ಸಮಗ್ರ ನ್ಯೂಸ್: ಲೋಕಸಭೆಯಲ್ಲಿ ಭಾರೀ ಭದ್ರತಾ ಲೋಪವಾಗಿದೆ. ಎಂದು ನಡೆದಿರದಂಥ ಒಂದು ಘಟನೆ ನಡೆದಿದೆ. ಲೋಕಸಭೆಯಲ್ಲಿದ್ದ ಸಚಿವರೆಲ್ಲ ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ. ನೀಲಿ ಬಣ್ಣದ ಜಾಕೆಟ್ ಧರಿಸಿದ ಯುವಕನೊಬ್ಬ ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಸದನದ ಸುತ್ತಲೂ ಓಡಲು ಪ್ರಾರಂಭಿಸಿದ್ದಾನೆ. ಬಳಿಕ ಆತನ ಜೊತೆ ಮತ್ತೊಬ್ಬ ಸೇರಿಕೊಂಡಿದ್ದು ಇಬ್ಬರೂ ಟಿಯರ್ ಗ್ಯಾಸ್ ಎಸೆದು ಆತಂಕ ಸೃಷ್ಟಿಸಿದ್ದಾರೆ. ಈ ಘಟನೆ ನಡೆಯುತ್ತಿದ್ದಂತೆ ಅಲ್ಲಿ ನೆರೆದಿದ್ದ ಸಂಸದರು ದಿಕ್ಕಾಪಾಲಾಗಿ ಓಡಿದ್ದಾರೆ. ಮಧ್ಯಾಹ್ನ 1.15 ಸುಮಾರಿಗೆ ಈ ಘಟನೆ ನಡೆದಿದೆ.
22 ವರ್ಷಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತಂತೆ. ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಸಾಗರ್ ಎಂಬ ವ್ಯಕ್ತಿಯೊಬ್ಬ ಇದ್ದಕ್ಕಿದ್ದ ಹಾಗೇ ಸದನದ ಬಾವಿಗೆ ಹಾರಿದ್ದಾನೆ. ಇವರನ್ನು ಕಂಡ ಸಂಸದರು ಹೆದರಿ ಹೊರಗೆ ಓಡಿ ಬಂದಿದ್ದಾರೆ. ಮೈಸೂರು ಮೂಲದ ವ್ಯಕ್ತಿ ಅಂತ ಹೇಳಿಕೊಂಡು ಈ ವ್ಯಕ್ತಿ ಪಾಸ್ ಪಡೆದುಕೊಂಡಿದ್ದರಂತೆ. ಶೂನಲ್ಲಿ ಟಿಯರ್ ಗ್ಯಾಸ್ ಇಟ್ಟುಕೊಂಡು ಒಳಗೆ ಬಂದಿದ್ದರಂತೆ. ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದಿದ್ದರು. ಒಳಗೆ ಬಂದು ವೀಕ್ಷಕರ ಗ್ಯಾಲರಿಯಲ್ಲಿ ಕುಳಿತುಕೊಂಡಿದ್ದರು. ಇದ್ದಕ್ಕಿದ್ದ ಹಾಗೇ ಸದನದ ಬಾವಿ ಕಡೆಗೆ ಎಗರಿ ಶೂನಲ್ಲಿದ್ದ ಟಿಯರ್ ಗ್ಯಾಸ್ ಎಸೆದಿದ್ದಾರೆ. ಓರ್ವ ಯುವತಿ ಹಾಗೂ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆ ವೀಕ್ಷಕರು ಕೂರುವ ಗ್ಯಾಲರಿಯಿಂದ ಚೇಂಬರ್‌ಗೆ ಜಿಗಿದಿದ್ದಾರೆ. ಇದರಿಂದ ಕಲಾಪಕ್ಕೆ ಅಡ್ಡಿಯಾಯಿತು. ತಕ್ಷಣವೇ ಎಚ್ಚೆತ್ತ ಸ್ಪೀಕರ್ ಸಭೆಯನ್ನು ಮುಂದೂಡಿದರು. ಕೂಡಲೇ ಆ ಇಬ್ಬರನ್ನು ಬಂಧಿಸಲಾಗಿದೆ. ಹೀಗಾಗಿ ಕಲಾಪವನ್ನು ಮುಂದೂಡಲಾಗಿದೆ. ಸಂಸತ್ ಭವನದ ಮೇಲಿನ ದಾಳಿಯ ವರ್ಷಾಚರಣೆಯಂದೇ ಈ ಭದ್ರತಾ ಲೋಪ ಆಗಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ದೇಶದಲ್ಲೇ ಅತ್ಯಂತ ಸುರಕ್ಷಿತ ಸ್ಥಳ ಎನ್ನಲಾದ ಸಂಸತ್ ಭವನದಲ್ಲಿ ಈ ಗದ್ದಲ ನಡೆದ ನಂತರ ಸಂಸತ್ತಿನ ಭದ್ರತೆಯಲ್ಲಿ ನಿರತರಾಗಿದ್ದ ದೆಹಲಿ ಪೊಲೀಸ್ ಸಿಬ್ಬಂದಿ ಬಿಗಿ ಭದ್ರತೆ ಮಾಡಿದು. ಇದೀಗ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಾರ್ಲಿಮೆಂಟ್ ನಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಚರ್ಚೆಯು ನಡೆಯುತ್ತಿದೆ.