Ad Widget .

ಸುಳ್ಯ: ಗಾಳಿಯಲ್ಲಿ ತೇಲಾಡಿ ವಿಸ್ಮಯ ಸೃಷ್ಟಿಸಿದ ಜಲ್ಲಿಕಲ್ಲು!!

ಸಮಗ್ರ ನ್ಯೂಸ್: ಜಲ್ಲಿಕಲ್ಲೊಂದು‌ ಗಾಳಿಯಲ್ಲಿ ತೇಲಾಡಿ ವಿಸ್ಮಯ ಸೃಷ್ಟಿಸಿದ ವಿಚಿತ್ರ ಘಟನೆಯೊಂದು ಸುಳ್ಯ ತಾಲೂಕಿನ ಕಳಂಜ ಗ್ರಾಮದ ತಂಟೆಪ್ಪಾಡಿಯಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Ad Widget . Ad Widget .

ಇಲ್ಲಿನ ಕಾಲೇಜು ವಿದ್ಯಾರ್ಥಿನಿಯೋರ್ವರು‌ ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ.

Ad Widget . Ad Widget .

ತಂಟೆಪ್ಪಾಡಿ ಪುಟ್ಟಣ್ಣ ಗೌಡ ಅವರ ಪುತ್ರಿ ಧನುಶ್ರೀ ಕೆಲವು ದಿನಗಳ ಹಿಂದೆ ಬೆಳಗ್ಗೆ ಪುತ್ತೂರಿಗೆ ಕಾಲೇಜಿಗೆಂದು ತೆರಳುತ್ತಿರುವಾಗ ರಸ್ತೆಯಲ್ಲಿ ಜಲ್ಲಿ ಕಲ್ಲೊಂದು ತೇಲಾಡುವ ದೃಶ್ಯ ಕಂಡು ಬಂದಿದೆ.‌ ಕೂಡಲೇ ಆಕೆ ಈ ದೃಶ್ಯವನ್ನು ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.‌

ಕೆಲವು ಸೆಕೆಂಡ್ ಹಾರಾಡಿ‌ ಕಲ್ಲು ಕೆಳಗೆ ಬಿದ್ದಿದ್ದು ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ನಡೆದ ಘಟನೆ ಹಲವು ಚರ್ಚೆ ಹುಟ್ಟುಹಾಕಿದೆ. ದೈವಿಕ ಶಕ್ತಿಯ ಪ್ರಭಾವದಿಂದ ಈ ಘಟನೆ ನಡೆದಿರುವುದಾಗಿ ಹಲವರು ಜಾಲತಾಣಗಳಲ್ಲಿ ವಾದ ಮಂಡಿಸುತ್ತಿದ್ದಾರೆ. ಒಟ್ಟಾರೆ ಈ ವಿಚಿತ್ರ ಘಟನೆ ವಿಸ್ಮಯ ಮೂಡಿಸಿದೆ.

Leave a Comment

Your email address will not be published. Required fields are marked *