Ad Widget .

ಡಿ.16: ಸೌಜನ್ಯಳ‌ ನ್ಯಾಯಕ್ಕಾಗಿ ಗುತ್ತಿಗಾರಿನಲ್ಲಿ ಬೃಹತ್ ಪ್ರತಿಭಟನೆ ಸಭೆ| ಬ್ಯಾನರ್ಗಳ ಪೈಪೋಟಿ, ನಿರೀಕ್ಷೆಗೂ ಮೀರಿದ ಸ್ಪಂದನೆ, ಸಾವಿರಾರು ಜನರ ಭಾಗಿ ನಿರೀಕ್ಷೆ

ಸಮಗ್ರ ನ್ಯೂಸ್: ಸೌಜನ್ಯ ಹೋರಾಟ ಸಮಿತಿ ಗುತ್ತಿಗಾರು, ಇದರ ವತಿಯಿಂದ ಡಿ.16 ರಂದು ಸುಳ್ಯ ತಾಲೂಕಿನ ಗುತ್ತಿಗಾರು ದೇವಿಸಿಟಿ ಆವರಣದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ಸಭೆ ಯಶಸ್ಸಿನ ಸಿದ್ಧತಾ ಕಾರ್ಯಗಳು ಹುರುಪಿನಿಂದ ನಡೆಯುತ್ತಿದ್ದು ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದೆ.

Ad Widget . Ad Widget .

ದ.ಕ.ಜಿಲ್ಲೆಯ ಗಡಿಯಂಚಿನ ಗ್ರಾಮವಾದ ಕಲ್ಮಕಾರು ನಿಂದ ಹಿಡಿದು ಮರ್ಕಂಜದವರೆಗೆ ಮಡಪ್ಪಾಡಿಯಿಂದ , ಪಂಜ, ಬಳ್ಪ ಪರಿಸರದವರೆಗೆ ಕಾರ್ಯಕ್ರಕ್ಕೆ ಶುಭಕೋರಿ ನೂರಾರು ಬ್ಯಾನರ್ಗಳು, ಸಮಿತಿ ಮುಖಂಡರ ಗ್ರಾಮ ಭೇಟಿ, ಕಾರ್ಯಕ್ರಮಕ್ಕೆ ಅನುಮತಿ ಮತ್ತಿತರ ಚಟುವಟಿಕೆಗಳು ಮುಕ್ತಾಯ ಹಂತದಲ್ಲಿದೆ. ಕೊನೆಯ ಹಂತದ ವಾಹನ ಪ್ರಚಾರಕಾರ್ಯ, ಪಾರ್ಕಿಂಗ್, ವೇದಿಕೆ ನಿರ್ಮಾಣದಂತಹ ಪ್ರಮುಖ ಕಾರ್ಯಗಳ ಸಿದ್ದತೆಗೆ ಸಮಿತಿ ಗಮನಹರಿಸಿದೆ.

Ad Widget . Ad Widget .

ಹಲವು ಹೋರಾಟಗಾರರ ಆಗಮನ:
ಕಾರ್ಯಕ್ರಮಕ್ಕೆ ಪ್ರಮುಖ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟೆಣ್ಣವರ್, ತುಳು ದೈವರಾಧಾನೆಯ ವಿಮರ್ಶಕರಾದ ತಮ್ಮಣ್ಣ ಶೆಟ್ಟಿ, ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ ಹಾಗು ಸೌಜನ್ಯಳ ತಾಯಿ ಕುಸುಮಾವತಿ ಚಂದಪ್ಪ ಗೌಡ, ವಕೀಲರಾದ ಮೋಹಿತ್ ಭಾಗವಹಿಸಲಿದ್ದಾರೆ.
ಬೃಹತ್ ಜನಸ್ತೋಮ..?
ಈಗಾಗಲೆ ನಿರೀಕ್ಷೆಗೂ ಮೀರಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಮುಖ ಹೋರಾಟಗಾರರ ಆಗಮನಕ್ಕೆ ಶುಭಕೋರಿ ಅಳವಡಿಸಲಾದ ಬ್ಯಾನರ್ ಗಳು ಮತ್ತು ಸಾರ್ವಜನಿಕರ ಸ್ಪಂದನೆಗಳನ್ನು ಗಮನಿಸಿದರೆ
ತಾಲೂಕಿನಲ್ಲಿ ನಡೆದಿರುವ ಇದುವರೆಗಿನ ಸೌಜನ್ಯ ಪರ ಹೋರಾಟ ಸಭೆಗಿಂತ ಬೃಹತ್ ಜನಸ್ತೋಮ ಆಗಮಿಸುವ ಮುನ್ಸೂಚನೆ ದೊರೆತಿದೆ.

Leave a Comment

Your email address will not be published. Required fields are marked *