Ad Widget .

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ/ ವಾಹನ ಪಾರ್ಕಿಂಗ್ ಹೀಗೆ ಮಾಡಿ

ಸಮಗ್ರ ನ್ಯೂಸ್: ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾ ಷಷ್ಠಿ ಜಾತ್ರೆ ಪುಯುಕ್ತ ಉತ್ಸವ ಡಿ.17 ಮತ್ತು 18ರಂದು ನಡೆಯಲಿದ್ದು, ಆಗಮಿಸುವ ಭಕ್ತಾಧಿಗಳು ವಾಹನ ಪಾರ್ಕಿಂಗ್ ಮಾಡಲು ಪೋಲಿಸ್ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಡಿ.17 ಸಂಜೆ 4 ಗಂಟೆಯಿಂದ ಡಿ.18 ಸಂಜೆ 4 ಗಂಟೆಯ ತನಕ ಭಕ್ತಾದಿಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಭಕ್ತಾದಿಗಳು ಮತ್ತು ಸಳೀಯರು ಸಹಕರಿಸಬೇಕೆಂದು, ಸುಬ್ರಹ್ಮಣ್ಯ ಪೋಲಿಸ್ ಠಾಣಾಧಿಕಾರಿಯವರು ಪತ್ರಿಕಾ ಪ್ರಕಟಣಿಯಲ್ಲಿ ತಿಳಿಸಿರುತ್ತಾರೆ. ಪಾರ್ಕಿಂಗ್ ವ್ಯವಸ್ಥೆ ಈ ಕೆಳಗಿನಂತೆ ಇದೆ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಗುಂಡ್ಯ- ಉಪ್ಪಿನಂಗಡಿ- ಕಡಬ- ಪುತ್ತೂರು, ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್ ಗಳಿಗೆ ಸುಬ್ರಹ್ಮಣ್ಯದ ವಲ್ಲೀಶ ಸಭಾ ಭವನದ ಬಳಿ, ಲಘು ವಾಹನಗಳಿಗೆ ಕುಮಾರಧಾರ ಹೆಲಿಪ್ಯಾಡ್, ಮತ್ತು ಸುಬ್ರಹ್ಮಣ್ಯ ಪದವೀ ಪೂರ್ವ ಕಾಲೇಜು ಮೈದಾನ ಮತ್ತು ದ್ವಿಚಕ್ರ ವಾಹನಗಳಿಗೆ ಸುಬ್ರಹ್ಮಣ್ಯ ಪದವೀ ಕಾಲೇಜು ಮೈದಾನ. ಮತ್ತು ಬಿಲದ್ವಾರದ ಎದುರಿನ ಮೈದಾನ ಪಾರ್ಕಿಂಗ್ ಸ್ಥಳವಾಗಿದೆ.

Ad Widget . Ad Widget . Ad Widget .

ಸುಳ್ಯ ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್ ಗಳಿಗೆ ಇಂಜಾಡಿ ಫಾರೆಸ್ಟ್ ವಸತಿ ಗೃಹದ ಬಳಿ ಮೈದಾನ, ದ್ವಿಚಕ್ರವಾಹನಗಳಿಗೆ ಸುಬ್ರಹ್ಮಣ್ಯ ಸವಾರಿ ಮಂಟಪದ ಬಳಿ ಮೈದಾನ ಮತ್ತು ಲಘುವಾಹನಗಳಿಗೆ ಸವಾರಿ ಮಂಟಪದ ಬಳಿ ಪಾರ್ಕಿಂಗ್ ಸ್ಥಳ

ರಿಕ್ಷಾ ಚಾಲಕರು ಪ್ರಯಾಣಿಕರನ್ನು ಕುಮಾರಧಾರದಿಂದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಎದುರಿನ ತನಕ ಸಾಗಾಟ ಮಾಡಬಹುದಾಗಿದೆ.

ಡಿ.17 ರಂದು ಸಂಜೆ 4 ಗಂಟೆಯಿಂದ ಎಲ್ಲಾ ವಾಹನಗಳು ಸಂಬಂಧಿಸಿದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಬೇಕಾದುದುರಿಂದ ಲಾಡ್ಜ್ ಗಳಲ್ಲಿ ರೂಂ ಗಳನ್ನು ಕಾದಿರಿಸಿದವರು ಸಂಜೆ 04-00 ಗಂಟೆಯ ಒಳಗಡೆ ಸಂಬಂದಿಸಿದ ಲಾಡ್ಜ್ ಗಳಿಗೆ ಬರತಕ್ಕದ್ದು ಮತ್ತು ಕುಮಾರಧಾರದಿಂದ ಸವಾರಿ ಮಂಟಪದ ತನಕ ರಸ್ತೆಯ ಎರಡು ಬದಿಗಳಲ್ಲಿ ವಾಹನ ಪಾರ್ಕಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Comment

Your email address will not be published. Required fields are marked *