Ad Widget .

ಸಮ್ಮಕ್ಕ ಸಾರಕ್ಕ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ/ ಸಂಸತ್ತಿನಲ್ಲಿ ಅಂಗೀಕಾರ

ಸಮಗ್ರ ನ್ಯೂಸ್: ತೆಲಂಗಾಣದಲ್ಲಿ ಸಮ್ಮಕ್ಕ ಸಾರಕ್ಕ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಆರಂಭಿಸಲು ಅವಕಾಶ ಕಲ್ಪಿಸುವ ಮಸೂದೆಗೆ ಸಂಸತ್ತು ಅಂಗೀಕಾರ ನೀಡಿದೆ. ಈ ಮಸೂದೆಗೆ ಲೋಕಸಭೆಯು ಕಳೆದ ವಾರ ಅಂಗೀಕಾರ ನೀಡಿತ್ತು.

Ad Widget . Ad Widget .

ಸಂಸತ್ತಿನಲ್ಲಿ ಭದ್ರತಾ ಲೋಪ ಆಗಿರುವ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ನೀಡಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ನಡೆಸಿದ್ದ ಸಂದರ್ಭದಲ್ಲಿ, ರಾಜ್ಯಸಭೆಯು ಈ ಮಸೂದೆಗೆ ಬುಧವಾರ ಧ್ವನಿಮತದ ಮೂಲಕ ಅಂಗೀಕಾರ ನೀಡಿತು.

Ad Widget . Ad Widget .

ಆಂಧ್ರಪ್ರದೇಶ ಮರುವಿಂಗಡಣೆ ಕಾಯ್ದೆ 2014ರ ಅನ್ವಯ, ತೆಲಂಗಾಣದಲ್ಲಿ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯವನ್ನು ಸ್ಥಾಪಿಸಲೇಬೇಕಿದೆ ಎಂದು ವಿಶ್ವವಿದ್ಯಾಲಯ ಕುರಿತ ಮಸೂದೆ ಮೇಲಿನ ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿ ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ತಿಳಿಸಿದರು.

Leave a Comment

Your email address will not be published. Required fields are marked *