Ad Widget .

ಪುತ್ತೂರು: ಡೆತ್ ನೋಟ್ ಬರೆದಿಟ್ಟು ಯುವ ವಿಜ್ಞಾನಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಯುವ ವಿಜ್ಞಾನಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನ ಆರ್ಯಾಪುವಿನಲ್ಲಿ ದ.14 ರಂದು ನಡೆದಿದೆ.

Ad Widget . Ad Widget .

ಆರ್ಯಾಪು ಕಲ್ಲರ್ಪೆಯ ಭರತ್ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಹೈದರಾಬಾದಿನ DRDOದಲ್ಲಿ ವಿಜ್ಞಾನಿಯಾಗಿದ್ದ ಭರತ್ ಎರಡು ದಿನದ ಹಿಂದೆ ಮನೆಗೆ ಬಂದಿದ್ದು, ಬೆಳಿಗ್ಗೆ ತೋಟದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಭರತ್ ವಿದ್ಯಾಭ್ಯಾಸ ಮುಗಿಸಿ ಕಳೆದ 2 ತಿಂಗಳ ಹಿಂದೆಯಷ್ಟೇ ಉದ್ಯೋಗ ಪಡೆದಿದ್ದರು.

Ad Widget . Ad Widget .

ಡೆತ್ ನೋಟ್ ಪತ್ತೆ : ಭರತ್ ಗೆ ನಿನ್ನೆ ರಾತ್ರಿ ಒಂದು ಕರೆ ಬಂದಿದ್ದು, ನಂತರ ಬೆಳ್ಳಂಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಡೆತ್ ನೋಟ್ ಬರೆದಿದ್ದು, ಅದರಲ್ಲಿ AKDS ಬರೆದು ಅದರ ಫುಲ್ ಫಾರ್ಮ್ ಬರೆದಿದ್ದಾರೆ ಮತ್ತು ತನ್ನ ದೇಹದ ಪ್ರಮುಖ ಅಂಗಗಳನ್ನು ದಾನ ಮಾಡುವಂತೆ ಬರೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *