.ಗೆ ಏರಲಿದೆ.
ಆರಂಭದಲ್ಲೇ ಸರ್ಕಾರ ಆರ್ಥಿಕ ಮೂಲವಾದ ಅಬಕಾರಿ ಸುಂಕದ ದರವನ್ನು 20% ಹೆಚ್ಚಳ ಮಾಡಿತ್ತು. ಈಗ ಹೊಸ ವರ್ಷದ ಪಾರ್ಟಿ ಮೂಡ್‌ನಲ್ಲಿದ್ದವರಿಗೆ ಮತ್ತೆ ಮದ್ಯದ ಕಂಪನಿಗಳು ಶಾಕ್ ನೀಡುವ ಮೂಲಕ ಕಿಕ್ ಇಳಿಸಿವೆ.
ರಾಜ್ಯದ ಕೆಳ ವರ್ಗದ ಜನ ಅತೀ ಹೆಚ್ಚು ಸೇವಿಸುವ ಮದ್ಯದ ದರ ಏರಿಕೆಗೆ ಚಿಂತನೆ ನಡೆದಿದೆ. ಜನವರಿ 1ರಿಂದ ದರ ಏರಿಕೆ ಮಾಡುವಂತೆ ಬಾರ್ ಮಾಲೀಕರಿಗೆ ಕಂಪನಿಗಳಿಂದ ಸೂಚನೆ ನೀಡಿದೆ. ಕಂಪನಿಗಳ ಉತ್ಪಾದನಾ ವೆಚ್ಚ, ಸರಕು ಸಾಗಣೆ ವೆಚ್ಚಗಳು ಹೆಚ್ಚಾಗಿರುವ ಕಾರಣ ದರ ಏರಿಕೆ ಅಗತ್ಯವಾಗಿದ್ದು, ಈ ಕಾರಣ ಗ್ರಾಹಕರ ಮೇಲೆ ಹೊರೆ ಹಾಕಲೇಬೇಕಾದ ಹಿನ್ನೆಲೆ ದರ ಏರಿಕೆಗೆ ಕಂಪನಿಗಳು ನಿರ್ಧಾರ ಮಾಡಿವೆ.
ಈ ಸಂಬಂಧ ಬಾರ್ ಮಾಲೀಕರಿಗೆ ಅಂದರೆ ಎಂಆರ್‌ಪಿ ಬಾರ್ ಮಾಲೀಕರಿಗೆ ಮೆಸೇಜ್ ಮೂಲಕ ಕಂಪನಿಗಳು ಮಾಹಿತಿ ರವಾನೆ ಮಾಡಿದ್ದು, ಸೂಚನೆಯಂತೆ ದರ ನಿಗದಿಯಂತೆ ಸಹಕರಿಸುವಂತೆ ಮನವಿ ಮಾಡಿವೆ.
ಬಿಜೆಪಿ (BJP) ಸರ್ಕಾರ ಮಂಡಿಸಿದ ಬಜೆಟ್‍ನಲ್ಲಿ ಅಬಕಾರಿ ಇಲಾಖೆಯಿಂದ 35,000 ಕೋಟಿ ರೂ. ಗುರಿ ನೀಡಲಾಗಿತ್ತು. ಆದರೆ ಸಿದ್ದರಾಮಯ್ಯ ಅವರು ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ 36,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯನ್ನು ನೀಡಿದ್ದಾರೆ.